ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್: ಸೈನಿಕನ ಪ್ರಾಣ ಉಳಿಸಿದ ಫೋನ್, ವಿಡಿಯೋ ವೈರಲ್

|
Google Oneindia Kannada News

ಖೀವ್, ಏ. 25: ಉಕ್ರೇನ್ ಮತ್ತು ರಷ್ಯಾ ನಡುವಿನ ಭೀಕರ ಯುದ್ಧದಲ್ಲಿ ಸಾವಿರಾರು ಮಂದಿ ಅಸುನೀಗಿದ್ದಾರೆ. ರಷ್ಯಾ ಮಿಲಿಟರಿ ಬಹಳ ಆಕ್ರಮಣಕಾರಿ ರೀತಿಯಲ್ಲಿ ಉಕ್ರೇನ್ ಮೇಲೆ ಎರಗಿ ಬಿದ್ದಿದೆ. ಉಕ್ರೇನ್ ಸೈನಿಕರು ಮತ್ತು ನಾಗರಿಕರು ಅಷ್ಟೇ ಪ್ರಖರವಾಗಿ ಪ್ರತಿರೋಧ ಒಡ್ಡಿದ್ದಾರೆ. ಇದೇ ವೇಳೆ, ಮನಕಲಕುವ ಯುದ್ಧಸಂಬಂಧಿತ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಉಕ್ರೇನ್ ಸೈನಿಕನೊಬ್ಬ ತನ್ನ ಮೊಬೈಲ್ ಫೋನ್‌ನಿಂದ ಪ್ರಾಣ ಉಳಿದ ಘಟನೆಯನ್ನ ಹೇಳುತ್ತಿರುವ ದೃಶ್ಯ ವೈರಲ್ ಆಗಿದೆ.

ಉಕ್ರೇನ್‌ಗೆ ಮಿಲಿಟರಿ ನೆರವು ಘೋಷಿಸಿದ ಅಮೆರಿಕಉಕ್ರೇನ್‌ಗೆ ಮಿಲಿಟರಿ ನೆರವು ಘೋಷಿಸಿದ ಅಮೆರಿಕ

ಕೇವಲ 45 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಉಕ್ರೇನ್ ಸೈನಿಕ ಮಾತನಾಡಿರುವ ದೃಶ್ಯ ಇದೆ. "ನನ್ನತ್ತ ಹಾರಿ ಬಂದ 7.62ಎಂಎಂ ಬುಲೆಟ್ ಅದೃಷ್ಟವಶಾತ್ ನನ್ನ ದೇಹ ಹೊಕ್ಕಲಿಲ್ಲ. ಫೋನ್‌ಗೆ ಬಡಿದಿದ್ದರಿಂದ ನನ್ನ ಪ್ರಾಣ ಉಳಿಯಿತು" ಎಂದು ಉಕ್ರೇನಿಯನ್ ಭಾಷೆಯಲ್ಲಿ ಹೇಳುವ ಈ ಸೈನಿಕ ತನ್ನ ಸ್ಮಾರ್ಟ್‌ಫೋನ್ ಅನ್ನು ತೋರಿಸುತ್ತಾ, "ಇದು ನನ್ನ ಪ್ರಾಣ ಉಳಿಸಿತು" ಎಂದು ತಿಳಿಸುತ್ತಾನೆ.

Viral video of Ukranian soldier telling how his phone saved his life

ಈ ವಿಡಿಯೋದಲ್ಲಿ ಗನ್ ಫೈರಿಂಗ್ ಶಬ್ದ ಬ್ಯಾಕ್‌ಗ್ರೌಂಡ್‌ನಲ್ಲಿ ಕೇಳಿಸುತ್ತಿದೆ. ಯುದ್ಧ ಸಂದರ್ಭದಲ್ಲೇ ಈ ಉಕ್ರೇನಿ ಸೈನಿಕ ತನ್ನ ಸಹ-ಸೈನಿಕನಿಗೆ ಮೊಬೈಲ್ ಫೋನ್‌ನಿಂದ ಪ್ರಾಣ ಉಳಿದ ಸಂಗತಿಯನ್ನ ತಿಳಿಸುತ್ತಿದ್ದಾನೆ.

