ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ & ಯುರೋಪ್ ಭಾಯಿ, ಭಾಯಿ..! ಶ್ರೀಮಂತ ರಾಷ್ಟ್ರಗಳ ಶಾಂತಿ ಮಂತ್ರ..!

|
Google Oneindia Kannada News

ಯುರೋಪಿಯನ್ ಒಕ್ಕೂಟ ತೊರೆದು, ಹೊರಬಂದು ಸ್ವತಂತ್ರವಾಗಿ ಬದುಕಲು ಇಚ್ಛಿಸಿರುವ ಬ್ರಿಟನ್‌ಗೆ ಮತ್ತೊಂದು ಗೆಲುವು ಸಿಕ್ಕಿದೆ. ಬ್ರೆಕ್ಸಿಟ್ ಪ್ರಕ್ರಿಯೆಯ ಅಂಗವಾಗಿ ಯುರೋಪಿಯನ್ ಒಕ್ಕೂಟ ಹಾಗೂ ಬ್ರಿಟನ್ ಮಧ್ಯೆ ಡಿಸೆಂಬರ್ 24ರಂದು ನಡೆದಿದ್ದ ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್ ಸಂಸತ್ತು ಅನುಮೋದನೆ ನೀಡಿದೆ.

ಬ್ರಿಟನ್‌ನ 'ಹೌಸ್ ಆಫ್ ಕಾಮನ್ಸ್'ನಲ್ಲಿ ನಡೆದ ಮತದಾನದಲ್ಲಿ ವ್ಯಾಪಾರ ಒಪ್ಪಂದದ ಪರ 521 ಮತಗಳು ಬಿದ್ದರೆ, ಯುರೋಪಿಯನ್ ಒಕ್ಕೂಟ ಹಾಗೂ ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದ ವಿರುದ್ಧ 73 ಮತಗಳು ಚಲಾವಣೆಯಾದವು. ಹೀಗೆ ಐತಿಹಾಸಿಕ ಬ್ರೆಕ್ಸಿಟ್ ಡೀಲ್ ಮಹತ್ವದ ಗೆಲುವು ದಾಖಲಿಸಿದೆ. ಹಲವು ವರ್ಷಗಳ ಕಾಲ ಈ ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್ ಹಾಗೂ ಯುರೋಪಿಯನ್ ಒಕ್ಕೂಟದ ಮಧ್ಯೆ ದೊಡ್ಡ ಸಂಘರ್ಷವೇ ನಡೆದಿತ್ತು.

ಬ್ರೆಕ್ಸಿಟ್ ಜಾರಿಗೆ ಏಳು ದಿನಕ್ಕೆ ಮುನ್ನ ಯುರೋಪಿಯನ್ ಒಕ್ಕೂಟ-ಬ್ರಿಟನ್ ನಡುವೆ ಒಪ್ಪಂದಬ್ರೆಕ್ಸಿಟ್ ಜಾರಿಗೆ ಏಳು ದಿನಕ್ಕೆ ಮುನ್ನ ಯುರೋಪಿಯನ್ ಒಕ್ಕೂಟ-ಬ್ರಿಟನ್ ನಡುವೆ ಒಪ್ಪಂದ

