ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಕೊರಾನಾನೈರಸ್ ಲಸಿಕೆ ಹಂಚಿಕೆ: ಅಮೆರಿಕಾ ಕೊಟ್ಟಿದ್ದೆಷ್ಟು, ಭಾರತಕ್ಕೆ ದಕ್ಕಿದ್ದೆಷ್ಟು?

|
Google Oneindia Kannada News

ನವದೆಹಲಿ, ಜೂನ್ 22: ಕೊರೊನಾವೈರಸ್ ನಿಯಂತ್ರಿಸುವ ಉದ್ದೇಶದಿಂದ ನೆರೆಯ ಹಾಗೂ ಬಂಧುರಾಷ್ಟ್ರಗಳಿಗೆ ಎರಡನೇ ಹಂತದ ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಯುಎಸ್ ಅಧ್ಯಕ್ಷ ಜೋ ಬೈಡನ್ ಸೋಮವಾರ ಘೋಷಿಸಿದ್ದಾರೆ.

Recommended Video

Americaದಿಂದ ಭಾರತಕ್ಕೆ ಬಂದ ಲಸಿಕೆ ಎಷ್ಟು ಗೋತ್ತಾ | Oneindia Kannada

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತನ್ನ ನೆರೆ ಹಾಗೂ ಬಂಧುರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ 8 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆಯನ್ನು ನೀಡುವುದಾಗಿ ಘೋಷಿಸಿತ್ತು. 8 ಕೋಟಿ ಡೋಸ್ ಲಸಿಕೆ ಯೋಜನೆಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ 2.50 ಕೋಟಿ ಡೋಸ್ ಲಸಿಕೆಯನ್ನು ರವಾನಿಸಲಾಗಿದೆ. ಎರಡು ವಾರಗಳ ನಂತರದಲ್ಲಿ ಎರಡನೇ ಹಂತದಲ್ಲಿ 5.50 ಕೋಟಿ ಡೋಸ್ ಲಸಿಕೆ ರವಾನಿಸುವ ಬಗ್ಗೆ ಅಮೆರಿಕಾ ಸ್ಪಷ್ಟಪಡಿಸಿದೆ.

ಬಂಧುರಾಷ್ಟ್ರಗಳಿಗೆ ಲಸಿಕೆ ಕಳುಹಿಸಲು ಅಮೆರಿಕಾ ಹೊಸ ಯೋಜನೆಬಂಧುರಾಷ್ಟ್ರಗಳಿಗೆ ಲಸಿಕೆ ಕಳುಹಿಸಲು ಅಮೆರಿಕಾ ಹೊಸ ಯೋಜನೆ

5.50 ಕೋಟಿ ಡೋಸ್ ಲಸಿಕೆ ಪೈಕಿ ಕೊವ್ಯಾಕ್ಸ್ ಸೌಲಭ್ಯದ ಅಡಿಯಲ್ಲಿ ಏಷಿಯಾಗೆ 1.60 ಕೋಟಿ ಡೋಸ್ ಕಳುಹಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಿಂದ 1.60 ಕೋಟಿ ಡೋಸ್ ಲಸಿಕೆ ಪಡೆದುಕೊಂಡಿರುವ 18 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಕೂಡಾ ಸೇರಿದೆ.

ಭಾರತಕ್ಕೆ ಎಷ್ಟು ಡೋಸ್ ಲಸಿಕೆ ಎಂಬುದು ನಿಖರವಾಗಿಲ್ಲ

ಭಾರತಕ್ಕೆ ಎಷ್ಟು ಡೋಸ್ ಲಸಿಕೆ ಎಂಬುದು ನಿಖರವಾಗಿಲ್ಲ

ಅಮೆರಿಕಾ ನೀಡುತ್ತಿರುವ ಕೊವ್ಯಾಕ್ಸ್ ಲಸಿಕೆಯಲ್ಲಿ ಭಾರತಕ್ಕೆ ಎಷ್ಟು ಪ್ರಮಾಣ ಸಿಗಲಿದೆ ಎನ್ನುವುದು ನಿಖರವಾಗಿಲ್ಲ. ಒಂದು ಅಂದಾಜಿನ ಪ್ರಕಾರ, ಎರಡನೇ ಅವಧಿಯಲ್ಲಿ ಹಂಚಿಕೆ ಮಾಡಲಾಗಿರುವ 5.50 ಕೋಟಿ ಡೋಸ್ ಲಸಿಕೆಯಲ್ಲಿ ಭಾರತಕ್ಕೆ 10 ರಿಂದ 20 ಲಕ್ಷ ಡೋಸ್ ಸಿಗುವುದಿಲ್ಲ. ಮೊದಲ ಹಂತದಲ್ಲಿ 2.50 ಕೋಟಿ ಡೋಸ್ ಪೈಕಿ ಭಾರತವು ಸುಮಾರು 20 ಲಕ್ಷದಿಂದ 30 ಲಕ್ಷ ಡೋಸ್ ಪಡೆಯುವ ನಿರೀಕ್ಷೆಯಿದೆ.

