ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಗೆದ್ದು ಬಂದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೀಡಿದ ಭಯಾನಕ ಹೇಳಿಕೆ

|
Google Oneindia Kannada News

ವಿಶ್ವದ ಅತ್ಯಂತ ಪ್ರಸಿದ್ದ ಕೊರೊನಾ ರೋಗಿಯಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಸೋಂಕನ್ನು ಜಯಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದು ಗೊತ್ತಿರುವ ವಿಚಾರ.

ಸೆಲ್ಫ್ ಐಸೋಲೇಶನ್ ನಲ್ಲಿದ್ದ ಬ್ರಿಟನ್ ಪ್ರಧಾನಿಯನ್ನು, ಸೋಂಕಿನ ತೊಂದರೆ ಜಾಸ್ತಿಯಾಗುತ್ತಿದ್ದಂತೆಯೆ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಕಳೆದ ದಿನಗಳ ಬಗ್ಗೆ ಬ್ರಿಟನ್ ಪ್ರಧಾನಿ ಮನಬಿಚ್ಚಿ ಮಾತನಾಡಿದ್ದಾರೆ.

ಕೊರೊನಾ ಜಯಿಸಿ ಬಂದ ಪ್ರಧಾನಿಗೆ ಪ್ರೇಯಸಿ ಕೊಟ್ಟ ಅದ್ಭುತ ಉಡುಗೊರೆಕೊರೊನಾ ಜಯಿಸಿ ಬಂದ ಪ್ರಧಾನಿಗೆ ಪ್ರೇಯಸಿ ಕೊಟ್ಟ ಅದ್ಭುತ ಉಡುಗೊರೆ

ಗಂಡು ಮಗುವಿಗೆ ತಂದೆಯಾಗಿರುವ ಖುಷಿಯಲ್ಲಿರುವ ಜಾನ್ಸನ್, "ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಿಂದೆ ಹೆಜ್ಜೆ ಇಡುವುದಿಲ್ಲ. ನಮ್ಮ ಜನರು ತಾಳ್ಮೆ ವಹಿಸಲೇಬೇಕು. ಲಾಕ್‌ ಡೌನ್‌ ನಿಂದ ಕಷ್ಟಗಳನ್ನು ಎದುರಿಸಿರಬಹುದು. ಆದರೆ, ನಾವೀಗ ಈ ಬಿಕ್ಕಟ್ಟಿನ ಮೊದಲ ಹಂತದ ಅಂತ್ಯದಲ್ಲಿದ್ದೇವೆ" ಎಂದಿದ್ದರು.

ತನ್ನ ಜೀವ ಉಳಿಸಿದ ವೈದ್ಯರಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿರುವ ಬೋರಿಸ್ ಜಾನ್ಸನ್, ತೀವ್ರ ನಿಗಾ ಘಟಕದಲ್ಲಿದ್ದಾಗ, ತನಗಾದ ಅನುಭವವನ್ನು ಮಾಧ್ಯಮದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾಕ್ಕೆ ಕಿಕ್ ಮಾಡಿ ಮತ್ತೆ ಜನಸೇವೆಗೆ ಸಿದ್ದವಾದ ಯುಕೆ ಪ್ರಧಾನಿಕೊರೊನಾಕ್ಕೆ ಕಿಕ್ ಮಾಡಿ ಮತ್ತೆ ಜನಸೇವೆಗೆ ಸಿದ್ದವಾದ ಯುಕೆ ಪ್ರಧಾನಿ

ನನ್ನ ಸಾವಿನ ಸುದ್ದಿಯನ್ನು ಘೋಷಿಸಲು ಸಿದ್ದತೆ ನಡೆದಿತ್ತು

ನನ್ನ ಸಾವಿನ ಸುದ್ದಿಯನ್ನು ಘೋಷಿಸಲು ಸಿದ್ದತೆ ನಡೆದಿತ್ತು

ಕಳೆದ ಭಾನುವಾರ (ಮೇ 3) ಸನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಬೋರಿಸ್ ಜಾನ್ಸನ್, "ನನ್ನ ಸಾವಿನ ಸುದ್ದಿಯನ್ನು ಘೋಷಿಸಲು ಸಿದ್ದತೆ ನಡೆದಿತ್ತು" ಎನ್ನುವ ಭಯಾನಕ ಹೇಳಿಕೆಯನ್ನು ನೀಡಿದ್ದಾರೆ.

