ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಸೌದಿ ಅರೇಬಿಯಾವನ್ನು ಆಳುತ್ತಿರುವ ರಾಜಮನೆತನಕ್ಕೂ ಕೊರೊನಾ ಒಕ್ಕರಿಸಿದೆ. ರಾಜಮನೆತನದ ಸುಮಾರು 150ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ.

ಕಳೆದ ಕೆಲವು ವಾರಗಳ ಹಿಂದಷ್ಟೇ ಇವರು ಕೊರೊನಾಗೆ ತುತ್ತಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.ಸೌದಿ ರಾಜ ಫೈಜಲ್ ಬಿನ್ ಬಂದಾರ್ ಬಿನ ಅಬ್ದುಲಜೀಜ್ ಅಲ್ ಸೌದ್ ರಿಯಾಧ್‌ನ ಗವರ್ನರ್ ಆಗಿದ್ದಾರೆ.

ಅವರಿಗೆ 70 ವರ್ಷ ವಯಸ್ಸಾಗಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಅವರಿಗೆ ಚಿಕಿತ್ಸೆ ನೀಡುತ್ತಿರುವವರು ಸಾಕಷ್ಟು ವರ್ಷಗಳಿಂದ ಅವರ ಕುಟುಂಬದ ಜೊತೆ ಒಡನಾಟ ಹೊಂದಿದ ವೈದ್ಯರೇ ಆಗಿದ್ದಾರೆ ಎಂದು ಹೇಳಿದೆ.

ಲಂಡನ್‌ನಲ್ಲಿ ಕೊರೊನಾ ಗೆದ್ದ ಭಾರತ ಮೂಲದ 98 ವರ್ಷದ ಮಹಿಳೆ ಲಂಡನ್‌ನಲ್ಲಿ ಕೊರೊನಾ ಗೆದ್ದ ಭಾರತ ಮೂಲದ 98 ವರ್ಷದ ಮಹಿಳೆ

ರಾಜ ಸಲ್ಮಾನ್ ಹಾಗೂ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ.ಇಲೈಟ್ ಆಸ್ಪತ್ರೆಯಲ್ಲಿ ರಾಜ ಮನೆತನದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 500ಕ್ಕೂ ಹೆಚ್ಚು ಹಾಸಿಗೆಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ.

Up To 150 Members Of The Saudi Royal Family Infected With Coronavirus

ಎಷ್ಟು ಪ್ರಕರಣಗಳಿವೆ ಎಂದು ಇನ್ನೂ ತಿಳಿದುಬಂದಿಲ್ಲ ಆದರೆ ಹೈ ಅಲರ್ಟ್‌ನಲ್ಲಿರುವಂತೆ ಎಲ್ಲಾ ವೈದ್ಯರಿಗೂ ಸೂಚಿಸಲಾಗಿದೆ. ಎಲ್ಲಾ ದೀರ್ಘಕಾಲದ ರೋಗಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಅಲ್ಲಿ ಸಾಕಷ್ಟು ಮಂದಿ ಸೌದಿ ರಾಜರು ಯುರೋಪ್‌ನಿಂದ ಆಗಮಿಸಿದವರಿದ್ದಾರೆ. ಅವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ.

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ 1,042 ಬೆಡ್ ವ್ಯವಸ್ಥೆ

ಮಾರ್ಚ್ ಮೊದಲ ವಾರದಲ್ಲೇ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾ, ಮದೀನವನ್ನು ಬಂದ್ ಮಾಡಲಾಗಿತ್ತು.ಸಾಮಾನ್ಯವಾಗಿ ಜುಲೈನಲ್ಲಿ ಹಜ್ ಯಾತ್ರೆ ನಡೆಯುತ್ತದೆ. ಕಳೆದ ವರ್ಷ ಆ ಸಂದರ್ಭದಲ್ಲಿ 2.5 ಮಿಲಿಯನ್ ಜನರು ಸೌದಿ ಅರೇಬಿಯಾಕ್ಕೆ ಬಂದಿದ್ದರು.

ಮುಂದಿನ ಕೆಲವೇ ದಿನಗಳಲ್ಲಿ ಸುಮಾರು 2 ಲಕ್ಷ ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇದೆ ಜಾಗೃತವಾಗಿರಲು ತಿಳಿಸಲಾಗಿದೆ. ಸೌದಿ ರಾಜಮನೆತನದಲ್ಲಿ ಸುಮಾರು 15 ಸಾವಿರ ಮಂದಿ ಸದಸ್ಯರಿದ್ದಾರೆ.

English summary
As many as 150 members of the Saudi Arabian royal family may have been infected with coronavirus, according to a new report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X