ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು!

|
Google Oneindia Kannada News

ಕೀವ್, ಏಪ್ರಿಲ್ 7: ಉಕ್ರೇನ್ ಮೇಲಿನ ನಿರಂತರ ಆಕ್ರಮಣದಿಂದ ರಷ್ಯಾ ಜಗತ್ತಿನ ಬಹುಪಾಲು ರಾಷ್ಟ್ರಗಳ ವಿರೋಧ ಕಟ್ಟಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ಕೆಂಗಣ್ಣಿಗೆ ಗುರಿ ಆಗಿರುವ ರಷ್ಯಾವನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಗುರುವಾರ ಅಮಾನತುಗೊಳಿಸಲಾಗಿದೆ.

ವಿಶ್ವಸಂಸ್ಥೆಯ 197 ಸದಸ್ಯರಲ್ಲಿ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಣಯದ ಮೇಲೆ ಮತ ಚಲಾಯಿಸಿತು. ಈ ನಿರ್ಣಯದ ಪರವಾಗಿ 93 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ 24 ಮತಗಳು ಚಲಾವಣೆಯಾದವು. ಇದರ ಹೊರತಾಗಿ ಭಾರತ ಸೇರಿದಂತೆ 58 ರಾಷ್ಟ್ರಗಳು ಗೈರು ಹಾಜರಾಗಿದ್ದವು.

ನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯ ನಿರ್ಬಂಧದ ನಡುವೆ,ಕ್ಷಿಪ್ರವಾಗಿ ರೂಬಲ್ ಚೇತರಿಕೆ, ಪುಟಿನ್‌ಗೆ ಜಯ

ಯಾವುದೇ ವಿಷಯದ ಕುರಿತು ಮತದಾನಕ್ಕೆ ಹಾಕಿದಾಗ ಸಾಮಾನ್ಯ ಸಭೆಯ ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಳ್ಳುವ ಅಗತ್ಯವಿರುತ್ತದೆ. ಅಂದರೆ 197 ಸದಸ್ಯರಲ್ಲಿ 99 ಮತಗಳು ಬೇಕಾಗಿರುತ್ತದೆ. ಆದರೆ ಇಲ್ಲಿ 58 ರಾಷ್ಟ್ರಗಳು ಮತದಾನದಿಂದ ಅಂತರ ಕಾಯ್ದುಕೊಂಡಿರುವ ಹಿನ್ನಲೆ ಈ ರಾಷ್ಟ್ರಗಳನ್ನು ಮತದಾನ ಪ್ರಕ್ರಿಯೆಯಲ್ಲಿ ಲೆಕ್ಕಕ್ಕೆ ತೆಗೆದುಕೊೊಳ್ಳುವುದಿಲ್ಲ.

United Nations General Assembly Suspends Russia From Human Rights Council

ರಷ್ಯಾ ಯುದ್ಧಪರಾಧಿ ಎಂದ ಉಕ್ರೇನ್ ರಾಯಭಾರಿ:

ಉಕ್ರೇನ್‌ನ ವಿಶ್ವಸಂಸ್ಥೆಯ ರಾಯಭಾರಿ ಆಗಿರುವ ಸೆರ್ಗಿ ಕಿಸ್ಲಿಟ್ಯಾ, 193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಮತದಾನದ ಮೊದಲು ಯುನೈಟೆಡ್ ಸ್ಟೇಟ್ಸ್ ಪ್ರಾರಂಭಿಸಿದ ನಿರ್ಣಯ ಪರಿಚಯಿಸಿದರು. ರಷ್ಯಾವು "ಭೀಕರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗ ಮಾಡಿದೆ, ಅದು ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಮನಾಗಿರುತ್ತದೆ," ಎಂದು ಅವರು ಹೇಳಿದರು.

United Nations General Assembly Suspends Russia From Human Rights Council

ಶಾಂತಿ ಮತ್ತು ಭದ್ರತೆಯ ತಳಹದಿಗೆ ಧಕ್ಕೆ:

ರಷ್ಯಾದ ಕ್ರಮಗಳು ಮಸುಕಾಗಿವೆ. ರಷ್ಯಾ ಕೇವಲ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿಲ್ಲ, ಅದು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ತಳಹದಿಯನ್ನು ಅಲುಗಾಡಿಸುತ್ತಿದೆ," ಎಂದು ದೂಷಿಸಿದರು.

