ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾರಣ: ಜಗತ್ತಿನ ಬಲಿಷ್ಠ ರಾಷ್ಟ್ರಗಳಿಂದ ಚೀನಾಗೆ ಛೀ.. ಥೂ..!

|
Google Oneindia Kannada News

ನವದೆಹಲಿ, ಮೇ 31: ಚೀನಾದ ಸೂಕ್ಷ್ಮ ರೋಗಾಣುಗಳ ಪ್ರಯೋಗಾಲಯದಿಂದ ರಹಸ್ಯವಾಗಿ ಕೊವಿಡ್-19 ಸೋರಿಕೆ ಮಾಡಲಾಗಿದೆ ಎಂಬ ಆರೋಪ ಜಾಗತಿಕ ಮಟ್ಟದಲ್ಲಿ ದಿನಕ್ಕೊಂದು ಮಗ್ಗಲು ಬದಲಿಸುತ್ತಿದೆ. ಅಮೆರಿಕಾದ ವಾದವನ್ನು ವಿರೋಧಿಸಿದ ಬಲಿಷ್ಠ ರಾಷ್ಟ್ರಗಳು ಇದೀಗ ಚೀನಾ ವಿರುದ್ಧ ದೂಷಿಸುವುದಕ್ಕೆ ಶುರು ಮಾಡಿವೆ.

ವುಹಾನ್ ನಗರದಲ್ಲಿ ಇರುವ ಸೂಕ್ಷ್ಮರೋಗಾಣು ಅಧ್ಯಯನ ಸಂಸ್ಥೆಯಲ್ಲಿ ನಾಗರಿಕ ಸಂಶೋಧನೆಗಳ ಜೊತೆಗೆ ಸೇನಾ ಚಟುವಟಿಕೆಗಳೂ ನಡೆಯುತ್ತಿವೆ ಎಂದು ಯುಎಸ್ ಮಾಜಿ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಆರೋಪಿಸಿದ್ದಾರೆ.

ಹೊಸ ವರಸೆ: ಚೀನಾಗಿಂತ ಮೊದಲೇ ಜಗತ್ತಿನಾದ್ಯಂತ ಕೊರೊನಾ ಹರಡಿತ್ತುಹೊಸ ವರಸೆ: ಚೀನಾಗಿಂತ ಮೊದಲೇ ಜಗತ್ತಿನಾದ್ಯಂತ ಕೊರೊನಾ ಹರಡಿತ್ತು

ಉತ್ತಮ ನಾಗರಿಕ ಸಂಶೋಧನೆಗಳನ್ನು ನಡೆಸುವುದಾಗಿ ಬಿಂಬಿಸುತ್ತಿರುವ ಚೀನಾದ ವುಹಾನ್ ವೈರಾಲಜಿ ಸಂಸ್ಥೆಯು ನೇರವಾಗಿ ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ಸಂಪರ್ಕದಲ್ಲಿದೆ. ಅಲ್ಲದೇ ಸೂಕ್ಷ್ಮ ರೋಗಾಣುಶಾಸ್ತ್ರ ಅಧ್ಯಯನ ಸಂಸ್ಥೆಯಲ್ಲೇ ಸೇನಾ ಚಟುವಟಿಕೆಗಳನ್ನೂ ನಡೆಸಲಾಗುತ್ತಿದೆ ಎಂದು ಮೈಕ್ ಪೊಂಪಿಯೊ ದೂಷಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಅಮೆರಿಕಾ ಆರೋಪದ ಹಿಂದಿನ ಕಾರಣ?

ಅಮೆರಿಕಾ ಆರೋಪದ ಹಿಂದಿನ ಕಾರಣ?

ಕೊರೊನಾವೈರಸ್ ರೋಗದ ಬಗ್ಗೆ ಸಾಕಷ್ಟು ವಿಷಯಗಳನ್ನು ಚೀನಾ ಮರೆ ಮಾಚಲು ಯತ್ನಿಸುತ್ತಿದೆ. "ಅದು ಏನು ಎಂಬ ಬಗ್ಗೆ ಅವರು ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ರೋಗದ ಗುಣಲಕ್ಷಣ ಏನು ಎಂಬುದನ್ನು ವಿವರಿಸುವುದಕ್ಕೆ ಅವರು ನಿರಾಕರಿಸುತ್ತಾರೆ. ಅಷ್ಟೇ ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ವುಹಾನ್ ವೈರಾಲಜಿಗೆ ಪ್ರವೇಶಿಸುವುದಕ್ಕೆ ಅವರು ಅನುಮತಿ ನಿರಾಕರಿಸುತ್ತಾರೆ" ಎಂದು ಮೈಕ್ ಪೊಂಪಿಯೋ ಕಿಡಿ ಕಾರಿದ್ದಾರೆ.

