ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಡಿಸೆಂಬರ್.11 ಅಥವಾ 12ರಂದೇ ಕೊವಿಡ್-19 ಲಸಿಕೆ!

|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್.23: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮುಂದುವರಿದಿದೆ. ಇದರ ಮಧ್ಯೆ ಡಿಸೆಂಬರ್ ಆರಂಭದಲ್ಲಿಯೇ ಅಮೆರಿಕಾದಲ್ಲಿ ಕೊವಿಡ್-19 ಸೋಂಕಿಗೆ ಲಸಿಕೆ ಸಿಗಲಿದೆ ಎಂದು ತಜ್ಞರ ಸಮಿತಿ ತಿಳಿಸಿದೆ.

ಡಿಸೆಂಬರ್.11 ಅಥವಾ 12ರ ವೇಳೆಗೆ ಪಿ-ಫಿಜರ್ ಔಷಧಿ ತಯಾರಿಕಾ ಸಂಸ್ಥೆಯು ಕೊವಿಡ್-19 ಲಸಿಕೆ ಸಂಶೋಧನಾ ಕಾರ್ಯದಲ್ಲಿ ಮಹತ್ವದ ತಿರುವು ಪಡೆದುಕೊಳ್ಳಲಿದೆ ಎಂದು ಅಮೆರಿಕಾ ಸರ್ಕಾರದ ಔಷಧಿ ತಯಾರಿಕಾ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ.

Covid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿCovid-19 Vaccine: ತುರ್ತು ಸಂದರ್ಭದಲ್ಲಿ ಆಸ್ಟ್ರಾಜೆನಿಕಾ ಲಸಿಕೆ ಬಳಸಲು ಅನುಮತಿ

ಸರ್ಕಾರದಿಂದ ಅನುಮೋದನೆ ಸಿಕ್ಕ 24 ಗಂಟೆಗಳಲ್ಲಿಯೇ ರೋಗ ನಿರೋಧಕಶಕ್ತಿ ವೃದ್ಧಿಯ ತಾಣಗಳಿಗೆ ಲಸಿಕೆಯನ್ನು ರವಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಡಿಸೆಂಬರ್.11 ಮತ್ತು ಡಿಸೆಂಬರ್.12ರ ಆಸುಪಾಸಿನಲ್ಲಿ ಲಸಿಕೆಯು ಬಳಕೆಗೆ ಸಿಗಬಹುದು ಎಂದು ಯುನೆಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಆಹಾರ ಮತ್ತು ಔಷಧಿ ತಯಾರಿಕಾ ಮಂಡಳಿಯ ಅಧಿಕಾರಿ ಮೊನ್ಸೆಫ್ ಸ್ಲಾಯೂ ಮಾಹಿತಿ ನೀಡಿದ್ದಾರೆ.

US Expects To Begin Covid-19 Vaccinations By December 11-12: Report


2 ತಿಂಗಳಿನಲ್ಲಿ 5 ಕೋಟಿ ಜನರಿಗೆ ಕೊವಿಡ್-19 ಲಸಿಕೆ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪಿ-ಫಿಜರ್ ಸಂಸ್ಥೆಯು ನಡೆಸಿರುವ ಕೊವಿಡ್-19 ಈಗಾಗಲೇ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. 3ನೇ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಲಸಿಕೆ ಶೇ.95ರಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅನುಮೋದನೆಯನ್ನು ಎದುರು ನೋಡಲಾಗುತ್ತಿದೆ. ಸರ್ಕಾರವು ಅನುಮೋದನೆ ನೀಡುತ್ತಿದ್ದಂತೆ ಮೊದಲ ತಿಂಗಳಿನಲ್ಲಿ ಅಮೆರಿಕಾದ 2 ಕೋಟಿ ಜನರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತದೆ. ಅದರ ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು 3 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

English summary
Coronavirus Vaccine News: United States Of America Expects To Begin Covid-19 Vaccinations By December 11-12: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X