ನಿರ್ಣಯದ ವಿರುದ್ಧ ಮತ ಚಲಾವಣೆಗೆ ರಷ್ಯಾ ಮನವಿ:

ರಷ್ಯಾದ ಉಪ ರಾಯಭಾರಿ ಗೆನ್ನಡಿ ಕುಜ್ಮಿನ್ ಅವರು ನಿರ್ಣಯದ ವಿರುದ್ಧ ಮತ ಚಲಾಯಿಸುವಂತೆ ಸದಸ್ಯರನ್ನು ಒತ್ತಾಯಿಸಿದರು. "ನಾವು ಇಂದು ನೋಡುತ್ತಿರುವುದು ಯುನೈಟೆಡ್ ಸ್ಟೇಟ್ಸ್ ತನ್ನ ಪ್ರಬಲ ಸ್ಥಾನ ಮತ್ತು ಸಂಪೂರ್ಣ ನಿಯಂತ್ರಣವನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ನಮ್ಮ ವಿರುದ್ಧ ಪ್ರದರ್ಶಿಸಿದ ಘಟನೆಗಳು ಮತ್ತು ವ್ಯಾಪಕವಾಗಿ ಪ್ರಸಾರವಾದ ನಕಲಿ ಆಧಾರದ ಮೇಲಿನ ಸುಳ್ಳು ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ," ಎಂದು ಅವರು ಹೇಳಿದರು.

United Nations General Assembly Suspends Russia From Human Rights Council

ಸದಸ್ಯತ್ವ ಕಳೆದುಕೊಂಡ 2ನೇ ರಾಷ್ಟ್ರ ರಷ್ಯಾ:

2006 ರಲ್ಲಿ ಸ್ಥಾಪಿಸಲಾದ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿ ಸದಸ್ಯತ್ವದ ಹಕ್ಕುಗಳನ್ನು ಕಳೆದುಕೊಂಡ ಎರಡನೇ ದೇಶ ರಷ್ಯಾ ಆಗಿದೆ. ಉತ್ತರ ಆಫ್ರಿಕಾದ ದೇಶದಲ್ಲಿ ದಂಗೆಯು ದೀರ್ಘಕಾಲದ ನಾಯಕ ಮೊಮ್ಮರ್ ಗಡಾಫಿ ಅವರನ್ನು ಕೆಳಗಿಳಿಸಿದಾಗ 2011ರಲ್ಲಿ ಲಿಬಿಯಾವನ್ನು ಅಮಾನತುಗೊಳಿಸಲಾಗಿತ್ತು. ಮಾನವ ಹಕ್ಕುಗಳ ಮಂಡಳಿಯು ಜಿನೀವಾದಲ್ಲಿದ್ದು, ಅದರ ಸದಸ್ಯರನ್ನು 193-ರಾಷ್ಟ್ರಗಳ ಸಾಮಾನ್ಯ ಸಭೆಯಿಂದ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

ಮಾನವ ಹಕ್ಕುಗಳ ಮಂಡಳಿಯನ್ನು ಸ್ಥಾಪಿಸಿದ ಮಾರ್ಚ್ 2006ರ ನಿರ್ಣಯವು "ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆಗಳನ್ನು ಮಾಡುವ" ದೇಶದ ಸದಸ್ಯತ್ವ ಹಕ್ಕುಗಳನ್ನು ಸಾಮಾನ್ಯ ಸಭೆಯಲ್ಲಿ ಅಮಾನತುಗೊಳಿಸಬಹುದು ಎಂದು ಹೇಳುತ್ತದೆ.

United Nations General Assembly Suspends Russia From Human Rights Council

ರಷ್ಯಾ ಆಕ್ರಮಣದ ಕುರಿತು ತೀವ್ರ ಕಳವಳ:

"ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳು ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಗುರುವಾರದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗಗಳ ವರದಿಗಳ ಬಗ್ಗೆ ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದರಲ್ಲಿ ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆ ಮತ್ತು ದುರುಪಯೋಗವೂ ಸೇರಿದೆ."

English summary
United Nations General Assembly suspends Russia from Human Rights Council. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X