ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.18: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.18: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

13.00: ಕೋಲ್ಕತ್ತಾದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿದ ಟ್ಯಾಕ್ಸಿ ವಾಹನಗಳ ಮುಷ್ಕರ. 37,000ಕ್ಕೂ ಅಧಿಕ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಳಿಸಿವೆ. ಬೆಲೆ ಏರಿಕೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಟ್ಯಾಕ್ಸಿ ಮಾಲೀಕರು ಧರಣಿ ಹೂಡಿದ್ದಾರೆ.

12.00: ಯುನೈಟೆಡ್ ಕಿಂಗ್ ಡಮ್ ನಿಂದ ಸ್ಕಾಟ್ಲೆಂಡ್ ಪ್ರತ್ಯೇಕಗೊಳ್ಳುವುದರ ಬಗ್ಗೆ ಗುರುವಾರ ಮತದಾನ ನಡೆದು ಫಲಿತಾಂಶ ಹೊರಬೀಳಲಿದೆ. [ಸ್ಕಾಟ್ಲೆಂಡ್ ಸಮಸ್ಯೆ ಸಮೀಕ್ಷೆ ವಿವರ ಓದಿ]

Kolkata Taxi

11.50: ಚೀನಾ ಹಾಗೂ ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿರುವ ವೇಳೆಯಲ್ಲೇ ಲಡಾಕ್ ನಲ್ಲಿ ಚೀನಿ ಯೋಧರು ಭಾರರ್ತದ ಗಡಿ ಅತಿಕ್ರಮಣ ಮಾಡಿರುವ ವರದಿ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರು ಖುದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. [ಎರಡನೇ ದಿನದ ಮುಖ್ಯಾಂಶಗಳು]
Updates India, International News in Brief Sept 18

11.40: ಪಶ್ಚಿಮ ಬಂಗಾಳದ ಜಾಧವ್ ಪುರ್ ವಿವಿಯಲ್ಲಿ ವಿದ್ಯಾರ್ಥಿ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ವರದಿ ಬಂದಿದೆ.
11.30: ಕುಡಿದು ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ 11 ಜ್ಯೂನಿಯರ್ ಜಡ್ಜ್ ಗಳನ್ನು ಅಮಾನತು ಮಾಡಲು ಅಲಹಾಬಾದ್ ಹೈಕೋರ್ಟ್ ಶಿಫಾರಸು ಮಾಡಿದೆ.
11.15: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಭಾರತ ಪ್ರವಾಸವನ್ನು ವಿರೋಧಿಸಿ ನವದೆಹಲಿಯ ಹೈದರಾಬಾದ್ ಹೌಸ್ ಎದುರು ಟಿಬೇಟಿಯನ್ನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
English summary
Updates India, International News in Brief:Commuters were left stranded and harried on Thursday as Kolkata's taxis stayed off the roads again after their unions called an indefinite strike to press for a fare hike and to protest "police excesses" and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X