ಭಾರತಕ್ಕೆ ಎರಡು ಹಂತಗಳಲ್ಲಿ 50 ಲಕ್ಷ ಡೋಸ್ ಲಸಿಕೆ

ಭಾರತಕ್ಕೆ ಎರಡು ಹಂತಗಳಲ್ಲಿ 50 ಲಕ್ಷ ಡೋಸ್ ಲಸಿಕೆ

ಅಮೆರಿಕಾ ಘೋಷಿಸಿರುವ ಕೊರೊನಾವೈರಸ್ ಲಸಿಕೆ ಹಂಚಿಕೆ ಯೋಜನೆ ಪ್ರಕಾರ ಭಾರತಕ್ಕೆ 30 ರಿಂದ 50 ಲಕ್ಷ ಡೋಸ್ ಲಸಿಕೆ ಸಿಗುವ ನಿರೀಕ್ಷೆಯಿದೆ. ದೇಶದಲ್ಲಿ ಒಂದೇ ದಿನ ಈ ಪ್ರಮಾಣಕ್ಕಿಂತ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಿದ ಮೊದಲ ದಿನವೇ ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಸೋಮವಾರ ರಾತ್ರಿ 8 ಗಂಟೆ ವೇಳೆಗೆ 80,95,314 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಹಿಂದೆ ಏಪ್ರಿಲ್ 2ರಂದು ಅತಿಹೆಚ್ಚು ಅಂದರೆ 42,65,157 ಜನರಿಗೆ ಲಸಿಕೆ ನೀಡಿರುವುದೇ ದಾಖಲೆಯಾಗಿತ್ತು.

ಸ್ಥಳೀಯವಾಗಿ ಕೊರೊನಾವೈರಸ್ ಲಸಿಕೆ ಉತ್ಪಾದನೆ

ಸ್ಥಳೀಯವಾಗಿ ಕೊರೊನಾವೈರಸ್ ಲಸಿಕೆ ಉತ್ಪಾದನೆ

"ಜಾಗತಿಕ ಮಟ್ಟದಲ್ಲಿ ಲಸಿಕೆ ಉತ್ಪಾದನೆ ವ್ಯಾಪ್ತಿಯನ್ನು ವೃದ್ಧಿಸಬೇಕಿದೆ. ನಮ್ಮ ಕ್ವಾಡ್ ಸಹಭಾಗಿತ್ವ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮದ ಸಹಕಾರದೊಂದಿಗೆ ಸ್ಥಳೀಯವಾಗಿ ಹೆಚ್ಚುವರಿ ಲಸಿಕೆ ಉತ್ಪಾದಿಸುವುದಕ್ಕೆ ಯುಎಸ್ ಬದ್ಧವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ 2021-22ನೇ ಸಾಲಿನಲ್ಲಿ 100 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಾಗುವುದು", ಎಂದು ಶ್ವೇತಭವನ ಹೇಳಿದೆ.

ಕೊವಿಡ್-19 ಲಸಿಕೆ ಹಂಚಿಕೆ ಬಗ್ಗೆ ಶ್ವೇತ ಭವನ ಮಾಹಿತಿ

ಕೊವಿಡ್-19 ಲಸಿಕೆ ಹಂಚಿಕೆ ಬಗ್ಗೆ ಶ್ವೇತ ಭವನ ಮಾಹಿತಿ

ಶ್ವೇತ ಭವನ ನೀಡಿರುವ ಮಾಹಿತಿ ಪ್ರಕಾರ, ಕೊರೊನಾವೈರಸ್ ಲಸಿಕೆ ಹಂಚಿಕೆಗೆ ಈ ರೀತಿಯಾಗಿ ಯೋಜನೆಯನ್ನು ರೂಪಿಸಲಾಗಿದೆ. ಕೊವಿಡ್-19 ಲಸಿಕೆ ಹಂಚಿಕೆ ಮಾನದಂಡ ಹಾಗೂ ಪ್ರಮಾಣದ ಕುರಿತು ಉಲ್ಲೇಖಿಸಿರುವ ಅಂಶಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಯಾವ ರಾಷ್ಟ್ರಗಳಲ್ಲಿ ಎಷ್ಟು ಪ್ರಮಾಣದ ಲಸಿಕೆ?:

