ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.29: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.29: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

19.30: ಏಷ್ಯನ್ ಗೇಮ್ಸ್ ನ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸಾನಿಯಾ ಹಾಗೂ ಸಾಕೇತ್ ಜೋಡಿ. ಚೈನೀಸ್ ತೈಪೆಯ ಯುನ್ ಹೂ ಚಿಂಗ್ ಜೋಡಿಯನ್ನು 6-4, 6-3 ರ ನೇರ ಸೆಟ್ ಗಳಲ್ಲಿ ಸೋಲಿಸಿದರು.

Sania Mirza

14.10: ಅಮೆರಿಕದ 15ಕ್ಕೂ ಅಧಿಕ ಟಾಪ್ ಕಂಪನಿಗಳ ಸಿಇಒಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಲಾಗಿದೆ. [ಸಿಇಒಗಳ ಪಟ್ಟಿ]
13.20: ತಮಿಳುನಾಡಿನ ನೂತನ ಸಿಎಂ ಆಗಿ ಓ ಪನ್ನೀರ್ ಸೆಲ್ವಂ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Narendra Modi

13.00: ಸ್ಯಾಮ್ ಸಂಗ್ ಗ್ಯಾಲಕ್ಸಿ ಆಲ್ಫಾ ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಬೆಲೆ ಸುಮಾರು 39,990 ರು ಎಂದು ನಿಗದಿಪಡಿಸಲಾಗಿದೆ.
12.45: ವಿಶ್ವ ಯೋಗ ದಿನಾಚರಣೆ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ನೇಪಾಳ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
12.30: ಜನರಲ್ ಮೋಟರ್ಸ್ ಸಂಸ್ಥೆ ಭಾರತದಿಂದ ತನ್ನ ಕಾರುಗಳನ್ನು ಇದೇ ಪ್ರಥಮ ಬಾರಿಗೆ ಸೋಮವಾರದಿಂದ ರಫ್ತು ಮಾಡಲು ಆರಂಭಿಸಿದೆ.
11.30: ಆಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತಮ್ಮ ವಿರುದ್ಧ ನೀಡಿರುವ
ತೀರ್ಪನ್ನು ಪ್ರಶ್ನಿಸಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

10.00: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಒಂಬತ್ತನೆ ದಿನ ಭಾರತ ಭರ್ಜರಿ ಪದಕಗಳ ಬೆಳೆ ತೆಗೆದಿದೆ. ಕುಸ್ತಿಪಟು ಯೋಗೀಶ್ವರ್ ದತ್ ಚಿನ್ನ ಗೆದ್ದರೆ, ರೇಸ್ ವಾಕ್‌ನಲ್ಲಿ ಖುಶ್ಬೀರ್ ಕೌರ್ ಬೆಳ್ಳಿ , ಅಥ್ಲೆಟಿಕ್ಸ್ ನಲ್ಲಿ ಮಂಗಳೂರಿನ ಎಂ.ಆರ್‌ ಪೂವಮ್ಮಗೆ ಕಂಚು ಸೇರಿದಂತೆ ಒಟ್ಟು 8 ಪದಕಗಳು ಭಾರತಕ್ಕೆ ಸಿಕ್ಕಿದೆ.

9.45: ಒಟ್ಟಾರೆ ಭಾರತ 4 ಚಿನ್ನ, 5 ಬೆಳ್ಳಿ, 26 ಕಂಚು ಸೇರಿದಂತೆ ಒಟ್ಟು 35 ಪದಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

Yogeshwar Dutt

9.30: ಮೈಕಲ್ ಜಾಕ್ಸನ್, ಎಲ್ವಿಸ್ ಪ್ರೆಸ್ಲೆ, ಲೆಡ್ ಜೆಪ್ಪೆಲಿನ್, ಮಡೋನ್ನಾ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಸಂಚಲನ ಮೂಡಿಸಿದ್ದಾರೆ.
9.15: ಜೆ. ಜಯಲಲಿತಾ ಅವರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಮನನೊಂದು ಸುಮಾರು 25ಕ್ಕೂ ಅಧಿಕ ಅಭಿಮಾನಿಗಳು ಸಾವನ್ನಪ್ಪಿರುವ ಸುದ್ದಿ ಬಂದಿದೆ.
9.00: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
English summary
Top news in brief for the day: Sania Mirza-Saketh Sai Myneni win Mixed Doubles gold beating Chinese Taipei Hsien Yin-Hao Ching 6-4, 6-3 in final at the Asian Games and many news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X