ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪಾಕಿಸ್ತಾನದಲ್ಲೂ 'ಅಖಂಡ ಭಾರತ'ದ ಪೋಸ್ಟರ್‌ಗಳು!

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 06: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಖಂಡ ಭಾರತದತ್ತ ಹೆಜ್ಜೆ ಎಂದು ಬಿಜೆಪಿ ಮತ್ತು ಬೆಂಬಲಿಗರು ವರ್ಣಿಸುತ್ತಿದ್ದಾರೆ.

ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ್ದು, ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಅದರಲ್ಲಿಯೂ ನೆರೆಯ ಪಾಕಿಸ್ತಾನಕ್ಕೆ ಚಿಂತೆಯ ಗೆರೆಗಳನ್ನು ಮೂಡಿಸಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿಯೇ ಭಾರತದ ಪರ ಪೋಸ್ಟರ್‌ಗಳು ರಸ್ತೆಯುದ್ದಕ್ಕೂ ಕಾಣಿಸಿಕೊಂಡಿವೆ. ಇದು ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ಆತಂಕ ಮೂಡಿಸಿದೆ.

ಬಿಜೆಪಿಯ ಮುಖಂಡ ತೇಜೇಂದರ್ ಪಾಲ್ ಸಿಂಗ್ ಬಗ್ಗಾ ಅವರು ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇಸ್ಲಾಮಾಬಾದ್‌ನಲ್ಲಿ ಭಾರತದ ಪರವಾಗಿ ಹಾಕಿರುವ ಪೋಸ್ಟರ್‌ಗಳು ವಿಡಿಯೋದಲ್ಲಿವೆ.

United India posters in Pakistans capital Islamabad

ಮಹಾ ಭಾರತ್ ಎ ಸ್ಟೆಪ್ ಫಾರ್ವಡ್‌ ಹೆಸರಿನಲ್ಲಿ ಪೋಸ್ಟರ್‌ಗಳನ್ನು ಇಸ್ಲಾಮಾಬಾದ್‌ನ ರಸ್ತೆ ಪಕ್ಕದ ಕಂಬಗಳಿಗೆ ಹಾಕಲಾಗಿದ್ದು, 'ಇಂದು ಕಾಶ್ಮೀರ ತೆಗೆದುಕೊಂಡಿದ್ದೇವೆ, ನಾಳೆ ಬಲೂಚಿಸ್ಥಾನ, ಪಾಕ್ ಆಕ್ರಮಿತ ಕಾಶ್ಮೀರ ತೆಗೆದುಕೊಳ್ಳುತ್ತೇವೆ, ದೇಶದ ಪ್ರಧಾನಿ ಅಖಂಡ ಭಾರತದ ಕನಸು ನನಸು ಮಾಡುತ್ತಾರೆ ಎಂಬ ನಂಬಿಕೆ ಇದೆ' ಎಂದು ಶಿವಸೇನಾ ಸಂಸದರೊಬ್ಬರು ಸದನದಲ್ಲಿ ಹೇಳಿದ್ದ ವಾಕ್ಯಗಳನ್ನು ಪೋಸ್ಟರ್ ಮಾಡಿಸಿ ಹಾಕಲಾಗಿದೆ.

ಈ ಪೋಸ್ಟರ್‌ಗಳನ್ನು ಪಾಕಿಸ್ತಾನದ ಯುವಕನೊಬ್ಬ ಚಿತ್ರಿಸಿಕೊಂಡು, ಆತಂಕ ವ್ಯಕ್ತಪಡಿಸಿರುವ ವಿಡಿಯೋ ಇದಾಗಿದ್ದು, ಇದನ್ನು ತೇಜೇಂದರ್ ಪಾಲ್ ಸಿಂಗ್ ಬಗ್ಗಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

English summary
United India posters in street of Pakistan's capital Islamabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X