ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 25: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ 3 ತಿಂಗಳ ಹಸುಗೂಸನ್ನು ಕರೆತರುವ ಮೂಲಕ ನ್ಯೂಜಿಲೆಂಡ್ ಪ್ರಧಾನಿ ಜಸಿಂಡ ಆರ್ಡೆನ್ ಇತಿಹಾಸ ನಿರ್ಮಿಸಿದ್ದಾರೆ.

ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಜೆಸಿಂಡ ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು.

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

ಕೇವಲ ಆರು ವಾರಗಳ ಕಾಲ ತಾಯ್ತನದ ರಜೆ ಪಡೆದಿದ್ದ ಜೆಸಿಂಡ, ರಜೆಯ ನಂತರ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಅಧಿಕಾರದಲ್ಲಿರುವಾಗಲೇ ಮಗುವನ್ನು ಹೆತ್ತ ಕೆಲವೇ ಕೆಲವು ನಾಯಕಿಯರಲ್ಲಿ ಜೆಸಿಂಡ ಸಹ ಒಬ್ಬರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನೆಜಿರ್ ಬುಟ್ಟೋ ಸಹ ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದರು.

UNGA debut for New Zealands first baby

ಜೆಸಿಂಡ ಅವರು ಅತೀ ಕಿರಿಯ ವಯಸ್ಸಿನಲ್ಲಿ ನ್ಯೂಜಿಲೆಂಡ್ ದೇಶದ ಪ್ರಧಾನಿಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಾರವಾರ: ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಕಾರವಾರ: ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಮೂರು ತಿಂಗಳ ಬಾಣಂತಿಯಾಗಿದ್ದರೂ ಮಗುವನ್ನು ಹೊತ್ತೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಆಗಮಿಸಿದ ಜೆಸಿಂಡ ಅವರ ಕರ್ತವ್ಯ ಪ್ರಜ್ಞೆಗೆ ವಿಶ್ವವೇ ತಲೆಬಾಗಿದೆ!

English summary
New Zealand Prime Minister Jacinda Ardern has created history by bringing her three-month-old daughter in the United Nations assembly hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X