ಎಲ್ಲಿ ಬ್ರಿಟನ್ ಜೊತೆ ಯುರೋಪ್ ರಾಷ್ಟ್ರಗಳ ಸಂಬಂಧ ಹಳಸಿಬಿಡುತ್ತೋ ಎಂಬ ಆತಂಕ ಅಲ್ಲಿನ ಜನರಲ್ಲಿ ಆವರಿಸಿತ್ತು. ಆದರೆ ಡಿಸೆಂಬರ್ 24ರಂದು ನಡೆದ ವ್ಯಾಪಾರ ಒಪ್ಪಂದ ಎಲ್ಲಾ ಆತಂಕಗಳಿಗೂ ಬ್ರೇಕ್ ಹಾಕಿತ್ತು. ಅಲ್ಲದೆ ಯುರೋಪ್ ಮತ್ತು ಬ್ರಿಟನ್ ಸ್ನೇಹವನ್ನು ಮತ್ತಷ್ಟು ಗಟ್ಟಿ ಮಾಡಿತ್ತು. ಮನೆ ತೊರೆದರೂ ಸಂಬಂಧ ಹಾಗೇ ಇರಲಿ ಎಂಬಂತೆ, ಎರಡೂ ಕಡೆಯವರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಆ ಒಪ್ಪಂದಕ್ಕೆ ಬ್ರಿಟನ್ ಸಂಸತ್ತು ದೂಸ್ರಾ ಮಾತನಾಡದೆ ಓಕೆ ಅಂದಿದೆ.

 47 ವರ್ಷಗಳ ಸಂಬಂಧ ಅಂತ್ಯ

47 ವರ್ಷಗಳ ಸಂಬಂಧ ಅಂತ್ಯ

ಅದು 1973 ಜನವರಿ 1, ಅಂದು ಮಹತ್ವದ ಘಟನೆಗೆ ಜಗತ್ತು ಸಾಕ್ಷಿಯಾಗಿತ್ತು. ಸೂರ್ಯ ಮುಳುಗದ ನಾಡು ಎಂಬ ಖ್ಯಾತಿ ಗಳಿಸಿದ್ದ ಆಂಗ್ಲರು ತಮ್ಮ ನೆರೆ ದೇಶಗಳ ಜೊತೆಯಲ್ಲಿ ಬಾಂಧವ್ಯ ವೃದ್ಧಿಸಲು ಯುರೋಪಿಯನ್ ಒಕ್ಕೂಟ ಸೇರಲು ಬಯಸಿದ್ದರು. ಅಂತೆ 1973 ಜನವರಿ 1ರಂದು ಬ್ರಿಟನ್ ಅಧಿಕೃತವಾಗಿ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿತ್ತು. ಆದರೆ ಹೀಗೆ ಬ್ರಿಟನ್ ಯುರೋಪ್ ಒಕ್ಕೂಟಕ್ಕೆ ಸೇರಿದ 47 ವರ್ಷಗಳ ಬಳಿಕ ಅಲ್ಲಿಂದ ಹೊರಗೆ ಬರಲು ನಿರ್ಧರಿಸಿತ್ತು. ಈ ಘಟನೆ ಯುರೋಪಿಯನ್ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಭೀತಿ ಎದುರಾಗಿತ್ತು. ಆದರೆ ಅದೆಲ್ಲವೂ ಈಗ ಶಾಂತವಾಗಿದೆ.

 4.5 ವರ್ಷಗಳ ತಿಣುಕಾಟ ಅಂತ್ಯ

4.5 ವರ್ಷಗಳ ತಿಣುಕಾಟ ಅಂತ್ಯ

ಬ್ರಿಟನ್ ಯುರೋಪ್ ಒಕ್ಕೂಟ ಬಿಟ್ಟು ಬರಲು ದೊಡ್ಡ ಸರ್ಕಸ್ ನಡೆಯಿತು. ಏಕೆಂದರೆ ನಿರ್ಧಾರ ಕೈಗೊಂಡ ತಕ್ಷಣ ಬ್ರಿಟನ್ ಸರ್ಕಾರಕ್ಕೆ ಅದು ಸಾಧ್ಯವಾಗಲಿಲ್ಲ. ಅಲ್ಲಿನ ಜನರ ತೀರ್ಮಾನದಂತೆ ಅದು ನಡೆದಿದೆ. ಬ್ರಿಟನ್ ಪ್ರಜಾಪ್ರಭುತ್ವದ ಪವರ್ ಇಲ್ಲಿ ಕಾಣಬಹುದಾಗಿದೆ. 2016ರ ಆರಂಭದಲ್ಲಿ ಬ್ರೆಕ್ಸಿಟ್ ಪ್ರಕ್ರಿಯೆ ಆರಂಭವಾಗಿತ್ತು, ಆದರೆ ಅದು ಮುಗಿಯಲು ಸುಮಾರು 4.5 ವರ್ಷಗಳೇ ಬೇಕಾಯಿತು. ಏಕೆಂದರೆ ಬ್ರಿಟನ್ ದಿಢೀರ್ ಒಕ್ಕೂಟ ಬಿಟ್ಟು ಹೊರಬರಲು ಸಾಧ್ಯವಿರಲಿಲ್ಲ. ಹೊರಬರಲು ಬೇಕಾದ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ, ಇದೀಗ ತನ್ನ ನೆರೆಯ ದೇಶಗಳ ಜನರ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡು ಬ್ರಿಟನ್ ಯುರೋಪ್ ತೊರೆದಿದೆ.

ಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವುಬ್ರೆಕ್ಸಿಟ್ ಮಸೂದೆ ಅಂಗೀಕಾರ, ಬೊರಿಸ್ ಗೆ ಐತಿಹಾಸಿಕ ಗೆಲುವು

 ಶಕ್ತಿಶಾಲಿ ರಾಷ್ಟ್ರ ಬ್ರಿಟನ್..!

ಶಕ್ತಿಶಾಲಿ ರಾಷ್ಟ್ರ ಬ್ರಿಟನ್..!

ಇವತ್ತಿನ ಲೆಕ್ಕಾಚಾರಕ್ಕೆ ಅಮೆರಿಕ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿರಬಹುದು. ಆದ್ರೆ ಬ್ರಿಟನ್ ಅಮೆರಿಕಗಿಂತಲೂ ಮೊದಲೇ ಅಂದರೆ ಶತಮಾನಗಳ ಕಾಲ ಜಗತ್ತನ್ನ ಆಳಿದ ದೇಶ. ಮೊದಲ ಮಹಾಯುದ್ಧದ ನಂತರ ಬ್ರಿಟನ್‌ನ ಆರ್ಥಿಕ ಶಕ್ತಿ ಕುಂದಿದ ಪರಿಣಾಮ ಹಾಗೂ ಅಲ್ಫ್ರೆಡ್ ನೊಬೆಲ್ ಡೈನಮೈಟ್ ಆವಿಷ್ಕರಿಸಿದ ಬಳಿಕ ಅಮೆರಿಕದ ಆರ್ಥಿಕತೆಯಲ್ಲಿ ಕ್ರಾಂತಿಯೇ ನಡೆದ ಹಿನ್ನೆಲೆಯಲ್ಲಿ. ಮೂಲ ಸೌಕರ್ಯದಿಂದ ಹಿಡಿದು, ಕೈಗಾರಿಕೆಗಳ ತನಕ ಅಮೆರಿಕ ಸೂಪರ್ ಪವರ್ ಆಗಿ ಬೆಳೆಯಿತು. ಆದರೆ ಮೊದಲ ವಿಶ್ವ ಯುದ್ಧದಿಂದ ಅಪಾರ ಪ್ರಮಾಣದಲ್ಲಿ ಸಂಪತ್ತನ್ನು ಕಳೆದುಕೊಂಡ ಬ್ರಿಟನ್ ಬಡವಾಯಿತು. ಹೀಗಾಗಿ ಬ್ರಿಟನ್ ಕರೆನ್ಸಿ 'ಪೌಂಡ್' ದುರ್ಬಲಗೊಂಡು, ಅಮೆರಿಕದ ನಗದು 'ಡಾಲರ್' ಶಕ್ತಿಶಾಲಿಯಾಯಿತು. ಅಂದಿನಿಂದ ಇಂದಿನವರೆಗೂ ಡಾಲರ್ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಆಡಿಸುತ್ತಿದೆ. ಆದರೂ ಬ್ರಿಟನ್ ಇಂದಿಗೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರವೇ ಆಗಿದೆ.

