ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.18 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.18: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.25: ಮುಂಬೈ ಉಪನಗರದ ಪಶ್ಚಿಮ ಭಾಗದಲ್ಲಿರುವ ವಾಣಿಜ್ಯ ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿದ್ದು, ಪ್ರಮುಖ ನಟ ನಟಿಯರ ಕಚೇರಿಗಳು ಇದೇ ಕಾಂಪ್ಲೆಕ್ಸ್ ನಲ್ಲಿದೆ.
5.15: ಅಂಧೇರಿಯ ಲೋಟಸ್ ಬಿಸಿನೆಸ್ ಪಾರ್ಕಿನ 22 ಅಂತಸ್ತಿನ 21ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
4.30: ಮುಂಬೈ ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರು ಪ್ರಾಣಾಪಾಯಕ್ಕೆ ಸಿಕ್ಕಿ ಹಾಕಿಕೊಂಡಿದ್ದರು. ವಾಯುಸೇನೆ ಹೆಲಿಕಾಪ್ಟರ್ ಬಳಸಿ ಅವರನ್ನು ರಕ್ಷಿಸಲಾಗಿದೆ.

Updates India, International News in Brief on July 18

3.30: ಮಲೇಷಿಯನ್ ವಿಮಾನ ದುರಂತದಲ್ಲಿ ಅನಿವಾಸಿ ಭಾರತೀಯರೊಬ್ಬರು ಬಿಟ್ಟರೆ ಮಿಕ್ಕಂತೆ ಭಾರತೀಯರು ಸಾವನ್ನಪ್ಪಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಹೇಳಿದ್ದಾರೆ.
2.30: ಬಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಅನಾರೋಗ್ಯದ ಕಾರಣ ಕಾಮನ್ ವೆಲ್ತ್ ಗೇಮ್ಸ್ 2015 ನಿಂದ ಹೊರಗುಳಿಯುತ್ತಿದ್ದಾರೆ.

1.15 : ಒಡಿಶಾದ ಮೋಸ್ಟ್ ವಾಂಟೆಡ್ ನಕ್ಸಲರ ಪ್ರಮುಖ ನಾಯಕ ಸಬ್ಯಸಾಚಿ ಪಾಂಡಾನನ್ನು ಒಡಿಶಾ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

10.50 : ರಷ್ಯಾ ಹಾಗೂ ಉಕ್ರೇನ್ ಗಡಿಯ ಮೇಲೆ ಭಾರತದ ವಿಮಾನ ಹಾರಾಟ ನಿಲ್ಲಿಸಲಾಗಿದೆ. ಭಾರತ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಹೇಳಿವೆ
10.45: ಉಕ್ರೇನ್ ಪ್ರತ್ಯೇಕತಾವಾದಿಗಳ ದಾಳಿಗೆ ತುತ್ತಾಗಿ ರಷ್ಯಾದ ಗಡಿಯಲ್ಲಿ ಮಲೇಷಿಯಾ ವಿಮಾನ ಪತನವಾದ ಸಂದರ್ಭದಲ್ಲೇ ರಷ್ಯಾ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

Updates India, International News in Brief on July 18

10.35 : ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಷ್ಯಾ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದು, ಆರ್ಥಿಕ, ಸೇನಾ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ಬಂಧ ಜಾರಿಯಲ್ಲಿದೆ.
10.30 : ರಮ್ಮಸನ್ ಚಂಡಮಾರುತದ ಅಬ್ಬರಕ್ಕೆ ಫಿಲಿಪ್ಪೀನ್ಸ್ ತತ್ತರಿಸಿದ್ದು, ಇಲ್ಲಿವರೆಗೂ 38 ಜನ ಮೃತಪಟ್ಟಿದ್ದಾರೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
10.25 : ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗೆ ಊಟದ ಜೊತೆ ಐಸ್ ಕ್ರೀಂ ಕೊಡದೇ ಇದ್ದ ಕಾರಣ ಔರಂಗಾಬಾದ್ ನ ಗೆಸ್ಟ್ ಹೌಸ್ ನ ಇಬ್ಬರು ಇಂಜಿನಿಯರ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
English summary
Top news in brief for the day: Indian carriers, Air India and Jet Airways, are likely to avoid the airspace of war-torn eastern Ukraine in view of reported shooting down of a Malaysian airliner and many more news from the around the globe on July 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X