ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್ ಕಾಂಗ್, ಚೀನಾಗೆ ಹೋಗುವ ಮುನ್ನ ಎಚ್ಚರ: US ಹೊಸ ನಿಯಮ!

|
Google Oneindia Kannada News

ವಾಶಿಂಗ್ಟನ್, ಸಪ್ಟೆಂಬರ್.15: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಚೀನಾವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ದೂಷಿಸುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನೆ ಸಂಬಂಧ ಕ್ಷಿಣಿಸುತ್ತಿದೆ. ಈ ಮಧ್ಯೆ ಹಾಂಗ್ ಕಾಂಗ್ ಮತ್ತು ಚೀನಾಗೆ ಪ್ರಯಾಣಿಸಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸಲಹಾ ಎಚ್ಚರಿಕೆಯನ್ನು ಹೊರಡಿಸಿದೆ.

ನಿರಂಕುಶ ತಡೆ ಅಥವಾ ಸ್ಥಳೀಯ ಕಾನೂನುಗಳನ್ನು ಅನಿಯಂತ್ರಿತವಾಗಿ ಜಾರಿಗೊಳಿಸುವ ಅಪಾಯದ ಹಿನ್ನೆಲೆ ಹೊಸ ಸಲಹಾ ಎಚ್ಚರಿಕೆಯನ್ನು ಅಮೆರಿಕಾ ತನ್ನ ಪ್ರಜೆಗಳಿಗೆ ನೀಡಿದೆ. ಕಳೆದ ಜೂನ್‌ ತಿಂಗಳಿನಲ್ಲೇ ಬೀಜಿಂಗ್ ನಿಂದ ಕಟ್ಟುನಿಟ್ಟಾದ ಹೊಸ ರಾಷ್ಟ್ರೀಯ ಭದ್ರತಾ ಕಾನೂನನ್ನು ಹಾಂಗ್ ಕಾಂಗ್‌ ಮೇಲೆ ಹೇರಲಾಗಿದೆ. ಅಂದಿನಿಂದ ಉಲ್ಬಣಗೊಂಡಿರುವ ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಸಲಹಾ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಈ 5 ಸರಕುಗಳ ಆಮದಿಗೆ ನಿರ್ಬಂಧ ವಿಧಿಸಿದ ಅಮೆರಿಕಚೀನಾದ ಈ 5 ಸರಕುಗಳ ಆಮದಿಗೆ ನಿರ್ಬಂಧ ವಿಧಿಸಿದ ಅಮೆರಿಕ

ಕೊರೊನಾವೈರಸ್ ಸೋಂಕಿನ ಭೀತಿಯಲ್ಲಿ ಚೀನಾವನ್ನು ತೊರೆದ ವಿದೇಶಿಗರು ಚೀನಾಗೆ ಮತ್ತೆ ಮರಳುವಂತೆ ಒತ್ತಡ ಹೇರಲಾಗುತ್ತಿದೆ. ಒಂದು ಬಾರಿ ಚೀನಾಗೆ ತೆರಳಿದ್ದಲ್ಲಿ ನಂತರ ನಿರಂಕುಶವಾಗಿ ಅನಿಯಂತ್ರಿತ ಮತ್ತು ವಿದೇಶ ಪ್ರಯಾಣವನ್ನು ನಿರ್ಬಂಧಿಸುವ ಅಪಾಯವಿರುತ್ತದೆ ಎಂದು ಅಮೆರಿಕಾ ತನ್ನ ಪ್ರಜೆಗಳಿಗೆ ಎಚ್ಚರಿಸಿದೆ.

