ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತಕ್ಕೆ ಎಸ್‌ಟಿಎ ಮಾನ್ಯತೆ ನೀಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 4: ನಾಗರಿಕ ವಲಯ ಮತ್ತು ರಕ್ಷಣಾ ವಲಯಗಳಲ್ಲಿ ಅತ್ಯಧಿಕ ತಂತ್ರಜ್ಞಾನದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುವ ವಾಣಿಜ್ಯ ಕಾರ್ಯತಂತ್ರ ದೃಢೀಕರಣ (ಎಸ್‌ಟಿಎ-1 Strategic Trade Authorization-1) ಪಟ್ಟಿಗೆ ಭಾರತವನ್ನು ಅಮೆರಿಕ ಸೇರ್ಪಡೆ ಮಾಡಿದೆ.

ಇದರಿಂದ ಎಸ್‌ಟಿಎ ಪಟ್ಟಿಗೆ ಸೇರಿದ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಎಂದೆನಿಸಿಕೊಂಡಿದೆ. ಭಾರತವು, ಜಪಾನ್ ಮತ್ತು ದಕ್ಷಿಣ ಕೊರಿಯಾ ಬಳಿಕ ಈ ಮಾನ್ಯತೆ ಪಡೆದ ಏಷ್ಯಾದ ಮೂರನೇ ದೇಶವಾಗಿದೆ. ಒಟ್ಟಾರೆಯಾಗಿ ಎಸ್‌ಟಿಎ-1 ಮಾನ್ಯತೆ ಪಡೆದುಕೊಂಡ 37ನೇ ದೇಶವಾಗಿದೆ. ಸಾಮಾನ್ಯವಾಗಿ ಈ ಅಧಿಕಾರವನ್ನು ಅಮೆರಿಕವು ತನ್ನ ನ್ಯಾಟೊ ಮೈತ್ರಿ ದೇಶಗಳಿಗೆ ನೀಡುತ್ತದೆ.

37 ವರ್ಷಗಳ ಬಳಿಕ ಜಿಂಬಾಬ್ವೆಗೆ ಹೊಸ ಅಧ್ಯಕ್ಷರ ಆಯ್ಕೆ37 ವರ್ಷಗಳ ಬಳಿಕ ಜಿಂಬಾಬ್ವೆಗೆ ಹೊಸ ಅಧ್ಯಕ್ಷರ ಆಯ್ಕೆ

ಇದರ ಮೂಲಕ ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತವನ್ನು ಸೇರ್ಪಡೆಗೊಳಿಸಲು ತಕರಾರು ತೆಗೆದಿರುವ ಚೀನಾಕ್ಕೆ ಅಮೆರಿಕ ಕಠಿಣ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ.

US grants india STA status

ಇನ್ನೂ ಎನ್‌ಎಸ್‌ಜಿಯ ಸದಸ್ಯತ್ವ ಪಡೆದುಕೊಳ್ಳದ ಭಾರತಕ್ಕೆ ಈ ಮಹತ್ವದ ಅಧಿಕಾರದ ಮಾನ್ಯತೆ ನೀಡಲು ಟ್ರಂಪ್ ಆಡಳಿತ ಶುಕ್ರವಾರ ನಿರ್ಧಾರ ಕೈಗೊಂಡಿದೆ.

ಎನ್ಎಸ್‌ಜಿ, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಅಧಿಕಾರ (ಎಂಟಿಸಿಆರ್), ವಾಸ್ಸೆನಾರ್ ಒಪ್ಪಂದ ಮತ್ತು ಆಸ್ಟ್ರೇಲಿಯಾ ಗ್ರೂಪ್‌ಗಳಿಗೆ ಒಳಪಟ್ಟ ದೇಶಗಳಿಗೆ ಮಾತ್ರ ಅಮೆರಿಕ ಎಸ್‌ಟಿಎ -1 ಮಾನ್ಯತೆ ನೀಡುತ್ತಿತ್ತು. ಭಾರತವು ಈ ಮೂರೂ ಒಪ್ಪಂದಗಳಲ್ಲಿ ಭಾಗಿಯಾಗಿದ್ದರೂ, ಚೀನಾದ ಅಡ್ಡಿಯ ಕಾರಣ ಎನ್‌ಎಸ್‌ಜಿ ಸದಸ್ಯತ್ವ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ.

ಭಾರತ ಮೂಲದ ಅಕ್ಷಯ್‌ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವಭಾರತ ಮೂಲದ ಅಕ್ಷಯ್‌ಗೆ 'ಗಣಿತದ ನೊಬೆಲ್' ಫೀಲ್ಡ್ಸ್ ಮೆಡಲ್ಸ್ ಗೌರವ

ಈ ಮಾನ್ಯತೆಯಿಂದಾಗಿ ಭಾರತವು ಎನ್‌ಎಸ್‌ಜಿಯ ರಫ್ತು ನಿಯಂತ್ರಣ ಅಧಿಕಾರವನ್ನು ಪಡೆದುಕೊಳ್ಳಲಿದೆ. ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೂ ಈ ಅಧಿಕಾರ ಪಡೆದ ಜಗತ್ತಿನ ಏಕಮಾತ್ರ ದೇಶ ಎಂದೆನಿಸಿಕೊಂಡಿದೆ.

ರಕ್ಷಣಾ ವಲಯ ಸೇರಿದಂತೆ ಉನ್ನತ ತಂತ್ರಜ್ಞಾನದ ಸಾಧನಗಳ ಮಾರಾಟ ಮಾಡಲು ಭಾರತಕ್ಕೆ ನೀಡಿರುವ ವಿನಾಯಿತಿಯು ಚೀನಾ ಹಾಗೂ ಜಗತ್ತಿಗೆ ನೀಡಿದ ಕಠಿಣ ರಾಜಕೀಯ ಸಂದೇಶ ಎನ್ನಲಾಗಿದೆ.

ಅಮೆರಿಕದ ಅತ್ಯಂತ ನಿಕಟ ಮಿತ್ರ ದೇಶ ಇಸ್ರೇಲ್‌ಗೆ ಕೂಡ ಈ ಮಾನ್ಯತೆ ನೀಡಿಲ್ಲ. ಇಸ್ರೇಲ್ ಎನ್‌ಎಸ್‌ಜಿ ಹೊರತುಪಡಿಸಿ ಉಳಿದ ಒಪ್ಪಂದಗಳಿಗೆ ಒಳಪಟ್ಟಿಲ್ಲ.

English summary
US gave India the Strategic Trade Authorization-1 (STA-1) status, paving the way for high technology product sales to New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X