ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತೀಕಾರ ತೀರಿಸಿದ ಅಮೆರಿಕ: ಐಎಸ್‌ಐಎಸ್‌-ಕೆ ಉಗ್ರರ ಮೇಲೆ ವಾಯು ದಾಳಿ

|
Google Oneindia Kannada News

ಕಾಬೂಲ್‌, ಆಗಸ್ಟ್‌ 28: ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವ ಅಪ್ಘಾನಿಸ್ತಾನದ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ಬಾಂಬ್‌ಕೋರ ನೂರಾರು ಜನರ ಸಾವಿಗೆ ಕಾರಣವಾದ 48 ಗಂಟೆಯೊಳಗೆ "ಇಸ್ಲಾಮಿಕ್‌ ಸ್ಟೇಟ್‌ ಸದಸ್ಯರ ವಿರುದ್ದ ಯುಎಸ್‌ ಮಿಲಿಟರಿ ಪಡೆ ವಾಯು ದಾಳಿ ನಡೆಸಿದ್ದೇವೆ," ಎಂದು ಯುಎಸ್‌ ತಿಳಿಸಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಇನ್ನಷ್ಟು ಬಾಂಬ್‌ ದಾಳಿಗಳು ನಡೆಯುವ ಆತಂಕ ಜನರಿಗೆ ಎದುರಾಗಿದೆ.

ಕಾಬೂಲ್ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಹುತಾತ್ಮರಾಗಿದ್ದು 18 ಮಂದಿ ಗಾಯಗೊಂಡಿದ್ದಾರೆ. 90 ಕ್ಕೂ ಹೆಚ್ಚು ಅಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ. ಅಮೆರಿಕ ಸೈನಿಕರನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಸ್ಥಳೀಯ ಶಾಖೆ ಐಸಿಸ್-ಕೆ ಹೊಣೆಯನ್ನು ಹೊತ್ತುಕೊಂಡಿದೆ.

ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ; ಪ್ರತಿಜ್ಞೆ ಮಾಡಿದ ಬೈಡನ್ನಿಮ್ಮನ್ನು ಬೇಟೆಯಾಡಿ ಕೊಲ್ಲುತ್ತೇವೆ; ಪ್ರತಿಜ್ಞೆ ಮಾಡಿದ ಬೈಡನ್

ಈ ಹಿನ್ನೆಲೆ ಶುಕ್ರವಾರ ಯುಎಸ್‌ ಈ ಬಾಂಬ್‌ ದಾಳಿ ಹೊಣೆ ಹೊತ್ತುಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಗುಂಪಿನ ವಿರುದ್ದವಾಗಿ ಡ್ರೋನ್‌ ದಾಳಿ ನಡೆಸಿದೆ. ಇನ್ನು ಈ ಡ್ರೋನ್‌ ದಾಳಿಗೂ ಮುನ್ನ ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಏರ್ ಪೋರ್ಟ್ ಗೇಟ್ ಸುತ್ತಮುತ್ತಲ ಪ್ರದೇಶಕ್ಕೆ ತೆರಳದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

US airstrike targets Islamic State in Afghanistan for deadly Kabul airport blast

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಕೇಂದ್ರ ಕಮಾಂಡ್‌ ಪಡೆಯ ಕಾಪ್ಟನ್‌ ಬಿಲ್‌ ಅರ್ಬನ್‌, "ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಅನಾಮಧೇಯ ವಾಯು ದಾಳಿ ನಡೆಸಲಾಗಿದೆ. ಈ ದಾಳಿಯ ಮೂಲಕ ನಾವು ನಮ್ಮ ಗುರಿ ಯಾರಿದ್ದರೋ ಅವರನ್ನು ಕೊಂದಿದ್ದೇವೆ ಎಂದು ಹೇಳಬಹುದು," ಎಂದು ತಿಳಿಸಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲೇ "ಯಾವುದೇ ನಾಗರಿಕರು ಸಾವನ್ನಪ್ಪಿಲ್ಲ," ಎಂದು ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ನಡೆಸಿದ ಬಳಿಕ ಮೊದಲ ಬಾರಿಗೆ ಅಮೆರಿಕ ನಡೆಸಿದ ಡ್ರೋನ್‌ ದಾಳಿ ಬಗ್ಗೆ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನದಿಂದ ಹೊರ ಭಾಗದಿಂದ ಈ ದಾಳಿಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಕಾಬೂಲ್‌ನ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರು ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ ನಂತರದಲ್ಲಿ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿದೆ.