ಕೊವಿಡ್-19 ಮೂಲ ಹುಡುಕುತ್ತಿರುವ ಜಗತ್ತು

ಕೊವಿಡ್-19 ಮೂಲ ಹುಡುಕುತ್ತಿರುವ ಜಗತ್ತು

ಇಡೀ ಜಗತ್ತನ್ನು ಬಾಧಿಸುತ್ತಿರುವ ಕೊರೊನಾವೈರಸ್ ಸೋಂಕಿನ ಮೂಲವನ್ನು ಪತ್ತೆ ಮಾಡುವುದಕ್ಕೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಚೀನಾದಲ್ಲೇ ಮೊದಲು ಕಾಣಿಸಿಕೊಂಡ ರೋಗದ ಹುಟ್ಟು ಹೇಗೆ ಎಂಬುದರ ಗುಟ್ಟು ಮಾತ್ರ ಇಂದಿಗೂ ರಟ್ಟಾಗುತ್ತಿಲ್ಲ. ಕೊವಿಡ್-19 ಸೋಂಕಿನ ಪ್ರಕರಣದ ಮೂಲ ಏನು ಎಂಬ ಬಗ್ಗೆ ಸ್ಪಷ್ಟತೆಯನ್ನು ಕೋರಲಾಗುತ್ತಿದೆ. ಈ ಹಿನ್ನೆಲೆ ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಚೀನಾದ ಮೇಲೆ ಒತ್ತಡ ಹೇರುತ್ತಿವೆ.

ವೈದ್ಯಕೀಯ ಸಮುದಾಯವನ್ನು ವಂಚಿಸಿತಾ ಚೀನಾ?

ವೈದ್ಯಕೀಯ ಸಮುದಾಯವನ್ನು ವಂಚಿಸಿತಾ ಚೀನಾ?

ಆಸ್ಟ್ರೇಲಿಯಾ ಆತಿಥೇಯ ಸ್ಕೈ ಸುದ್ದಿ ವಾಹಿನಿಯ ಆಂಡ್ರೋ ಬೋಲ್ಟ್ ಫ್ಲಿಂಡರ್ಸ್ ವೈದ್ಯಕೀಯ ಕೇಂದ್ರದ ಅಂತಃಸ್ರಾವ ಶಾಸ್ತ್ರ ವಿಭಾಗದ ನಿರ್ದೇಶಕ ನಿಕೋಲೈ ಪೆಟ್ರೊಸ್ಕಿ ಜೊತೆ ಕಳೆದ ಮೇ 26ರಂದು ಈ ಬಗ್ಗೆ ಮಾತನಾಡಿದ್ದರು. ಇಡೀ ಜಗತ್ತಿನ ವೈದ್ಯಕೀಯ ಸಮುದಾಯವನ್ನು ಚೀನಾ ವಂಚಿಸಿದೆ ಎಂದು ಪೆಟ್ರೊಸ್ಕಿ ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ. ಆಂಡ್ರ್ಯೂ ಬೋಲ್ಟ್ ಕೂಡ ತಮ್ಮ ಕಾರ್ಯಕ್ರಮದ ದಿ ಬೋಲ್ಟ್ ರಿಪೋರ್ಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಅಂತೂ ಇತ್ತೀಚಿಗೆ ಬಹಳಷ್ಟು ತಜ್ಞರು ಸರಿಯಾಗಿ ಹೇಳುತ್ತಿದ್ದಾರೆ. ಈ ವೈರಸ್ ಚೀನಾದ ಲ್ಯಾಬ್‌ನಿಂದ ತಪ್ಪಿಸಿಕೊಂಡಂತೆ ಕಾಣುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ.

COVID-19 ರೋಗಾಣು ಪ್ಯಾಂಗೊಲಿನ್‌ಗಳಿಂದ ಹುಟ್ಟಿಕೊಂಡಿದೆ ಎಂದು ಚೀನಾದ ಕೆಲವು ವಿಜ್ಞಾನಿಗಳು ಹೇಳಿದ್ದರು. ಆದರೆ ಹಾಗೆ ಆಗುವುದಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರೊಫೆಸರ್ ನಿಕೋಲೈ ಪೆಟ್ರೊಸ್ಕಿ ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ದತ್ತಾಂಶ ನೀಡಲು ನಿರಾಕರಣೆ

ವಿಶ್ವ ಆರೋಗ್ಯ ಸಂಸ್ಥೆಗೆ ದತ್ತಾಂಶ ನೀಡಲು ನಿರಾಕರಣೆ

ಕೊರೊನಾವೈರಸ್ ಸೋಂಕಿನ ಮೂಲವನ್ನು ಹುಡುಕಿ ಹೊರಟ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡಕ್ಕೆ ವುಹಾನ್ ನಗರ ಸೂಕ್ಷ್ಮರೋಗಾಣು ಶಾಸ್ತ್ರ ಅಧ್ಯಯನ ಸಂಸ್ಥೆಯಿಂದ ರೋಗಾಣು ಸೋರಿಕೆ ಆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆದರೆ ಇತ್ತೀಚಿಗೆ ಅದೇ WHO ತನಿಖಾ ತಂಡದಲ್ಲಿದ್ದ ಸದಸ್ಯರೊಬ್ಬರು ಚೀನಾದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ವುಹಾನ್ ನಗರ ವೈರಾಲಜಿ ಸಂಸ್ಥೆಗೆ ಪ್ರವೇಶಿಸಲು ಹಾಗೂ ಕೊವಿಡ್-19 ಸೋಂಕಿನ ಆರಂಭಿಕ ಹಂತದ ದತ್ತಾಂಶವನ್ನು ನೀಡಲು ಚೀನಾ ನಿರಾಕರಿಸಿತ್ತು ಎಂದು ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.

English summary
The United States and Britain have sought the WHO to take a deeper look into the possible origins of coronavirus in China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X