ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾನಿಗಳೇ ಸಹಾಯ ಮಾಡಿ ಪ್ಲೀಸ್! ಕೈಮುಗಿದು ಕೇಳಿಕೊಂಡ ವಿಶ್ವಸಂಸ್ಥೆ!

|
Google Oneindia Kannada News

ಕೆಲವೇ ದಿನಗಳ ಹಿಂದೆ ಇದ್ದ ಸುಂದರವಾದ ಮನೆ ಈಗ ಉಳಿದಿಲ್ಲ, ಕುಡಿಯಲು ನೀರಿಲ್ಲ, ತಿನ್ನಲು ಅನ್ನವಿಲ್ಲ. ಎಲ್ಲೆಲ್ಲೂ ನರಕಮಯ ಪರಿಸ್ಥಿತಿ, ಹೆಜ್ಜೆ ಹೆಜ್ಜೆಗೂ ಕಾಡುವ ನೋವುಗಳು. ಅಂದಹಾಗೆ ಇದು ಗಾಜಾ ಪಟ್ಟಿಯಲ್ಲಿ ಸದ್ಯ ಕಂಡುಬರುತ್ತಿರುವ ದೃಶ್ಯಗಳು. ಬರೋಬ್ಬರಿ 11 ದಿನ ಭೀಕರ ಯುದ್ಧ ನಡೆಸಿದ್ದ ಇಸ್ರೇಲ್ ಸುಮ್ಮನಾಗಿದೆ. ಪ್ಯಾಲೆಸ್ತೇನ್ ಉಗ್ರರ ಮೇಲೆ ರೊಚ್ಚಿಗೆದ್ದು ಇಸ್ರೇಲ್ ಗಾಜಾ ಪಟ್ಟಿ ಮೇಲೆ ನಡೆಸಿದ್ದ ದಾಳಿಗೆ ಅರ್ಧಕರ್ಧ ಜಾಗ ನೆಲಸಮವಾಗಿದೆ.

ಪರಿಣಾಮ ಸಾವಿರಾರು ಮನೆ, ನೂರಾರು ಶಾಲಾ ಕಟ್ಟಡಗಳು, ಹತ್ತಾರು ಆಸ್ಪತ್ರೆಗಳು ಕೂಡ ಮಣ್ಣಾಗಿವೆ. ಪರಿಸ್ಥಿತಿ ಹೀಗಿರುವಾಗ ಸುಮಾರು 10 ಲಕ್ಷ ಜನರು ಅತ್ತ ಬದುಕಲೂ ಆಗದೆ, ಇತ್ತ ಸಾಯೋಕೂ ಆಗದ ಪರಿಸ್ಥಿತಿ ತಲುಪಿದ್ದಾರೆ. ಇಂತಹ ಹೊತ್ತಲ್ಲೇ ಗಾಜಾ ಪಟ್ಟಿಯ ನಿವಾಸಿಗಳಿಗೆ ನೆರವು ನೀಡಲು ವಿಶ್ವಸಂಸ್ಥೆ ಮುಂದೆ ಬಂದಿದೆ.

ಸದ್ಯದ ನಷ್ಟದ ಅಂದಾಜು 700 ಕೋಟಿ ರೂಪಾಯಿ ಗಾಜಾ ಪಟ್ಟಿಯ ಮರುನಿರ್ಮಾಣಕ್ಕೆ ಅಗತ್ಯವಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸಲು ವಿಶ್ವಸಂಸ್ಥೆ ಜಗತ್ತಿನಾದ್ಯಂತ ದಾನಿಗಳ ಮೊರೆ ಹೋಗಿದೆ. ಕಷ್ಟದಲ್ಲಿರುವ ಗಾಜಾ ಪಟ್ಟಿ ಜನರಿಗೆ ಸಹಾಯ ಮಾಡಿ ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ.

