ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಸಭೆಯಲ್ಲಿಯೇ ಅಮೆರಿಕ-ಚೀನಾ ನಡುವೆ ತೀವ್ರ ಕಿತ್ತಾಟ

|
Google Oneindia Kannada News

ಅಲಾಸ್ಕಾ, ಮಾರ್ಚ್ 20: ಚೀನಾ ಮತ್ತು ಅಮೆರಿಕ ನಡುವೆ ಅಲಸ್ಕಾದ ಅಂಕೊರೇಜ್‌ನಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ಉನ್ನತ ಮಟ್ಟದ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಎರಡು ದೇಶಗಳ ನಡುವಿನ ಹಳಸಿರುವ ಸಂಬಂಧ ಈ ಸಭೆಯಲ್ಲಿ ಮತ್ತೊಮ್ಮೆ ಬಹಿರಂಗವಾಯಿತು.

ಚೀನಾ ವಿರುದ್ಧ ದಾಳಿ ಮಾಡುವಂತೆ ಇತರೆ ದೇಶಗಳನ್ನು ಅಮೆರಿಕ ಎತ್ತಿಕಟ್ಟುತ್ತಿದೆ ಎಂದು ಚೀನಾದ ಅಧಿಕಾರಿಗಳು ಆರೋಪಿಸಿದರು. ತನ್ನ ಹಳೆದ ವಿಧಾನದ ಉದ್ದೇಶದೊಂದಿಗೇ ಚೀನಾ ಸಭೆಗೆ ಬಂದಿದೆ ಎಂದು ಅಮೆರಿಕ ಪ್ರತಿಯಾಗಿ ಆರೋಪಿಸಿತು.

ಬೈಡನ್ ಅವರು ಅಧ್ಯಕ್ಷರಾದ ಬಳಿಕ ಇದೆ ಮೊದಲ ಬಾರಿಗೆ ಚೀನಾ ಮತ್ತು ಅಮೆರಿಕ ನಡುವೆ ಉನ್ನತ ಮಟ್ಟದ ಸಬೆ ನಡೆಯಿತು. ಆದರೆ ಎರಡು ದಿನಗಳ ಈ ಸಭೆ ಸಾರ್ವಜನಿಕವಾಗಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತೇ ವಿನಾ, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಯಾವುದೇ ಸೂಚನೆ ನೀಡದೆ ಅಂತ್ಯಕಂಡಿತು.

ನಮ್ಮ ಲಸಿಕೆ ತೆಗೆದುಕೊಂಡರೆ ಮಾತ್ರ ಒಳಗೆ ಪ್ರವೇಶ: ಚೀನಾನಮ್ಮ ಲಸಿಕೆ ತೆಗೆದುಕೊಂಡರೆ ಮಾತ್ರ ಒಳಗೆ ಪ್ರವೇಶ: ಚೀನಾ

ಮೊದಲ ದಿನವಾದ ಗುರುವಾರ ತೀವ್ರ ಮಾತಿನ ಚಕಮಕಿ ಬಳಿಕ ಶುಕ್ರವಾರ ಕಠಿಣ ಚರ್ಚೆಗಳು ನಡೆದವು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ತಿಳಿಸಿದರು.

ಕಠಿಣ ಮಾತುಕತೆ ನಡೆದಿದೆ

ಕಠಿಣ ಮಾತುಕತೆ ನಡೆದಿದೆ

'ನಾವು ವಿವಿಧ ವಿಚಾರಗಳ ಬಗ್ಗೆ ವ್ಯಾಪಕವಾದ ಕಠಿಣ ಮಾತುಕತೆಯನ್ನು ನಿರೀಕ್ಷಿಸಿದ್ದೆವು. ಅದರಂತೆಯೇ ಸಭೆ ನಡೆದಿದೆ. ಮುಂದಿನ ದಿನಗಳ ನಡೆಯ ಬಗ್ಗೆ ನಾವು ಬಹಳ ಸ್ಪಷ್ಟವಾಗಿದ್ದೇವೆ. ವಾಷಿಂಗ್ಟನ್‌ಗೆ ಮರಳಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಮಿತ್ರದೇಶಗಳು, ಪಾಲುದಾರರ ಜತೆಗೆ ಸಂಪರ್ಕಿಸುವುದನ್ನು ಮುಂದುವರಿಸುತ್ತೇವೆ' ಎಂದು ಜೇಕ್ ಹೇಳಿದರು.

