ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಪೂರೈಕೆ ನಿಲ್ಲಿಸೋಕೆ ಸಾಧ್ಯವಿಲ್ಲ: ಅಮೆರಿಕಕ್ಕೆ ಇರಾನ್ ತಿರುಗೇಟು

|
Google Oneindia Kannada News

ಜಿನೀವಾ, ಡಿಸೆಂಬರ್ 4: ಇರಾನ್‌ ತನ್ನ ತೈಲ ರಫ್ತು ಮಾಡುವುದನ್ನು ತಡೆಯಲು ಅಮೆರಿಕಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಗಲ್ಫ್ ಮೂಲಕ ಇರಾನ್‌ ಕಚ್ಚಾ ತೈಲ ಸಾಗಾಟವಾಗುವುದನ್ನು ತಡೆಯಲು ಮುಂದಾದರೆ ಎಲ್ಲ ತೈಲ ರಫ್ತುದಾರರ ಜಲಮಾರ್ಗಗಳೂ ಬಂದ್ ಆಗಲಿವೆ ಎಂದು ಇರಾನ್ ಅಧ್ಯಕ್ಷರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದುಹೊಸ ಸ್ನೇಹ ಪರ್ವ; ಅಮೆರಿಕದಿಂದ ಭಾರತಕ್ಕೆ ಬಿಲಿಯನ್ ನಷ್ಟು ತೈಲ ಆಮದು

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಲ್ಲಿ ಅಮೆರಿಕ, ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿದೆ. ಭಾರತ ಸೇರಿದಂತೆ ಇರಾನ್‌ನಿಂದ ತೈಲ ಖರೀದಿ ಮಾಡುತ್ತಿರುವ ಎಲ್ಲ ದೇಶಗಳೂ ಹಂತ ಹಂತವಾಗಿ ತೈಲ ಆಮದು ಕಡಿತಗೊಳಿಸಿ ಸಂಪೂರ್ಣ ಸ್ಥಗಿತಗೊಳಿಸುವಂತೆ ಮಾಡುವುದು ಅಮೆರಿಕದ ಗುರಿಯಾಗಿದೆ.

ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಕತಾರ್ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಕತಾರ್

ಇದಕ್ಕೆ ತಿರುಗೇಟು ನೀಡಿರುವ ಇರಾನ್, ನಾವು ನಮ್ಮ ತೈಲವನ್ನು ಮಾರಾಟ ಮಾಡುತ್ತಿದ್ದೇವೆ ಮತ್ತು ನಮ್ಮ ತೈಲವನ್ನು ಮಾರಾಟ ಮಾಡುವುದನ್ನು ಮುಂದುವರಿಸಲಿದ್ದೇವೆ ಹಾಗೂ ನಮ್ಮ ತೈಲ ರಫ್ತನ್ನು ಸ್ಥಗಿತಗೊಳಿಸಲು ಅವರಿಗೆ ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ತಿಳಿಯಬೇಕು ಎಂದು ಹೇಳಿದೆ.

ಓಪೆಕ್ ನಿಂದ ಹೊರಬಂದ ಕತಾರ್ : ತೈಲ ಮಾರುಕಟ್ಟೆಯಲ್ಲಿ ಆಗುವುದಾ ಏರುಪೇರು? ಓಪೆಕ್ ನಿಂದ ಹೊರಬಂದ ಕತಾರ್ : ತೈಲ ಮಾರುಕಟ್ಟೆಯಲ್ಲಿ ಆಗುವುದಾ ಏರುಪೇರು?

united states america iran oil export president hassan rouhani sanctions

ಇರಾನ್ ತೈಲದ ರಫ್ತನ್ನು ತಡೆಯಲು ಒಮ್ಮೆ ಅವರು ಪ್ರಯತ್ನಿಸಿದರೆ, ಪರ್ಷಿಯನ್ ಗಲ್ಫ್‌ನಿಂದ ಯಾರೂ ತೈಲವನ್ನು ರಫ್ತು ಮಾಡುವುದಿಲ್ಲ ಎಂದು ಅಧ್ಯಕ್ಷ ಹಸನ್ ರೌಹಾನಿ ಹೇಳಿದರು.

ಇರಾನ್ ಛಬಹಾರ್ ಬಂದರು ಅಭಿವೃದ್ಧಿಗೆ ಅಮೆರಿಕದಿಂದ ಭಾರತಕ್ಕೆ ವಿನಾಯ್ತಿಇರಾನ್ ಛಬಹಾರ್ ಬಂದರು ಅಭಿವೃದ್ಧಿಗೆ ಅಮೆರಿಕದಿಂದ ಭಾರತಕ್ಕೆ ವಿನಾಯ್ತಿ

ಪ್ರಾದೇಶಿಕವಾಗಿ ಹಾಗೂ ಜಾಗತಿಕವಾಗಿ ತನ್ನ ಆರ್ಥಿಕ ನಂಟನ್ನು ಕಡಿತಗೊಳಿಸುವಲ್ಲಿ ಅಮೆರಿಕ ಯಶಸ್ವಿಯಾಗುವುದಿಲ್ಲ ಎಂದು ರೌಹಾನಿ ತಿಳಿಸಿದರು.

English summary
Iranian President Hassan Rouhani said that United States will not be able to stop Iran exporting its oil and cut the econominc ties with world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X