ಯುರೋಪ್ ರಾಷ್ಟ್ರಗಳು ಹೆದರಿದ್ದು ಏಕೆ..?

ಯುರೋಪ್ ರಾಷ್ಟ್ರಗಳು ಹೆದರಿದ್ದು ಏಕೆ..?

ಯುರೋಪ್ ರಾಷ್ಟ್ರಗಳು ಇಷ್ಟು ಶ್ರೀಮಂತಿಕೆಯನ್ನ ಪಡೆಯಲು ಅಮೆರಿಕ ಹಾಗೂ ಬ್ರಿಟನ್ ಶ್ರಮ ಸಾಕಷ್ಟಿದೆ. ವ್ಯಾಪಾರ ಒಪ್ಪಂದಗಳು ಮತ್ತು ಭದ್ರತೆ ವಿಚಾರದಲ್ಲಿ ಯುರೋಪ್‌ಗೆ ಅಮೆರಿಕ ಮತ್ತು ಬ್ರಿಟನ್ ಸಹಕಾರವನ್ನು ನೀಡಿವೆ. ಆದರೆ ದಿಢೀರ್ ಬ್ರಿಟನ್ ತಮ್ಮನ್ನ ಬಿಟ್ಟು ಹೊರಡುವುದು ಎಂದರೆ ಯುರೋಪ್ ಒಕ್ಕೂಟಕ್ಕೆ ಶಾಕ್ ಕೊಟ್ಟಂತಾಗಿತ್ತು. ಹೊರಗೆ ಹೊಂಚು ಹಾಕಿ ಕೂತಿರುವ ಶತ್ರುಗಳನ್ನು ಕಂಡು ಯುರೋಪ್ ರಾಷ್ಟ್ರಗಳು ಕೊಂಚ ಬೆದರಿದ್ದವು ಕೂಡ. ಏಕೆಂದರೆ ಯುರೋಪ್ ಒಕ್ಕೂಟದಲ್ಲಿ ಎಲ್ಲಾ ರಾಷ್ಟ್ರಗಳು ಪ್ರಬಲವಾಗಿ ಬೆಳೆದಿಲ್ಲ. ಫ್ರಾನ್ಸ್, ಜರ್ಮನಿಯಂತಹ ಕೆಲವೇ ರಾಷ್ಟ್ರಗಳು ಯುರೋಪ್ ಒಕ್ಕೂಟಕ್ಕೆ ಬಲವಾಗಿ ನಿಂತಿವೆ. ಆದರೆ ಯುರೋಪ್‌ನ ಈಶಾನ್ಯ ಭಾಗದ ರಾಷ್ಟ್ರಗಳಲ್ಲಿ ಇಂದಿಗೂ ಬಡತನ ತಾಂಡವವಾಡುತ್ತಿದೆ. ಹೀಗೆ ಸಮಸ್ಯೆಗಳ ಸುಳಿಯಲ್ಲಿರುವ ಯುರೋಪ್ ಒಕ್ಕೂಟವನ್ನ ಬ್ರಿಟನ್ ತೊರೆಯಲು ಮುಂದಾದಾಗ ಸಹಜವಾಗಿ ಭಯ ಆವರಿಸಿತ್ತು. ಆದರೆ ಈಗ ಆ ಭಯ ಮಾಯವಾಗಿ, ಬ್ರಿಟನ್ ಮತ್ತು ಯುರೋಪ್ ನಡುವಿನ ಸಂಬಂಧ ವೃದ್ಧಿಸುತ್ತಿದೆ.

ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗೆ: ಏನಿದು ಬ್ರೆಕ್ಸಿಟ್? Explainerಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಗೆ: ಏನಿದು ಬ್ರೆಕ್ಸಿಟ್? Explainer

English summary
United Kingdom’s parliament has been approved historic Brexit trade deal with European Union. 521 MPs voted in favour of the deal, just 73 voting against it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X