ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.23: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

12.00: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ದೆಹಲಿಯ ವಕೀಲ ಗೌತಮ್ ಖೈತಾನ್ ಅವರನ್ನು ವಶಕ್ಕೆ ಪಡೆದು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿದೆ.

11.45: ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಶೂಟರ್ ಗಳ ಪದಕ ಬೇಟೆ ಮುಂದುವರಿದಿದೆ. 10 ಮೀಟರ್ ಏರ್​ ರೈಫಲ್​ನಲ್ಲಿ ಶೂಟರ್​ ಅಭಿನವ್ ಬಿಂದ್ರಾ ಕಂಚಿನ ಪದಕ ಗೆದ್ದಿದ್ದಾರೆ. ​ವೃತ್ತಿ ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಸೋಮವಾರ ಟ್ವೀಟ್ ಮಾಡಿದ್ದ ಬಿಂದ್ರಾ ಅವರು ಅವಕಾಶ ಸಿಕ್ಕರೆ 2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದಿದ್ದಾರೆ.

Shooter Abhinav

10.40: ಅಮೆರಿಕದ ವೈಮಾನಿಕ ದಾಳಿಯ ನಂತರ ರಕ್ಕಾ ಪ್ರದೇಶದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸ್ಥಗಿತಗೊಂಡು, ಕತ್ತಲು ಆವರಿಸಿದೆ.

10.30: ಇಸ್ಲಾಮಿಕ್ ರಾಜ್ಯದ ಉಗ್ರರನ್ನು ಸಂಪೂರ್ಣವಾಗಿ ಸದೆಬಡೆಯುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆದೇಶಿಸಿದ್ದಾರೆ.

Updates India, International News in Brief Sept 23

10.15: ಇರಾಕಿನ ಇಸ್ಲಾಮಿಕ್ ರಾಜ್ಯ ಉಗ್ರ ಸಂಘಟನೆ(ಐಎಸ್ಐಎಸ್) ಮೇಲೆ ಮೊದಲ ಬಾರಿಗೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ.

10.10: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಮಂಗಳವಾರ ಆಗಮಿಸಲಿದ್ದಾರೆ. ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಮಂಗಳಯಾನದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

10.05: ಮಂಗಳ ಯಾನ ನೌಕೆ ಸೆ.24 ರಂದು ಬೆಳಗ್ಗೆ 7.17ರಿಂದ ಮಂಗಳ ಗ್ರಹದ ಕಕ್ಷೆಗೆ ಸೇರುವ ಪ್ರಕ್ರಿಯೆ ಆರಂಭಗೊಳ್ಳಲಿದೆ.

English summary
Top news in brief for the day: Ace Indian shooter Abhinav Bindra claimed his first Asian Games individual medal by winning the bronze in the men's 10 metre air rifle event at the Ongnyeon International Shooting Range here on Tuesday and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X