• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆಗೂ ಬೈಡನ್, ಕಮಲಾರನ್ನು ಅಭಿನಂದಿಸಿದ ಚೀನಾ

|

ಬೀಜಿಂಗ್, ನವೆಂಬರ್ 13: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆ ಸಲ್ಲಿಸಲು ನಿರಾಕರಿಸಿದ್ದ ಚೀನಾ, ಕೊನೆಗೂ ಅಭಿನಂದನೆ ಸಂದೇಶ ರವಾನಿಸಿದೆ. ಅಮೆರಿಕದ ಜನರ ಆಯ್ಕೆಯನ್ನು ಬೀಜಿಂಗ್ ಗೌರವಿಸುವುದಾಗಿ ಚೀನಾ ಹೇಳಿದೆ.

'ಅಮೆರಿಕ ಚುನಾವಣೆಗೆ ಸಂಬಂಧಿಸಿದಂತೆ ಅಮೆರಿಕದ ಒಳಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಎರಡೂ ಕಡೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನಾವು ಗಮನಿಸುತ್ತಿದ್ದೇವೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು ಬೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನೂತನ ಅಧ್ಯಕ್ಷ ಜೋ ಬೈಡನ್‌ಗೆ ಅಭಿನಂದಿಸಲು ನಿರಾಕರಿಸಿದ ಚೀನಾ

'ಅಮೆರಿಕನ್ ಜನರ ಆಯ್ಕೆಯನ್ನು ನಾವು ಗೌರವಿಸುತ್ತೇವೆ. ಹಾಗೆಯೇ ನಾವು ನಮ್ಮ ಅಭಿನಂದನೆಗಳನ್ನು ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಸಲ್ಲಿಸುತ್ತೇವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಅಮೆರಿಕದ ಕಾನೂನು ಮತ್ತು ಪ್ರಕ್ರಿಯೆಗಳಿಂದ ನಿರ್ಧರಿಸಲಾಗುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ' ಎಂದು ಹೇಳಿದರು.

ರಿಪಬ್ಲಿಕ್ ಪ್ರಾಬಲ್ಯದ ಅರಿಜೋನಾದಲ್ಲೂ ಗೆಲುವು ಸಾಧಿಸಿದ ಜೋ ಬೈಡನ್

ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಶ್ವೇತಭವನಕ್ಕೆ ಆಯ್ಕೆಯಾದ ಸುಮಾರು ಒಂದು ವಾರದ ಬಳಿಕ ಚೀನಾ ಅಭಿನಂದನೆ ತಿಳಿಸಿದೆ.

   ಪತ್ರಿಕಾ ರಂಗದ ದೊಡ್ಡ ಕೊಂಡಿ ಇಂದು ನಮ್ಮನ್ನು ಬಿಟ್ಟು ಹೋಗಿದ್ದೆ | Oneindia Kannada

   English summary
   US elections: China on Friday finally congratulated US President-elect Joe Biden and his deputy Kamala Harris.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X