ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಬಾರಿ ದೀಪಾವಳಿ ದೀಪ ಬೆಳಗಿದ ವಿಶ್ವಸಂಸ್ಥೆ

By Prithviraj
|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್, 30: ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ಪ್ರಥಮ ಬಾರಿಗೆ ದೀಪಾವಳಿ ಆಚರಿಸಲಾಗಿದೆ.

ಕಚೇರಿಯ ಕಟ್ಟಡದ ಮೇಲೆ ಹ್ಯಾಪಿ ದಿವಾಲಿ ಎಂಬ ಅಕ್ಷರಗಳನ್ನು ವಿಶ್ವಸಂಸ್ಥೆ ಮೂಡಿಸಿದ್ದು, ಅಕ್ಷರಗಳ ಮೇಲೆ ಬೆಳಗುವ ದೀಪದ ಚಿತ್ರವನ್ನೂ ಮೂಡಿಸಿ ಕಟ್ಟಡವನ್ನು ವಿದ್ಯುದೀಪಗಳಿಂದ ಜಗಮಗಿಸಿದೆ.

UN lights up for Diwali for the first time

ಈ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ದೀಪಾವಳಿಯನ್ನು ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಆಚರಿಸಲಾಗಿದೆ.

ದೀಪಾವಳಿ ನೆನಪಿಗಾಗಿ ಇದೇ ಮೊದಲ ಬಾರಿಗೆ ಮುಖ್ಯ ಕಚೇರಿ ಕಟ್ಟಡಕ್ಕೆ ದೀಪ ಬೆಳಗುವುದರ ಮೂಲಕ ದೀಪಾವಳಿ ಆಚರಿಸಲಾಗಿದೆ. 2014ರಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ದೀಪಾವಳಿ ಆಚರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು

ವಿಶ್ವ ಸಂಸ್ಥೆ ಭಾರತದ ರಾಯಭಾರಿ ಸಯ್ಯದ್ ಅಕ್ಬರುದ್ದೀನಿ ಈ ಕುರಿತು ಟ್ವೀಟ್ ಮಾಡಿದ್ದು, " ವಿಶ್ವ ಸಂಸ್ಥೆ ಮೊದಲ ಬಾರಿಗೆ ದೀಪಾವಳಿ ಬೆಳಕನ್ನು ಬೆಳಗಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇನ್ನು ವಿಶ್ವ ಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಪೀಟರ್ ಥಾಮಸ್ ಕೂಡ ಟ್ವೀಟ್ ಮಾಡಿದ್ದು, 'ಕತ್ತಲೆ ಮೇಲೆ ಬೆಳಕು, ಹತಾಶೆ ಮೇಲೆ ಭರವಸೆ, ಅಜ್ಞಾನದ ಮೇಲೆ ಜ್ಞಾನ ದುಷ್ಟತನದ ಮೇಲೆ ಒಳಿತನ್ನು ವಿಶ್ವಸಂಸ್ಥೆ ಬೆಳಗಿಸುತ್ತದೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ತಿಳಿಸಿದ್ದಾರೆ.

English summary
Diwali was commemorated for the first time at the United Nations, with the world body's imposing headquarters here lit up especially on the occasion of the Indian festival of lights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X