ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಸರಣಿ ರಾಕೆಟ್ ದಾಳಿ

|
Google Oneindia Kannada News

ಬಾಗ್ದಾದ್, ಜುಲೈ 08: ಇರಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಸರಣಿ ರಾಕೆಟ್, ಡ್ರೋನ್ ದಾಳಿ ನಡೆಸಲಾಗುತ್ತಿದೆ.

ಅಮೆರಿಕ ರಾಯಭಾರಿ ಕಚೇರಿ ಗುರಿಯಾಗಿಸಿ ಮೂರು ರಾಕೆಟ್ ದಾಳಿ ನಡೆದಿದೆ. ಇರಾಕ್ ಹಾಗೂ ಸಿರಿಯಾದಲ್ಲಿ ಅಮೆರಿಕ ನೆಲೆಯನ್ನು ಗುರಿಯಾಗಿಸಿಕೊಂಡು ರಾಕೆಟ್ ಹಾಗೂ ಡ್ರೋನ್ ದಾಳಿ ನಡೆಯುತ್ತಿದೆ.

ಅಮೆರಿಕ ರಾಯಭಾರಿ ಕಚೇರಿ ಮೇಲೆ ರಾಕೆಟ್ ಬಿದ್ದಿಲ್ಲ ಆದರೆ ಗರಿಷ್ಠ ಭದ್ರತೆಯ ಸುರಕ್ಷ ವಲಯದಲ್ಲಿ ಮೂರು ಪ್ರದೇಶಗಳನ್ನು ಗುರಿಯಾಗಿಸಲಾಗಿದೆ.

US Forces, Allies Face Rocket Attacks In Iraq And Syria

ಅಮೆರಿಕ ಸೇನಾ ನೆಲೆಯ ಮೇಲಿನ ದಾಳಿಯ ಹಿಂದಿನ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ, ಆದರೆ ಇರಾನ್ ಪ್ರಾಯೋಜಿತ ಭಯೋತ್ಪಾದಕ ದಾಳಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಕಳೆದ ತಿಂಗಳು ಇರಾಕ್-ಸಿರಿಯಾ ಗಡಿಯಲ್ಲಿ ಅಮೆರಿಕ ಸೈನ್ಯವು ದಾಳಿಯಲ್ಲಿ ನಾಲ್ವರನ್ನು ಹತ್ಯೆಗೈಯಲಾಗಿತ್ತು. ಇದರ ಪ್ರತೀಕಾರ ತೀರಿಸುವುದಾಗಿ ಭಯೋತ್ಪಾದಕರು ಹೇಳಿದ್ದರು.

ಪಶ್ಚಿಮ ಪ್ರಾಂತ್ಯದ ಅನ್ಬರ್‌ನಲ್ಲಿ ಬುಧವಾರದಂದು ಅಮೆರಿಕ ಸೇನಾ ನೆಲೆಯ ಮೇಲೆ 14 ರಾಕೆಟ್‌ಗಳನ್ನು ಹಾರಿಸಲಾಗಿತ್ತು, ಘಟನೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದರು.

ಅಮೆರಿಕವು ಇರಾಕ್‌ನಲ್ಲಿ 2,500ರಷ್ಟು ಸೈನಿಕರನ್ನು ನಿಯೋಜಿಸಿದೆ. ಈ ವರ್ಷ 50ಕ್ಕೂ ಅಧಿಕ ಹೆಚ್ಚು ದಾಳಿ ನಡೆದಿದೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ನಿರಂತರ ದಾಳಿ ನಡೆಯುತ್ತಿದೆ.

English summary
A number of rocket attacks have been carried out against US military and diplomatic targets. According to the extremist monitoring group SITE, they were carried out by pro-Iranian militias.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X