ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮೆರಿಕ ಚುನಾವಣೆ ಫಲಿತಾಂಶದ ಬಳಿಕ ಭಾರತದ ಜತೆಗಿನ ಸಂಬಂಧ ಬದಲಾಗುವುದಿಲ್ಲ'

|
Google Oneindia Kannada News

ಲಂಡನ್, ನವೆಂಬರ್ 5: ಅಮೆರಿಕದೊಂದಿಗಿನ ಭಾರತ ಸಂಬಂಧವು ಉಭಯಪಕ್ಷೀಯ ಬೆಂಬಲದ ಆಧಾರದಲ್ಲಿದೆ. ಎರಡೂ ದೇಶಗಳು ಗಟ್ಟಯಾದ ಸಂಬಂಧ ಹೊಂದಿವೆ ಎಂದಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಏನೇ ಆದರೂ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಯುರೋಪಿಯನ್ ದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳ ಪರಾಮರ್ಶೆ ಮತ್ತು ಪರಸ್ಪರ ಹಿತಾಸಕ್ತಿಯ ವಿಚಾರಗಳ ಕುರಿತು ಚರ್ಚಿಸಲು ಏಳು ದಿನಗಳ ಯುರೋಪ್ ಪ್ರವಾಸದಲ್ಲಿರುವ ಶ್ರಿಂಗ್ಲಾ, ಭಾರತ-ಅಮೆರಿಕ ಸಂಬಂಧವು ಬಹಳ ವಿಸ್ತೃತ ಹಾಗೂ ಬಹುಮುಖಿಯಾಗಿದೆ ಎಂದು ಬಣ್ಣಿಸಿದರು.

ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್

'ಅಮೆರಿಕದೊಂದಿಗಿನ ನಮ್ಮ ಸಂಬಂಧವು ಉಭಯಪಕ್ಷೀಯ ಬೆಂಬಲದ ಆಧಾರಿತವಾಗಿದೆ. ಅದನ್ನು ನೀವು ಕಾಂಗ್ರೆಸ್‌ನಲ್ಲಿ, ಸಾರ್ವಜನಿಕ ಮಟ್ಟದಲ್ಲಿ ನೋಡಬಹುದು. ಈ ಪರೀಕ್ಷೆಯ ಸಮಯದಲ್ಲಿಯೂ ನಮ್ಮೊಂದಿಗೆ ನಿಲ್ಲುವಂತಹ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.

US Election Results Wont Affect Bilateral Ties: India

'ನಾವು ಸಮಾನ ಮೌಲ್ಯ ಮತ್ತು ತತ್ವಗಳನ್ನು ಮಾತ್ರ ಹಂಚಿಕೊಳ್ಳುತ್ತಿಲ್ಲ, ಜತೆಗೆ ದ್ವಿಪಕ್ಷೀಯ ಇರಬಹುದು, ಪ್ರಾದೇಶಿಕ ಅಥವಾ ಬಹುಪಕ್ಷೀಯ ಸಂಬಂಧ ಇರಬಹುದು, ಸಮಾನ ಕಾರ್ಯತಂತ್ರ ದೃಷ್ಟಿಕೋನಗಳನ್ನು ಸಹ ಹೊಂದಿದ್ದೇವೆ' ಎಂದಿದ್ದಾರೆ.

ಮತ ಎಣಿಕೆ ವಿವಾದ: ಅತ್ತ ಬೈಡನ್ ಪರ, ಇತ್ತ ಟ್ರಂಪ್ ಪರ ಪ್ರತಿಭಟನೆಮತ ಎಣಿಕೆ ವಿವಾದ: ಅತ್ತ ಬೈಡನ್ ಪರ, ಇತ್ತ ಟ್ರಂಪ್ ಪರ ಪ್ರತಿಭಟನೆ

'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಪ್ರಧಾನಿ ಮೋದಿ ಸಂಬಂಧವು ವಿಶೇಷವಾಗಿತ್ತು. ಆದರೆ ಪ್ರಧಾನಿ ಮೋದಿ ಅವರು ಬರಾಕ್ ಒಬಾಮ ಜತೆಗೆ ಹೊಂದಿದ್ದ ಸಂಬಂಧ ಕೂಡ ಬಹಳ ವಿಶೇಷವಾಗಿತ್ತು ಎನ್ನುವುದನ್ನು ನೀವು ನೆನಪಿಸಿಕೊಳ್ಳಬೇಕು' ಎಂದು ಅವರು ಜರ್ಮನಿಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅತ್ಯಧಿಕ ಮತ ಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಜೋ ಬೈಡೆನ್ಅತ್ಯಧಿಕ ಮತ ಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಜೋ ಬೈಡೆನ್

ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ಅವರು ಭಾರತ-ಅಮೆರಿಕ ಪ್ರಬಲ ಕಾರ್ಯತಂತ್ರ ಸಂಬಂಧಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಹೀಗಾಗಿ ಡೊನಾಲ್ಡ್ ಟ್ರಂಪ್ ಅಥವಾ ಬೈಡೆನ್ ಆಗಿರಲಿ ಭಾರತ-ಅಮೆರಿಕ ಸಂಬಂಧ ಒಂದೇ ರೀತಿಯದ್ದಾಗಿರಲಿದೆ ಎಂದಿದ್ದಾರೆ.

English summary
Indian Foreign Secratary Shringla said, US Election results won't affect bilateral ties between two nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X