ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.7: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.10: ಒಲಿಂಪಿಕ್ಸ್ ಈಜು ಚಾಂಪಿಯನ್ ಮೈಕಲ್ ಫೆಲ್ಪ್ಸ್ ಅವರಿಗೆ 6 ವರ್ಷಗಳ ನಿಷೇಧ ಹಾಗೂ 2015ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ. ಅಮೆರಿಕದ ಈಜು ಸಂಸ್ಥೆ ನಿಯಮಗಳನ್ನು ಮೀರಿದ್ದರಿಂದ ಈ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗೆ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ದಂಡ ತೆತ್ತಿದ್ದರು.

9.50 : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದಲ್ಲಿ ಮಂಗಳವಾರದಿಂದ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

MIcheal Phelps

9.40: ಮೋದಿ ಪರ ಟ್ವೀಟ್ ಮಾಡಿದ ಶಶಿ ತರೂರ್ ವಿರುದ್ಧ ಕೇರಳ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
9.35: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಜಾಮೀನು ಅರ್ಜಿ ವಿಚಾರಣೆ ಕರ್ನಾಟಕದ ಹೈಕೋರ್ಟ್ ನಲ್ಲಿ ನಡೆಯಲಿದೆ. ಚೆನ್ನೈನ ಜೆಜೆ ಸ್ಟೇಡಿಯಂನಲ್ಲಿ ಅಪಾರ ಸಂಖ್ಯೆಯಲ್ಲಿ ಜಯಾ ಅಭಿಮಾನಿಗಳು ಸೇರಿದ್ದಾರೆ.

9.30: ಮಣಿಪುರದ ರಾಜಧಾನಿ ಇಂಫಾಲಕ್ಕೆ ಮ್ಯಾನ್ಮಾರ್ ನಿಂದ್ ಆಗಮಿಸಿದ ಜಪಾನಿ ಪ್ರವಾಸಿಗೆ ಎಬೋಲಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

9.15: ಫಿಪ್ಲ್ ಕಾರ್ಟ್ ಬಿಲಿಯನ್ ಡೇ ಆಫರ್ ಮೂಲಕ ಒಂದೇ ದಿನ ಸುಮಾರು 600 ಕೋಟಿ ರು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ ಅದರೆ, ಅನೇಕ ಗ್ರಾಹಕರಿಗೆ ಮೋಸ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

English summary
Top news in brief for the day: Olympic swim champion Michael Phelps banned for 6 months by USA Swimming and dropped from the 2015 World Championships and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X