2 ಸಾವಿರ ಮನೆಗಳು ನಾಶ

2 ಸಾವಿರ ಮನೆಗಳು ನಾಶ

ಬರೋಬ್ಬರಿ 11 ದಿನಗಳ ಕಾಲ ನಡೆದ ಭೀಕರ ಕಾಳಗದಲ್ಲಿ ಸುಮಾರು 2000 ಸಾವಿರಕ್ಕೂ ಹೆಚ್ಚು ಮನೆಗಳು ಸರ್ವನಾಶವಾಗಿ ಹೋಗಿದ್ದರೆ, 15 ಸಾವಿರಕ್ಕೂ ಹೆಚ್ಚು ಮನೆಗಳು ಅರ್ಧ ಭಾಗ ಬಿದ್ದು ಹೋಗಿವೆ. ಇಸ್ರೇಲ್ ನಡೆಸಿದ ದಾಳಿ ಪರಿಣಾಮ ಗಾಜಾ ಪಟ್ಟಿ ಅಕ್ಷರಶಃ ನರಕವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ಅಟ್ಯಾಕ್ ಮಾಡುತ್ತಿತ್ತು. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯಿತು. ಸುಮಾರು 300 ನಾಗರಿಕರು ಬಡಿದಾಟದಲ್ಲಿ ಜೀವ ಕಳೆದುಕೊಂಡರು.

ಸಹಾಯ ಮಾಡಿದವರು ಅಂದರ್

ಸಹಾಯ ಮಾಡಿದವರು ಅಂದರ್

ಇಸ್ರೇಲ್‌ನಲ್ಲೇ ಇದ್ದು ಹಮಾಸ್ ಉಗ್ರರ ಪರ ನಿಂತಿದ್ದ ಆರೋಪದಡಿ ನೂರಾರು ಪ್ಯಾಲೆಸ್ತೇನ್ ಪ್ರಜೆಗಳನ್ನು ಬಂಧಿಸಲಾಗಿದೆ. ಅಷ್ಟಕ್ಕೂ ಇಸ್ರೇಲ್ ಹಿಂದೆ ಪ್ಯಾಲೆಸ್ತೇನ್‌ ಭಾಗವಾಗಿತ್ತು. ಆದರೆ ಅರ್ಧ ಶತಮಾನದ ಹಿಂದೆ ಪ್ಯಾಲೆಸ್ತೇನ್‌ನ ಮೂಲ ನಿವಾಸಿಗಳು ಚದುರಿ ಹೋಗಿದ್ದರು. ಈಗಲೂ ಇಸ್ರೇಲ್‌ನಲ್ಲಿ ಲಕ್ಷಾಂತರ ಪ್ಯಾಲೆಸ್ತೇನ್ ಜನರು ವಾಸಿಸುತ್ತಿದ್ದಾರೆ. ಆದ್ರೆ ಇಸ್ರೇಲ್‌ನಲ್ಲಿ ವಾಸವಿದ್ದ ಪ್ಯಾಲೆಸ್ತೇನಿಯರಲ್ಲಿ ಹಲವು ಯುವಕರು ಹಮಾಸ್ ಉಗ್ರರಿಗೆ ಸಹಾಯ ಮಾಡುತ್ತಿರುವ ಆರೋಪದಡಿ ಬಂಧಿತರಾಗಿದ್ದಾರೆ. ಈ ಬಾರಿ ತನ್ನ ಮೇಲೆ ನಡೆದಿರುವ ದಾಳಿಯನ್ನ ಇಸ್ರೇಲ್ ತೀಕ್ಷ್ಣವಾಗಿ ತೆಗೆದುಕೊಂಡಿದ್ದು, ದಾಳಿಗೆ ಸಹಾಯ ಮಾಡಿದವರನ್ನ ಶಿಕ್ಷಿಸುತ್ತಿದೆ.

ಗಲಾಟೆ ಶುರುವಾಗಿದ್ದು ಹೇಗೆ..?

ಗಲಾಟೆ ಶುರುವಾಗಿದ್ದು ಹೇಗೆ..?

1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಸಿದ್ದ ದಾಳಿಗೆ ಸುಮಾರು 300 ಜನ ಬಲಿಯಾಗಿದ್ದಾರೆ.

'ಹಮಾಸ್ ಉಗ್ರರು ಹೇಡಿಗಳು’

'ಹಮಾಸ್ ಉಗ್ರರು ಹೇಡಿಗಳು’

ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದರು ನೆತನ್ಯಾಹು. ತಮ್ಮ ಮಾತಿಗೆ ಬದ್ಧವಾಗಿ ನೆತನ್ಯಾಹು ದಾಳಿ ಮುಂದುವರಿಸಿದರೂ, 11 ದಿನದ ಬಳಿಕ ಕದನ ವಿರಾಮ ಘೋಷಿಸಿದ್ದರು.

English summary
After the deadly war Gaza strip has destroyed & UNO launched appeal for 95 million dollars aid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X