ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವು ರದ್ದುಗೊಳಿಸಿದ ಯುಎಸ್ಎ

By Mahesh
|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 02: ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ 300 ಮಿಲಿಯನ್ ಡಾಲರ್ (ಸುಮಾರು 2,100 ಕೋಟಿ ರು) ಬೆಂಬಲ ನಿಧಿಯನ್ನು ರದ್ದು ಮಾಡಿರುವುದಾಗಿ ಯುಎಸ್ ಮಿಲಿಟರಿ, ಭಾನುವಾರದಂದು ಘೋಷಿಸಿದೆ.

ಭಯೋತ್ಪಾದನಾ ನಿಗ್ರಹ ಮಾಡಲು ಪಾಕಿಸ್ತಾನ ವಿಫಲವಾಗಿದ್ದು, ಆಫ್ಘಾನಿಸ್ತಾನದಲ್ಲಿನ ಆಂತರಿಕ ಕಲಹಕ್ಕೂ ಪಾಕಿಸ್ತಾನವೇ ಕಾರಣವಾಗಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ನೆಲೆಸಲು ಯಾವುದೇ ಅಗತ್ಯ ಕ್ರಮ ಜರುಗಿಸಿಲ್ಲ ಎಂದು ಪೆಂಟಗನ್​ನ ವಕ್ತಾರ ಲೆಫ್ಟಿನೆಂಟ್​ ಕಲೊನೆಲ್​ ಕೋನ್​ ಫಾಕ್ನರ್​ ಹೇಳಿದ್ದಾರೆ.

US cancels $300m in aid to Pakistan over failure to tackle militants

ಹೀಗಾಗಿ, ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ (ಡಿಒಡಿ) ವತಿಯಿಂದ ನೀಡುತ್ತಿದ್ದ ಆರ್ಥಿಕ ನೆರವನ್ನು ರದ್ದು ಮಾಡಿದ್ದೇವೆ. ಆ ಹಣವನ್ನು ನಾವು ಅದ್ಯತೆ ಮೇರೆಗೆ ತುರ್ತು ಕೆಲಸ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ 300 ದಶಲಕ್ಷ ಡಾಲರ್​ ಮೈತ್ರಿ ಬೆಂಬಲ ನಿಧಿಯನ್ನು ನೀಡುವುದಾಗಿ ಕಳೆದ ವರ್ಷ ಡೊನಾಲ್ಡ್​ ಟ್ರಂಪ್​ ಘೋಷಿಸಿದ್ದರು. ಆದರೆ, ಅನುದಾನ ರದ್ದು ಮಾಡುವಂತೆ ಅಮೆರಿಕ ಕಾಂಗ್ರೆಸ್​ ನಿರ್ಧಾರ ಕೈಗೊಂಡಿತ್ತು.(ಪಿಟಿಐ)

English summary
The U.S. military on Sunday said it has made a final decision to cancel $300 million in aid to Pakistan that had been suspended over Islamabad's perceived failure to take decisive action against militants, in a new blow to deteriorating ties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X