ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದ ಭಾರತ

By Mahesh
|
Google Oneindia Kannada News

ಜಿನೇವಾ, ಡಿ. 13: ಸಲಿಂಗ ಕಾಮದ ಮೇಲೆ ಮತ್ತೆ ನಿಷೇಧವನ್ನು ಹೇರುವ ಸುಪ್ರೀಂ ಕೋರ್ಟಿನ ತೀರ್ಪು ಹೊರಬಿದ್ದಿರುವುದರಿಂದ 'ಭಾರತದ ಒಂದು ಹೆಜ್ಜೆ ಹಿಂದಿಟ್ಟಿದೆ'' ಹಾಗೂ ಅದು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಘಟನೆಯ ಮುಖ್ಯಸ್ಥೆ ನವಿ ಪಿಳ್ಳೆ ಗುರುವಾರ ಹೇಳಿದ್ದಾರೆ.

ಸಲಿಂಗ ಕಾಮವನ್ನು ಅಪರಾಧ ಮುಕ್ತಗೊಳಿಸಿ 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಪಡಿಸಿರುವುದನ್ನು ಸ್ಮರಿಸಬಹುದಾಗಿದೆ. [ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್]

'ಖಾಸಗಿ ಹಾಗೂ ಸಹಮತದ ಸಲಿಂಗ ಕಾಮವನ್ನು ಅಪರಾಧವೆಂಬಂತೆ ಪರಿಗಣಿಸುವುದು ರಾಜಕೀಯ ಮತ್ತು ನಾಗರಿಕ ಹಕ್ಕುಗಳ ಕುರಿತ ಅಂತಾರಾಷ್ಟ್ರೀಯ ಒಪ್ಪಂದ ಕೊಡಮಾಡಿರುವ ಖಾಸಗಿತನದ ಹಾಗೂ ತಾರತಮ್ಯರಹಿತತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ' ಎಂದು ಜಿನೇವದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ನವಿ ಪಿಳ್ಳೆ ಹೇಳಿದ್ದಾರೆ.[ಸಲಿಂಗಕಾಮಿಗಳಿಗೆ ಜೈ ಎಂದ ಸೋನಿಯಾ ಗಾಂಧಿ]

UN human rights chief dismayed as India re-criminalizes same-sex relationships

ಆಸ್ಟ್ರೇಲಿಯನ್ ಹೈಕೋರ್ಟ್ ತಡೆ : ಆಸ್ಟ್ರೇಲಿಯದ ರಾಜಧಾನಿಯಲ್ಲಿ ನಡೆಯುತ್ತಿರುವ ಸಲಿಂಗ ವಿವಾಹಗಳಿಗೆ ಆ ದೇಶದ ಹೈಕೋರ್ಟ್ ಗುರುವಾರ ತಡೆ ನೀಡಿದೆ. ಹಾಗೂ ಸಲಿಂಗ ವಿವಾಹಕ್ಕೆ ಅನುಮೋದನೆ ನೀಡುವ ಬಗ್ಗೆ ಸಂಸತ್ತು ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದೆ. ರಾಜಧಾನಿಯಲ್ಲಿ ಜಾರಿಗೆ ಬಂದಿರುವ ಮಹತ್ವದ ಕಾನೂನಿನನ್ವಯ 12ಕ್ಕೂ ಅಧಿಕ ಸಲಿಂಗ ಜೋಡಿಗಳು ಮದುವೆಯಾಗಿದ್ದಾರೆ.[ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ]

ಆಸ್ಟ್ರೇಲಿಯದ ರಾಜಧಾನಿ ಪ್ರದೇಶದಲ್ಲಿ ಜಾರಿಗೆ ಬಂದಿರುವ ಸಲಿಂಗ ವಿವಾಹ ಶಾಸನವನ್ನು ದೇಶದ ಅತ್ಯುನ್ನತ ನ್ಯಾಯಾಲಯ ಎತ್ತಿಹಿಡಿದಿದ್ದರೆ, ಇಂಥದೇ ಕಾನೂನುಗಳು ದೇಶದ ಇತರ ಭಾಗಗಳಲ್ಲೂ ಜಾರಿಗೊಳ್ಳುತ್ತಿದ್ದವು ಹಾಗೂ ಸಲಿಂಗ ವಿವಾಹವನ್ನು ರಾಷ್ಟ್ರ ಮಟ್ಟದಲ್ಲಿ ಕಾನೂನುಬದ್ಧಗೊಳಿಸುವ ಅನಿವಾರ್ಯತೆಗೆ ಆಸ್ಟ್ರೇಲಿಯ ಸರ್ಕಾರ ಒಳಗಾಗುತ್ತಿತ್ತು.

ಸಲಿಂಗ ಮದುವೆ ಕುರಿತಂತೆ ಒಕ್ಕೂಟ ಸಂಸತ್ತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆಯೇ ಹೊರತು ರಾಜ್ಯ ಮತ್ತು ಪ್ರಾದೇಶಿಕ ಪ್ರಾಧಿಕಾರಗಳಲ್ಲ ಎಂದು ಆಸ್ಟ್ರೇಲಿಯದ ಹೈಕೋರ್ಟ್ ಅವಿರೋಧ ತೀರ್ಪಿನಲ್ಲಿ ಹೇಳಿದೆ.[ಸಲಿಂಗಕಾಮಕ್ಕೆ ಫುಲ್ ಸ್ಟಾಪ್ : ಸಲಿಂಗಕಾಮಿಗಳ ಸಿಡಿಮಿಡಿ]

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸಹಜ ಲೈಂಗಿಕತೆ ಅಪರಾಧ) ಸಂಬಂಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮತ್ತೆ ಜಾರಿಗೆ ತರುವ ಎಲ್ಲ ಯತ್ನಗಳನ್ನು ಮಾಡುವುದಾಗಿ ಯುಪಿಎ ಸರ್ಕಾರ ಹೇಳಿದ್ದು, ಸ್ತ್ರೀ, ಪುರುಷ, ದ್ವಿಲಿಂಗಿ ಮತ್ತು ನಪುಂಸಕ ಸಮುದಾಯ ಕುಣಿದಾಡುವಂತೆ ಮಾಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಪಿಲ್ ಸಿಬಲ್ ಸೇರಿದಂತೆ ಅನೇಕ ಗಣ್ಯರು ಸಲಿಂಗಕಾಮ ವಿರುದ್ಧದ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
The United Nations human rights chief Navi Pillay voiced her disappointment at the re-criminalization of consensual same-sex relationships in India, calling it “a significant step backwards” for the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X