ಕಾಬೂಲ್ ಏರ್‌ಪೋರ್ಟ್‌ನಲ್ಲಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆ: ಬೈಡನ್ಕಾಬೂಲ್ ಏರ್‌ಪೋರ್ಟ್‌ನಲ್ಲಿ ಮತ್ತಷ್ಟು ದಾಳಿ ನಡೆಯುವ ಸಾಧ್ಯತೆ: ಬೈಡನ್

ಕಾಬೂಲ್ ವಿಮಾನ ನಿಲ್ದಾಣ ಬಳಿ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಸೇರಿದಂತೆ ನೂರಕ್ಕು ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು, ಇನ್ನು ಕೆಲವು ಮಾಧ್ಯಮಗಳು ಈ ಆತ್ಮಾಹುತಿ ಬಾಂಬ್‌ ದಾಳಿಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 200 ಕ್ಕೆ ಏರಿಕೆ ಕಂಡಿದೆ ಎಂದು ವರದಿ ಮಾಡಿದೆ. ಇನ್ನು ಯುಎಸ್‌ ಅಧಿಕಾರಿಗಳು ಈ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಬಂದೂಕು ಹೊಂದಿದ್ದ ವ್ಯಕ್ತಿ ಗುಂಡಿನ ದಾಳಿಯನ್ನು ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ದಾಳಿಯ ಬೆನ್ನಲ್ಲೇ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರತೀಕಾರ ಸಾಧಿಸುವ ಪ್ರತಿಜ್ಞೆಯನ್ನು ಮಾಡಿದ್ದರು. "ಅಮೆರಿಕಕ್ಕೆ ಹಾನಿ ಉಂಟು ಮಾಡಲು ಈ ದಾಳಿಯನ್ನು ನಡೆಸುವ ಉದ್ದೇಶ ಹೊಂದಿರುವವವರು, ಹಾಗೆಯೇ ಈ ಆತ್ಮಾಹುತಿ ಬಾಂಬ್‌ ದಾಳಿಯನ್ನು ನಡೆಸಿದವರು ನನ್ನ ಈ ಮಾತನ್ನು ನೆನಪಿಟ್ಟುಕೊಳ್ಳಿ. ನಾವು ನಿಮ್ಮ ಕ್ಷಮಿಸಲಾರೆವು. ನಾವು ಈ ದಾಳಿಯನ್ನು ಮರೆಯಲಾರೆವು. ನಾವು ನಿಮ್ಮನ್ನು ಬೇಟೆಯಾಡುತ್ತೇವೆ. ನೀವು ನಿಮ್ಮ ತಪ್ಪಿಗೆ ಬೆಲೆ ತೆರುವಂತೆ ಮಾಡುತ್ತೇವೆ," ಎಂದು ಜೋ ಬೈಡೆನ್‌ ಖಡಕ್‌ ಎಚ್ಚರಿಕೆ ನೀಡಿದ್ದರು.

"ಈ ಸಾವುಗಳಿಗೆ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡೇ ನೀಡುತ್ತೇವೆ. ದಾಳಿ ನಡೆಸಿದವರು ಯಾರೆಂದು ನಮಗೆ ತಿಳಿದಿದೆ. ಅದು ಖಚಿತವಾದ ಬಳಿಕ ನಾವು ಅವರನ್ನು ಬೇಟೆಯಾಡದೇ ಬಿಡುವುದಿಲ್ಲ," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶ್ವೇತಭವನದಲ್ಲಿ ಪ್ರತಿಜ್ಞೆ ಮಾಡಿದ್ದರು. ಹಾಗೆಯೇ ಈ ದಾಳಿಯ ಹೊರತಾಗಿಯೂ ಅಫ್ಘಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ" ಎಂದು ಭರವಸೆ ನೀಡಿದ್ದರು. ಈ ಬೆನ್ನಲ್ಲೇ ಅಮೆರಿಕ ಕೇಂದ್ರ ಕಮಾಂಡ್‌ ಪಡೆಯ ಕಾಪ್ಟನ್‌ ಬಿಲ್‌ ಅರ್ಬನ್‌, "ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಅನಾಮಧೇಯ ವಾಯು ದಾಳಿ ನಡೆಸಲಾಗಿದೆ. ಈ ದಾಳಿಯ ಮೂಲಕ ನಾವು ನಮ್ಮ ಗುರಿ ಯಾರಿದ್ದರೋ ಅವರನ್ನು ಕೊಂದಿದ್ದೇವೆ ಎಂದು ಹೇಳಬಹುದು," ಎಂದು ತಿಳಿಸಿದ್ದಾರೆ.

Recommended Video

DGCA ಟೈಪ್ ಸರ್ಟಿಫಿಕೇಟ್ ಗೆ HAL ನ ಯಶಸ್ವಿ ಪ್ರಯೋಗ | Oneindia Kannada

(ಒನ್‌ ಇಂಡಿಯಾ ಸುದ್ದಿ)

English summary
Killed The Target: US airstrike targets Islamic State in Afghanistan for deadly Kabul airport blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X