ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ: ಚೀನಾವನ್ನು ಸೋಲಿಸಿ ಪ್ರತಿಷ್ಠಿತ ಸದಸ್ಯತ್ವ ಪಡೆದ ಭಾರತ

|
Google Oneindia Kannada News

ವಿಶ್ವಸಂಸ್ಥೆ, ಸೆಪ್ಟೆಂಬರ್ 15: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತವು ಕಮಿಷನ್ ಆನ್ ಸ್ಟೇಟಸ್ ಆಫ್ ವಿಮೆನ್ (ಸಿಎಸ್‌ಡಬ್ಲ್ಯೂ) ಸದಸ್ಯ ಸ್ಥಾನಕ್ಕೆ ಭಾರತ ಆಯ್ಕೆಯಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (ಇಸಿಒಎಸ್‌ಒಸಿ) ಪ್ರತಿಷ್ಠಿತ ಭಾಗವಾಗಿರುವ ಸಿಎಸ್‌ಡಬ್ಲ್ಯೂದಲ್ಲಿ ಭಾರತವು 2021ರಿಂದ 2025ರವರೆಗೆ ನಾಲ್ಕು ವರ್ಷ ಸದಸ್ಯನಾಗಿರಲಿದೆ.

'ಭಾರತವು ಪ್ರತಿಷ್ಠಿತ ಇಸಿಒಎಸ್‌ಒಸಿ ಸಂಸ್ಥೆಯ ಸ್ಪರ್ಧೆಯಲ್ಲಿ ಜಯಗಳಿಸಿದೆ! ಮಹಿಳಾ ಸ್ಥಾನಮಾನದ ಆಯೋಗದ (ಸಿಎಸ್‌ಡಬ್ಲ್ಯೂ) ಸದಸ್ಯನಾಗಿ ಭಾರತ ಆಯ್ಕೆಯಾಗಿದೆ. ಲಿಂಗ ಸಮಾನತೆಯನ್ನು ಉತ್ತೇಜಿಸುವ ನಮ್ಮ ಬದ್ಧತೆ ಹಾಗೂ ನಮ್ಮ ಎಲ್ಲ ವಲಯಗಳಲ್ಲಿಯೂ ಮಹಿಳಾ ಸಬಲೀಕರಣಕ್ಕೆ ದೊರಕಿರುವ ಮಾನ್ಯತೆ ಇದು. ಈ ಬೆಂಬಲಕ್ಕಾಗಿ ಎಲ್ಲ ಸದಸ್ಯ ದೇಶಗಳಿಗೂ ನಾವು ಧನ್ಯವಾದ ಸಲ್ಲಿಸುತ್ತೇವೆ' ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.

ಪ್ಯಾಂಗಾಂಗ್ ಸರೋವರದಲ್ಲಿ ಚೀನಾ ಸೈನಿಕರ ಸಂಪರ್ಕಕ್ಕೆ ಹೊಸ ಸಾಧನ ಪ್ಯಾಂಗಾಂಗ್ ಸರೋವರದಲ್ಲಿ ಚೀನಾ ಸೈನಿಕರ ಸಂಪರ್ಕಕ್ಕೆ ಹೊಸ ಸಾಧನ

ಭಾರತ, ಚೀನಾ ಮತ್ತು ಅಫ್ಘಾನಿಸ್ತಾನಗಳು ವಿಶ್ವಸಂಸ್ಥೆಯ ಸಿಎಸ್‌ಡಬ್ಲ್ಯೂ ಸದಸ್ಯ ಸ್ಥಾನ ಚುನಾವಣೆಗೆ ಸ್ಪರ್ಧಿಸಿದ್ದವು. 54 ಸದಸ್ಯರ ಚುನಾವಣೆಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನಗಳು ಜಯಗಳಿಸಿದರೆ, ಚೀನಾ ಅರ್ಧದಷ್ಟು ಮತಗಳನ್ನು ಕೂಡ ಪಡೆಯಲಿಲ್ಲ.

United Nations: India Beats China Becomes Member Of ECOSOC

ಸಿಎಸ್‌ಡಬ್ಲ್ಯೂ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಉತ್ತೇಜನಕ್ಕಾಗಿಯೇ ಮೀಸಲಾಗಿರುವ ಜಾಗತಿಕ ಅಂತರ ಸರ್ಕಾರ ಸಂಸ್ಥೆಯಾಗಿದೆ.

English summary
India has been elected as the member of the Commission of Status of Women (CSW) a body of ECOSOC beating China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X