ನನ್ನನ್ನು ತುರ್ತು ನಿಗಾ ಘಟಕಕ್ಕೆ ಶಿಫ್ಟ್ ಮಾಡಿದಾಗ

ನನ್ನನ್ನು ತುರ್ತು ನಿಗಾ ಘಟಕಕ್ಕೆ ಶಿಫ್ಟ್ ಮಾಡಿದಾಗ

"ನನ್ನನ್ನು ತುರ್ತು ನಿಗಾ ಘಟಕಕ್ಕೆ ಶಿಫ್ಟ್ ಮಾಡಿದಾಗ, ವೈದ್ಯರು ನನ್ನ ಸಾವಿನ ಸುದ್ದಿಯನ್ನು ಪ್ರಕಟಿಸಲು ಸಿದ್ದತೆಯನ್ನು ನಡೆಸಿದ್ದರು. ಇದೊಂದು ಅತ್ಯಂತ ಕಷ್ಟದ ಸನ್ನಿವೇಶ. ಆದರೆ ಈ ಸುದ್ದಿಯನ್ನು ನಾನು ನಿರಾಕರಿಸುವುದಿಲ್ಲ" ಎಂದು ಬೋರಿಸ್ ಜಾನ್ಸನ್ ಸಂದರ್ಶನದಲ್ಲಿ ಹೇಳಿದ್ದಾರೆ.

ನನ್ನ ಆರೋಗ್ಯ ಸ್ಥಿರವಾಗಿಲ್ಲ ಎನ್ನುವ ಅರಿವು ನನಗಿತ್ತು

ನನ್ನ ಆರೋಗ್ಯ ಸ್ಥಿರವಾಗಿಲ್ಲ ಎನ್ನುವ ಅರಿವು ನನಗಿತ್ತು

"ನನ್ನ ಆರೋಗ್ಯ ಸ್ಥಿರವಾಗಿಲ್ಲ ಎನ್ನುವ ಅರಿವು ನನಗಿತ್ತು. ವೈದ್ಯರು ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದರು. ಆದರೂ, ಪರಿಸ್ಥಿತಿ ತೀರಾ ಕೈಮೀರಿ ಹೋದರೆ, ಏನು ಮಾಡಬೇಕು ಎನ್ನುವುದರ ಬಗ್ಗೆಯೂ ವ್ಯವಸ್ಥೆಗಳು ನಡೆದಿತ್ತು" ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಮಗನಿಗೆ ವಿಲ್ಫ್ರೆಡ್ ಲಾರಿ ನಿಕೊಲಸ್ ಜಾನ್ಸನ್ ಎಂದು ನಾಮಕರಣ

ಮಗನಿಗೆ ವಿಲ್ಫ್ರೆಡ್ ಲಾರಿ ನಿಕೊಲಸ್ ಜಾನ್ಸನ್ ಎಂದು ನಾಮಕರಣ

"ವೈದ್ಯರು ನೀಡಿರುವ ಅತ್ಯುತ್ತಮ ಚಿಕಿತ್ಸೆಯಿಂದ ನಾನಿಂದು ಚೇತರಿಸಿಕೊಂಡಿದ್ದೇನೆ. ನನ್ನ ಮಗನಿಗೆ 'ವಿಲ್ಫ್ರೆಡ್ ಲಾರಿ ನಿಕೊಲಸ್ ಜಾನ್ಸನ್' ಎಂದು ಹೆಸರಿಟ್ಟಿದ್ದೇನೆ. ಅದರಲ್ಲಿ ನಿಕೊಲಸ್ ಎಂದರೆ ನನಗೆ ಚಿಕಿತ್ಸೆ ನೀಡಿದ ವೈದ್ಯರು" ಎಂದು ಜಾನ್ಸನ್ ಹೇಳಿದ್ದಾರೆ.

English summary
United Kingdom PM Boris Johnson Said Doctors Had Plan In Case Died,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X