ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ನಿಂದ ಅಮೆರಿಕದ 17 ಬೇಹುಗಾರರ ಬಂಧನ; ಕೆಲವರಿಗೆ ಮರಣದಂಡನೆ

|
Google Oneindia Kannada News

ದುಬೈ, ಜುಲೈ 22: ಇರಾನ್ ನಿಂದ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ (ಸಿಐಎ) 17 ಕಾರ್ಯನಿರತ ಬೇಹುಗಾರರನ್ನು ಬಂಧಿಸಿದ್ದು, ಆ ಪೈಕಿ ಕೆಲವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಇರಾನ್ ನ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ನ ಸರಕಾರಿ ಸುದ್ದಿ ಸಂಸ್ಥೆಯು ಗುಪ್ತಚರ ಸಚಿವಾಲಯದ ಹೇಳಿಕೆ ಉದಾಹರಿಸಿ, ಸಿಐಎನ ಬೇಹುಗಾರಿಕೆ ಜಾಲವನ್ನು ಭೇದಿಸಿ, 17 ಶಂಕಿತರನ್ನು ಬಂಧಿಸಿದೆ. ಇನ್ನು ಬಂಧಿತರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಇಸ್ಲಾಮಿಕ್ ಸ್ಟೇಟ್, ಅಲ್ ಕೈದಾದಂಥವು ಅಮೆರಿಕದ ಸಾಹಸ ಉತ್ಪನ್ನಗಳುಇಸ್ಲಾಮಿಕ್ ಸ್ಟೇಟ್, ಅಲ್ ಕೈದಾದಂಥವು ಅಮೆರಿಕದ ಸಾಹಸ ಉತ್ಪನ್ನಗಳು

ಮೇ ತಿಂಗಳ ಆರಂಭದಲ್ಲಿ ಇರಾನ್ ವಿರುದ್ಧದ ದಿಗ್ಬಂಧನಗಳನ್ನು ಅಮೆರಿಕವು ಮತ್ತಷ್ಟು ಬಿಗಿಗೊಳಿಸಿದ್ದು, ಕಳೆದ ವಾರ ಇರಾನ್ ನಿಂದ ಬ್ರಿಟಿಷ್ ಟ್ಯಾಂಕರ್ ಅನ್ನು ಹರ್ಮೋಜ್ ಜಲಸಂಧಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಅದಕ್ಕೂ ಬ್ರಿಟನ್ ನ ರಾಯಲ್ ಮರೀನ್ ನಿಂದ ಗಿಬ್ರಲ್ತರ್ ನಲ್ಲಿ ಇರಾನ್ ಟ್ಯಾಂಕರ್ ಅನ್ನು ವಶಕ್ಕೆ ಪಡೆದಿತ್ತು.

US 17 spy agents arrested by Iran; some sentenced to death

ಈಗ ಗುರುತಿಸಲಾಗಿರುವ ಬೇಹುಗಾರರು ತುಂಬ ಪ್ರಮುಖವಾದ ಆರ್ಥಿಕ ಕೇಂದ್ರ, ಅಣು, ಮೂಲಸೌಕರ್ಯ, ಮಿಲಿಟರಿ ಹಾಗೂ ಸೈಬರ್ ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನಿಯೋಜಿತರಾಗಿದ್ದರು. ಕೆಲವು ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು ಎಂದು ಸಚಿವಾಲಯದ ಹೇಳಿಕೆಯಲ್ಲಿ ಟೀವಿಯಲ್ಲಿ ಓದಿ ಹೇಳಲಾಗಿದೆ.

ಸಿಐಎ ಇರಾನ್ ನಲ್ಲಿ ಅತಿ ದೊಡ್ಡ ಸೈಬರ್ ಬೇಹುಗಾರಿಕೆ ನಡೆಸುತ್ತಿದ್ದು, ಅದನ್ನು ಬಯಲು ಮಾಡಿದ್ದೇವೆ ಎಂದು ಜೂನ್ ನಲ್ಲಿ ಹೇಳಲಾಗಿತ್ತು. ಈಗ ಆಗಿರುವ ಬಂಧನ ಅದೇ ಪ್ರಕರಣಕ್ಕೆ ಸಂಬಂಧಿಸಿದ್ದಾ ಎಂಬ ಬಗ್ಗೆ ಖಾತ್ರಿ ಆಗಿಲ್ಲ. ಇನ್ನು ಅಮೆರಿಕದ ಹಲವು ಬೇಹುಗಾರರನ್ನು ವಿವಿಧ ದೇಶಗಳಲ್ಲಿ ಬಂಧಿಸಲಾಗಿದೆ.

English summary
US 17 CIA spy agents arrested by Iran and some sentenced to death. This report by state media of Iran, quote intelligence ministry statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X