ಫೆಬ್ರವರಿ 24ರಂದು ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣ ನಡೆಸಿದೆ. ಉಕ್ರೇನ್ ದೇಶದ ಭಾಗವಾಗಿರುವ ಡೋನೆಸ್ಕ್ ಮತ್ತು ಲುಹಾನಸ್ಕ್ ಪ್ರಾಂತ್ಯಗಳ ಸ್ವಾತಂತ್ರ್ಯ ಬೇಡಿಕೆಯನ್ನು ನೆಪವಾಗಿಸಿಕೊಂಡು ರಷ್ಯಾ ಈ ಆಕ್ರಮಣ ಮಾಡಿದೆ. ಉಕ್ರೇನ್ ಹೆಚ್ಚು ಪ್ರತಿರೋಧ ತೋರದೇ ಶರಣಾಗಬಹುದು ಎಂದು ರಷ್ಯಾ ಮಾಡಿದ ಎಣಿಕೆ ಸುಳ್ಳಾಗಿಹೋಗಿದೆ. ಉಕ್ರೇನ್ ಸೇನೆ ಬಹಳ ವೀರಾವೇಶದಿಂದ ಹೋರಾಡುತ್ತಿದೆ. ಅಲ್ಲಿನ ನಾಗರಿಕರೂ ಕೂಡ ಜೀವದ ಹಂಗು ತೊರೆದು ತಮ್ಮ ಕೈಲಾದಷ್ಟು ಮಟ್ಟಕ್ಕೆ ಮತ್ತು ತಮ್ಮದೇ ರೀತಿಯಲ್ಲಿ ಉಕ್ರೇನ್ ಸೇನೆಗೆ ಬೆಂಬಲ ನೀಡುತ್ತಿದ್ದಾರೆ. ಇದರ ಜೊತೆಗೆ ನ್ಯಾಟೋ ದೇಶಗಳು ಹಾಗು ವಿಶ್ವದ ಇತರ ಹಲವು ದೇಶಗಳು ಉಕ್ರೇನ್ ಸೇನೆಗೆ ಪರೋಕ್ಷ ಮತ್ತು ನೇರವಾಗಿ ಮಿಲಿಟರಿ ನೆರವು ನೀಡುತ್ತಿವೆ. ಹೀಗಾಗಿ, ಒಂದು ವಾರದಲ್ಲಿ ಮುಗಿಯಬಹುದು ಎಂದು ಎಣಿಸಿದ್ದ ಯುದ್ಧ ಈಗ ಮೂರನೇ ತಿಂಗಳಿಗೆ ಕಾಲಿಟ್ಟಿದೆ.

Viral video of Ukranian soldier telling how his phone saved his life

ಹತಾಶೆಗೊಂಡಿರುವ ರಷ್ಯಾ ದೇಶ ಉಕ್ರೇನ್ ನಾಗರಿಕರ ಮೇಲೆ ದಾಳಿ ಮಾಡಿ ಅಮಾನವೀಯತೆಯ ಪರಮಾವಧಿ ತೋರುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ಆರೋಪ ಮಾಡುತ್ತಿವೆ. ಆದರೆ ತಾನು ನಾಗರಿಕರನ್ನು ಗುರಿಯಾಗಿಸುತ್ತಿಲ್ಲ, ಬದಲಾಗಿ ಸೇನಾ ನೆಲೆಗಳು ಮತ್ತು ಸೇನಾ ಪಡೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿರುವುದಾಗಿ ರಷ್ಯಾ ಹೇಳಿದೆ.

(ಒನ್ಇಂಡಿಯಾ ಸುದ್ದಿ)

English summary
Mobile phone saves Ukrainian soldier's life from bullet, video goes viral. The soldier is seen in the trenches as sounds of gunfire and explosions are heard in the video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X