ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ವರ್ಕ್ ಪರ್ಮಿಟ್ ಅವಧಿ ಒಂದೂವರೆ ವರ್ಷ ವಿಸ್ತರಣೆ

|
Google Oneindia Kannada News

ವಾಷಿಂಗ್ಟನ್, ಮೇ 4: ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಗರಿಗೆ ನೀಡಲಾಗುವ ವರ್ಕ್ ಪರ್ಮಿಟ್‌ನ ಅವಧಿಯನ್ನು 540 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ. ಬೈಡನ್ ಸರಕಾರ ಬುಧವಾರ ಈ ನಿರ್ಧಾರವನ್ನು ಪ್ರಕಟಿಸಿದೆ.

ಈ ಆದೇಶ ಇವತ್ತಿನಿಂದಲೇ ಜಾರಿಗೆ ಬರುತ್ತದೆ. ಎಂಪ್ಲಾಯ್ಮೆಂಟ್ ಆಥರೈಸೇಶನ್ ಕಾರ್ಡ್ (EAD- Employment Authorisation Card) ಹೊಂದಿರುವ ಕೆಲ ವರ್ಗಗಳ ವಲಸಿಗರು, ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರು, ಹೆಚ್-1ಬಿ ವೀಸಾ ಹೊಂದಿರುವವರ ಪತಿ/ಪತ್ನಿಯರಿಗೆ ಇದು ಅನುಕೂಲ ಮಾಡಿಕೊಡಲಾಗಿದೆ.

ಮಹಿಳೆಯರಿಗೆ ಗರ್ಭಪಾತದ ಹಕ್ಕು: ಅಮೆರಿಕದ ಸುಪ್ರೀಂಕೋರ್ಟ್ ಯೂಟರ್ನ್?ಮಹಿಳೆಯರಿಗೆ ಗರ್ಭಪಾತದ ಹಕ್ಕು: ಅಮೆರಿಕದ ಸುಪ್ರೀಂಕೋರ್ಟ್ ಯೂಟರ್ನ್?

ಒಂದು ಇಎಡಿ ಕಾರ್ಡ್ ನಿರ್ದಿಷ್ಟ ಅವಧಿಯವರೆಗೆ ಸಿಂಧುವಾಗಿರುತ್ತದೆ. ಅದಾದ ಬಳಿಕ 180 ದಿನಗಳವರೆಗೆ ಅವಧಿ ವಿಸ್ತರಿಸುವ ಅವಕಾಶ ಇತ್ತು. ಇದೀಗ ಇದರ ಅವಧಿಯನ್ನು 540 ದಿನಗಳವರೆಗೆ ವಿಸ್ತರಿಸಿ ಬೈಡನ್ ಸರಕಾರ ಕ್ರಮ ಕೈಗೊಂಡಿದೆ.

US govt announces 540 days extension for some expiring immigrant work permits

ಅಮೆರಿಕದ ಪೌರತ್ವ ಹೊಂದಿಲ್ಲದವರು ತಮ್ಮ ಕೆಲಸವನ್ನು ಉಳಿಸಿಕೊಂಡು ತಮ್ಮ ಕುಟುಂಬವನ್ನು ಇನ್ನಷ್ಟು ಅವಧಿಯವರೆಗೆ ಪೋಷಿಸಲು ಇದರಿಂದ ಸಾಧ್ಯವಾಗುತ್ತದೆ ಎಂಬುದು ಅಮೆರಿಕದ ಅಧಿಕಾರಿಗಳ ಅನಿಸಿದೆ. ವರ್ಕ್ ಪರ್ಮಿಟ್ ಅವಧಿ ಬೇಗ ಮುಗಿಯುವುದರಿಂದ ಅಮೆರಿಕದ ಕಂಪನಿಗಳಿಗೂ ಕಷ್ಟವಾಗುತ್ತಿತ್ತು, ವಿದೇಶದಿಂದ ಕೆಲಸಕ್ಕೆ ಬಂದವರಿಗೂ ತೊಂದರೆ ಆಗುತ್ತಿತ್ತು. ವರ್ಕ್ ಪರ್ಮಿಟ್ ಅವಧಿ ವಿಸ್ತರಿಸುವಂತೆ ಬಹಳಷ್ಟು ಮನವಿಗಳು ಬಂದದ್ದರಿಂದ ಸರಕಾರ ಈ ಕ್ರಮ ಕೈಗೊಂಡಿರಬಹುದು ಎಂದು ಭಾವಿಸಲಾಗಿದೆ.