ಚೀನಾದಿಂದ ಒತ್ತಡ ನೀತಿ ಅನುಸರಿಸುವ ಅಪಾಯ ಹೆಚ್ಚು

ಚೀನಾದಿಂದ ಒತ್ತಡ ನೀತಿ ಅನುಸರಿಸುವ ಅಪಾಯ ಹೆಚ್ಚು

ಕೊರೊನಾವೈರಸ್ ಸೋಂಕು ಹರಡುವಿಕೆ ಕಾರಣ ಚೀನಾ ಎನ್ನುವುದು ಗೊತ್ತಿರುವ ವಿಚಾರ. ಇತ್ತೀಚಿಗಷ್ಟೇ ಮಹಾಮಾರಿಯನ್ನು ಉದ್ದೇಶಪೂರ್ವಕವಾಗಿ ವುಹಾನ್ ಪ್ರಯೋಗಾಲಯದಲ್ಲಿ ಸೃಷ್ಟಿಯಲಾಗಿತ್ತು ಎಂದು ವೈರಾಲಜಿಸ್ಟ್ ವೊಬ್ಬರು ದೂಷಿಸಿದ್ದರು. ಈ ಹಿನ್ನೆಲೆ ಹಲವು ರಾಷ್ಟ್ರಗಳ ಜೊತೆಗಿನ ಚೀನಾದ ಸಂಬಂಧ ಕ್ಷಿಣಿಸುತ್ತಿದೆ. ಹೀಗಾಗಿ ಸ್ವದೇಶಕ್ಕೆ ತೆರಳಿರುವ ಪ್ರಜೆಗಳು ಚೀನಾಗೆ ವಾಪಸ್ಸಾಗಲು ಅಲ್ಲಿನ ಸರ್ಕಾರವು ಒತ್ತಡ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ.

ಅಮೆರಿಕಾ ಪ್ರಜೆಗಳು ಚೀನಾಗೆ ಪ್ರಯಾಣಿಸಿದ್ದಲ್ಲಿ ಬಂಧನ ಎಚ್ಚರಿಕೆ

ಅಮೆರಿಕಾ ಪ್ರಜೆಗಳು ಚೀನಾಗೆ ಪ್ರಯಾಣಿಸಿದ್ದಲ್ಲಿ ಬಂಧನ ಎಚ್ಚರಿಕೆ

ಚೀನಾ ಮತ್ತು ಹಾಂಗ್ ಕಾಂಗ್ ಗೆ ಪ್ರಯಾಣಿಸಿದ ಮತ್ತು ಅಲ್ಲಿ ವಾಸಿಸುವ ಅಮೆರಿಕಾದ ಪ್ರಜೆಗಳನ್ನೇ ಯಾವುದೇ ಆಪಾದಿತ ಅಪರಾಧದ ಮಾಹಿತಿಯಿಲ್ಲದೇ ಬಂಧಿಸಬಹುದು. ಯುಎಸ್ ನಾಗರಿಕರನ್ನೇ ದೀರ್ಘಕಾಲದ ವರೆಗೂ ವಿಚಾರಣೆಗೊಳಪಡಿಸಬಹುದು. ಕಾನೂನು ಪ್ರಕ್ರಿಯೆಗಳಿಲ್ಲದೇ ಬಂಧನಕ್ಕೊಳಪಡಿಸಬಹುದು ಎಂದು ಸಲಹಾ ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಚೀನಾದಿಂದ ಹಾಂಗ್ ಕಾಂಗ್ ನಲ್ಲಿ ನಿಯಮ