ಚೀನಾ ಬಜೆಟ್: ಭಾರತ-ಅಮೆರಿಕಾಗೆ ಸೆಡ್ಡು ಹೊಡೆಯುವ ಯೋಜನೆಚೀನಾ ಬಜೆಟ್: ಭಾರತ-ಅಮೆರಿಕಾಗೆ ಸೆಡ್ಡು ಹೊಡೆಯುವ ಯೋಜನೆ

ಮಾತುಕತೆ ಮುಕ್ತವಾಗಿತ್ತು

ಮಾತುಕತೆ ಮುಕ್ತವಾಗಿತ್ತು

ಗುರುವಾರ ಸಭೆಯ ಆರಂಭದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದ ಚೀನಾದ ಹಿರಿಯ ವಿದೇಶಾಂಗ ನೀತಿ ಅಧಿಕಾರಿ ಯಾಂಗ್ ಜೀಚಿ, ಮಾತುಕತೆಯು ಬಹಳ ನೇರಾನೇರ, ರಚನಾತ್ಮಕವಾಗಿತ್ತು ಎಂದು ತಿಳಿಸಿದರು.

ಚೀನಾ ವಿಚಾರಗಳನ್ನು ಕೆದಕಿದ ಅಮೆರಿಕ

ಚೀನಾ ವಿಚಾರಗಳನ್ನು ಕೆದಕಿದ ಅಮೆರಿಕ

ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ ಸಂಪೂರ್ಣ ಹದಗೆಟ್ಟಿದ್ದ ಅಮೆರಿಕ-ಚೀನಾ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಸಭೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬೈಡನ್ ಅಧಿಕಾರಿಗಳು ವಿವಿದ ವಿಷಯಗಳ ಕುರಿತು ಕಠಿಣ ನಿಲುವು ಪ್ರದರ್ಶಿಸಿದರು. ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಮರಳಿಸುವುದು, ತೈವಾನ್ ಕುರಿತಾದ ಆಕ್ರಮಣಕಾರಿ ನೀತಿ, ಯುಘಿರ್ ಮುಸ್ಲಿಮರ ಮೇಲಿನ ದೌರ್ಜನ್ಯ ಮುಂತಾದ ವಿಚಾರಗಳನ್ನು ಅಮೆರಿಕ ಪ್ರಸ್ತಾಪಿಸಿತು.

ಅಮೆರಿಕವೇ ಚಾಂಪಿಯನ್!

ಅಮೆರಿಕವೇ ಚಾಂಪಿಯನ್!

ಅಮೆರಿಕವು ಶೀತಲ ಸಮರದ ಮನಸ್ಥಿತಿಯನ್ನು ಹೊಂದಿದೆ. ಚೀನಾದ ವಿರುದ್ಧ ದಾಳಿ ನಡೆಸುವಂತೆ ಇತರೆ ದೇಶಗಳನ್ನು ಪ್ರಚೋದಿಸುತ್ತಿದೆ ಎಂದು ಯಂಗ್ ಆರೋಪಿಸಿದರು. ಮಾನವ ಹಕ್ಕುಗಳ ಮೇಲಿನ ದಾಳಿಯ ಆರೋಪಕ್ಕೆ ಪ್ರತ್ಯಾರೋಪ ಮಾಡಿದ ಯಂಗ್, ಅಮೆರಿಕದಲ್ಲಿ ನಡೆಯುವ ಜನಾಂಗೀಯ ದಾಳಿಗಳ ಬಗ್ಗೆ ಪ್ರಶ್ನಿಸಿದರು. ಚೀನಾವು ಅಮೆರಿಕದ ಮೇಲೆ ಸೈಬರ್ ದಾಳಿ ನಡೆಸಿದೆ ಎಂಬ ಆರೋಪಕ್ಕೆ, ಅಮೆರಿಕ ಈ ವಿಚಾರದಲ್ಲಿ ಚಾಂಪಿಯನ್ ಎಂದು ಟೀಕಿಸಿದರು.

English summary
US-China two days meeting at Alaska ends without any breakthrough after first day spat between officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X