ವಿಶ್ವದ ಟಾಪ್ ಮೋಸ್ಟ್ ಗುಪ್ತಚರ ಸಂಸ್ಥೆಯಲ್ಲೂ ಭಾರತೀಯರ ಛಾಪು; ಸಿಐಎ ಸಿಟಿಒ ಮೂಲಚಂದಾನಿವಿಶ್ವದ ಟಾಪ್ ಮೋಸ್ಟ್ ಗುಪ್ತಚರ ಸಂಸ್ಥೆಯಲ್ಲೂ ಭಾರತೀಯರ ಛಾಪು; ಸಿಐಎ ಸಿಟಿಒ ಮೂಲಚಂದಾನಿ

"ಅಮೆರಿಕ ಸರಕಾರದ ಈ ಕ್ರಮದಿಂದ ತತ್‌ಕ್ಷಣಕ್ಕೆ 87 ಸಾವಿರ ವಲಸಗರಿಗೆ ಅನುಕೂಲವಾಗುತ್ತದೆ.. ಇವರ ವರ್ಕ್ ಪರ್ಮಿಟ್ ಮುಂದಿನ 30 ದಿನದೊಳಗೆ ಅವಧಿ ಮೀರುತ್ತದೆ. ಈಗ ಇಎಡಿ ಕಾರ್ಡ್ ಅವಧಿ ವಿಸ್ತರಣೆ ಆಗುವುದರೊಂದಿಗೆ ಇವರು ಕೆಲಸದಲ್ಲಿ ಮುಂದುವರಿಯಬಹುದು. ಸರಕಾರದ ಅಂದಾಜಿನ ಪ್ರಕಾರ ನಾಲ್ಕು ಲಕ್ಷಕ್ಕೂ ಹೆಚ್ಚು ವಲಸಿಗರು ವರ್ಕ್ ಪರ್ಮಿಟ್ ನವೀಕರಣ ಮಾಡಬೇಕಿದ್ದು, ಅವರೆಲ್ಲರಿಗೂ ವಿಸ್ತರಣೆ ಅವಧಿಯವರೆಗೆ ಕೆಲಸ ಕಳೆದುಕೊಳ್ಳುವ ಪ್ರಮೇಯ ಬರುವುದಿಲ್ಲ" ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.

US govt announces 540 days extension for some expiring immigrant work permits

ಅಮೆರಿಕದ ಬಹಳಷ್ಟು ಕಂಪನಿಗಳಲ್ಲಿ ನೌಕರರ ಕೊರತೆ ಕಾಡುತ್ತಿದೆ. ಹೀಗಾಗಿ, ಭಾರತ ಮೊದಲಾದ ದೇಶಗಳಿಂದ ನಿಪುಣ ಉದ್ಯೋಗಿಗಳನ್ನು ಕರೆದು ತಾತ್ಕಾಲಿಕವಾಗಿ ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಹೀಗಾಗಿ, ಕನಿಷ್ಠ ಅವಧಿಯವರೆಗಾದರೂ ಈ ಉದ್ಯೋಗಿಗಳನ್ನ ಕೆಲಸದಲ್ಲಿ ಉಳಿಸಿಕೊಳ್ಳಲು ಬೈಡನ್ ಸರಕಾರ ಕೈಗೊಂಡಿರುವ ಇವತ್ತಿನ ಕ್ರಮ ಅನುಕೂಲ ಮಾಡಿಕೊಡಲಿದೆ.

(ಒನ್ಇಂಡಿಯಾ ಸುದ್ದಿ)

English summary
The Biden administration has announced an automatic extension of expiring work permits for certain categories of immigrants, including those seeking green cards and spouses of H-1B visa holders who get employment authorisation cards, for a year and a half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X