ಚೀನಾದಿಂದ ಹಾಂಗ್ ಕಾಂಗ್ ನಲ್ಲಿ ನಿಯಮ

ಚೀನಾ ಸರ್ಕಾರವು ಹಾಂಗ್ ಕಾಂಗ್ ನಲ್ಲಿ "ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಪೊಲೀಸ್ ಮತ್ತು ಭದ್ರತಾ ಅಧಿಕಾರವನ್ನು ಚಲಾಯಿಸುತ್ತಿದೆ" ಎಂದು ಸಲಹೆಗಾರರು ಹೇಳಿದ್ದಾರೆ. ಅಲ್ಲದೇ ಹೊಸ ಶಾಸನದಲ್ಲಿ ಹಾಂಗ್ ಕಾಂಗ್ ಅಲ್ಲದ ನಿವಾಸಿಗಳು ಅಥವಾ ಹಾಂಗ್ ಕಾಂಗ್ ಹೊರಗಿನ ಸಂಸ್ಥೆಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಹಾಂಗ್ ಕಾಂಗ್ ನಲ್ಲಿರು ಸಂದರ್ಭದಲ್ಲಿ ಅಮೆರಿಕಾದ ಪ್ರಜೆಗಳು "ತಮ್ಮ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಸಲಹೆಗಾರರು ಎಚ್ಚರಿಸಿದ್ದಾರೆ.

ಅಮೆರಿಕಾ ಹಾಂಗ್ ಕಾಂಗ್ ನಡುವಿನ ಒಪ್ಪಂದ ರದ್ದು

ಅಮೆರಿಕಾ ಹಾಂಗ್ ಕಾಂಗ್ ನಡುವಿನ ಒಪ್ಪಂದ ರದ್ದು

ಕಳೆದ ತಿಂಗಳಷ್ಟೇ ಹಸ್ತಾಂತರ ನೀತಿ ಮತ್ತು ತೆರಿಗೆ ವಿನಾಯಿತಿ ಒಳಗೊಂಡಿರುವ ಮೂರು ದ್ವಿಪಕ್ಷೀಯ ಒಪ್ಪಂದಗಳನ್ನು ಅಮೆರಿಕಾ ಸ್ಥಗಿತಗೊಳಿಸಿತ್ತು. ಈ ಹಿಂದೆ ಬ್ರಿಟಿಷ್ ವಸಾಹತು 1997ರಲ್ಲಿ ಚೀನಾದ ಆಡಳಿತಕ್ಕೆ ನೀಡಿದ್ದ 50 ವರ್ಷಗಳ ವಿಶಾಲ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವಲ್ಲಿ ಬೀಜಿಂಗ್ ನಿಯಮವನ್ನು ಉಲ್ಲಂಘಿಸಿತ್ತು. ಚೀನಾದ ರಾಷ್ಟ್ರೀಯ ಭದ್ರತೆಯ ಕಾನೂನಿನ ಅಂಗೀಕಾರದ ನಂತರ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಂಗ್ ಕಾಂಗ್‌ನೊಂದಿಗಿನ ಹಸ್ತಾಂತರ ಒಪ್ಪಂದಗಳನ್ನು ಸ್ಥಗಿತಗೊಳಿಸಿವೆ.

Recommended Video

Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
ಚೀನಾ-ಅಮೆರಿಕಾದ ನಡುವಿನ ಬಾಂಧವ್ಯದಲ್ಲಿ ಬಿರುಕು

ಚೀನಾ-ಅಮೆರಿಕಾದ ನಡುವಿನ ಬಾಂಧವ್ಯದಲ್ಲಿ ಬಿರುಕು

ದಶಕಗಳ ಬಳಿಕ ಇತ್ತೀಚಿನ ಬೆಳವಣಿಗೆಗಳಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ಚೀನಾ ನಡುವಿನ ಬಾಂಧವ್ಯದಲ್ಲಿ ಬಿರುಕು ಸೃಷ್ಟಿಯಾಗಿದೆ. ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ, ತಂತ್ರಜ್ಞಾನ, ತೈವಾನ್, ಟಿಬೆಟ್, ದಕ್ಷಿಣ ಚೀನಾ ಸಮುದ್ರ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು, ಇತ್ತೀಚಿಗೆ ಹಾಂಗ್ ಕಾಂಗ್ ವಿಚಾರದಲ್ಲಿ ಎರಡು ರಾಷ್ಟ್ರಗಳ ಸಂಬಂಧ ಹಳಸಿದೆ.

English summary
US Has Issued A Fresh Travel Warning For China And Hong Kong, Citing The Risk Of Arbitrary Detention .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X