* ಎರಡನೇ ಹಂತದಲ್ಲಿ ಘೋಷಿಸಿದ 55 ದಶಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯಲ್ಲಿ ಶೇ.75ರಷ್ಟು ಪ್ರಮಾಣವನ್ನು ಅಂದರೆ 41 ದಶಲಕ್ಷ ಡೋಸ್ ಅನ್ನು ಈ ರೀತಿ ಹಂಚಿಕೆ ಮಾಡಲಾಗುತ್ತಿದೆ.

* ಲ್ಯಾಟಿನ್ ಅಮೆರಿಕಾ, ಕೆರಿಬಿಯನ್ 14 ದಶಲಕ್ಷ ಡೋಸ್ ಲಸಿಕೆ: ಬ್ರೆಜಿಲ್, ಅರ್ಜೆಂಟೇನಿಯಾ, ಕೊಲಂಬಿಯಾ, ಪೆರು, ಪ್ಯಾರಾಗುವಾ, ಬೊಲಿವಿಯಾ, ಗುವಾಟೆಮಾಲಾ, ಇಎಲ್ ಸಲ್ವಾದೊರ್, ಹೊಂದುರಾಸ್, ಹೈಟಿ, ಡೊಮಿನಿಕನ್ ರಿಪಬ್ಲಿಕ್, ಪನಾಮಾ ಮತ್ತು ಕೊಸ್ಟಾ ರಿಕಾ

* ಏಷಿಯಾಗೆ 16 ದಶಲಕ್ಷ ಡೋಸ್ ಲಸಿಕೆ: ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ್, ಮಾಲ್ಡೀವ್ಸ್, ಭೂತಾನ್, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ಥೈಲ್ಯಾಂಡ್, ಮಲೇಶಿಯಾ, ಲಾವೊಸ್, ಪಪುವಾ, ತೈವಾನ್, ಕಾಂಬೊಡಿಯಾ ಮತ್ತು ಪೆಸಿಫಿಕ್ ದ್ವೀಪ

* ಆಫ್ರಿಕನ್ ಒಕ್ಕೂಟದ ಜೊತೆಗಿನ ಸಹಕಾರದೊಂದಿಗೆ ಆಫ್ರಿಕಾದ ಆಯ್ದ ರಾಷ್ಟ್ರಗಳಿಗೆ 10 ದಶಲಕ್ಷ ಡೋಸ್ ಲಸಿಕೆ

* 14 ದಶಲಕ್ಷ ಡೋಸ್ ಅಂದರೆ 55 ದಶಲಕ್ಷ ಡೋಸ್ ಲಸಿಕೆಯ ಶೇ.25ರಷ್ಟು ಪ್ರಮಾಣವನ್ನು ಈ ರಾಷ್ಟ್ರಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅರ್ಜೆಂಟೇನಿಯಾ, ಹೈಟಿ ಹಾಗೂ ಇತರೆ ಕ್ಯಾರಿಕೊಮ್ ರಾಷ್ಟ್ರಗಳು, ಡೊಮಿನಿಕನ್ ರಿಪಬ್ಲಿಕನ್, ಕೊಸ್ಟಾ ರಿಕಾ, ಪನಾಮಾ, ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಪಾಕಿಸ್ತಾನ, ಫಿಲಿಫೈನ್ಸ್, ವಿಯೆಟ್ನಾಂ, ಇಂಡೋನೆಷ್ಯಾ, ದಕ್ಷಿಣ ಆಫ್ರಿಕಾ, ನೈಜಿರಿಯಾ, ಕೀನ್ಯಾ, ಘಾನ, ಕ್ಯಾಬೊ ವರ್ದೆ, ಈಜಿಪ್ಟ್, ಇರಾಕ್, ಯೆಮನ್, ಟುನಿಸಿಯಾ, ಓಮನ್, ಉಕ್ರೇನ್, ಕೊಸೊವೊ, ಮಾಲ್ಡೊವಾ.

English summary
US Announces 55 Million Vaccine Doses For Global Distribution, India Not To Get More Than 2 Million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X