ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆರುಸಲೆಮ್‌ನಲ್ಲಿ ಭೇಟಿಗೆ ಪುಟಿನ್‌ಗೆ ಝೆಲೆನ್ಸ್ಕಿ ಆಫರ್‌: ಇಸ್ರೇಲ್ ಪ್ರಧಾನಿ ಮಧ್ಯವರ್ತಿ

|
Google Oneindia Kannada News

ಕೀವ್‌, ಮಾರ್ಚ್ 13: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದ್ದಾರೆ. ಇಬ್ಬರೂ ನಾಯಕರುಗಳು ಭೇಟಿಯಾಗಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಉಕ್ರೇನ್ ಅಧ್ಯಕ್ಷರು ಪುಟಿನ್ ಅವರನ್ನು ಜೆರುಸಲೇಮ್‌ನಲ್ಲಿ ಭೇಟಿಯಾಗಲು ಮುಂದಾಗಿದ್ದಾರೆ ಎಂದು ದಿ ಕೀವ್‌ ಇಂಡಿಪೆಂಡೆಂಟ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮಾತುಕತೆ ನಡೆದಾಗ ಇಬ್ಬರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಂತೆ ಝೆಲೆನ್ಸ್ಕಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರಿಗೆ ಮನವಿ ಮಾಡಿದ್ದಾರೆ.

ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!ಹಿರೋಶಿಮಾ ಮಾರಣಹೋಮ: ಪರಮಾಣು ಶಸ್ತ್ರಾಸ್ತ್ರಗಳಿಂದ ಆಗುವ ಅನಾಹುತ ಒಂದೆರಡಲ್ಲ!

ರಾಯಿಟರ್ಸ್ ವರದಿಗಳ ಪ್ರಕಾರ, "ನಾನು (ಬೆನೆಟ್) ಗೆ ಹೇಳಿದ್ದೇನೆ, ಪ್ರಸ್ತುತ ರಷ್ಯಾ, ಉಕ್ರೇನ್ ಅಥವಾ ಬೆಲಾರಸ್‌ನಲ್ಲಿ ಸಭೆಗಳನ್ನು ನಡೆಸುವುದು ರಚನಾತ್ಮಕವಾಗಿಲ್ಲ. ಯುದ್ಧವನ್ನು ನಿಲ್ಲಿಸಲು ನಾವು (ಒಳಗೊಂಡಿರುವ ದೇಶಗಳ ನಾಯಕರು) ಒಪ್ಪಿಕೊಳ್ಳುವ ಸ್ಥಳಗಳಲ್ಲ. ನಾನು ಇಸ್ರೇಲ್, ನಿರ್ದಿಷ್ಟವಾಗಿ ಜೆರುಸಲೆಮ್ ಅನ್ನು ಅಂತಹ ಸ್ಥಳವೆಂದು ಪರಿಗಣಿಸುತ್ತೇನೆಯೇ? ಇದರು ಸರಿಯೆಂದು ನಾನು ಭಾವಿಸು‌ತ್ತೇನೆ," ಎಂದು ತಿಳಿಸಿದ್ದಾರೆ.

Ukraine war: Zelenskyy offers to meet Putin in Jerusalem, Israeli PM to act as mediator

ಉಕ್ರೇನ್ ಪರವಾಗಿ ವ್ಲಾಡಿಮಿರ್ ಪುಟಿನ್ ಜೊತೆ ಮಾತನಾಡಿದ್ದ ಬೆನೆಟ್‌

ಇದಲ್ಲದೆ, ಬೆನೆಟ್ ಎರಡು ರಾಷ್ಟ್ರಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಕಳೆದ ಶನಿವಾರ ಉಕ್ರೇನ್ ಪರವಾಗಿ ವ್ಲಾಡಿಮಿರ್ ಪುಟಿನ್ ಜೊತೆಯಲ್ಲಿ ಮೂರು ಗಂಟೆಗಳ ಕಾಲ ಸಭೆ ನಡೆಸಿದರು. ಇಸ್ರೇಲ್ ಪ್ರಧಾನಿ ಪುಟಿನ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಪ್ರತ್ಯೇಕವಾಗಿ ಹಲವು ಬಾರಿ ಮಾತನಾಡಿದ್ದಾರೆ.

ಯುಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ, "ಯುದ್ಧವನ್ನು ಕೊನೆಗೊಳಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸಲು ದೇಶವು ಸಿದ್ಧವಾಗಿದೆ. ಆದರೆ ಅವರು ಯಾವುದೇ ವಿಚಾರಕ್ಕೂ ಶರಣಾಗುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ," ಎಂದು ದೃಢವಾಗಿ ಹೇಳಿದ್ದಾರೆ. ಯುದ್ಧವು ಯಾವಾಗ ಕೊನೆಗೊಳ್ಳುತ್ತದೆ ಎಂದು ತನಗೆ ತಿಳಿದಿಲ್ಲ, ಆದರೆ ಉಕ್ರೇನ್ ಗೆಲ್ಲುತ್ತದೆ ಎಂದು ಝೆಲೆನ್ಸ್ಕಿ ಈ ಹಿಂದೆ ಹೇಳಿದ್ದರು.

ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!

ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ದೇಶದಲ್ಲಿ ಸುಮಾರು 1300 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷರು ಹೇಳಿದ್ದರು. ಆದರೆ ಉಕ್ರೇನ್‌ನ ಅಧಿಕಾರಿಗಳು ರಷ್ಯಾದ ಸೈನಿಕರ ಸಾವುನೋವುಗಳ ಸಂಖ್ಯೆ ಹೆಚ್ಚು ಇದೆ ಎಂದು ಹೇಳಿದ್ದಾರೆ. 150,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮೆಲಿಟೊಪೋಲ್ ನಗರವನ್ನು ರಷ್ಯಾದ ಪಡೆಗಳು ಶನಿವಾರ ವಶಪಡಿಸಿಕೊಂಡವು. ತನ್ನ ಜನರ ಮೇಲೆ ರಷ್ಯಾದ ದಾಳಿಗಳು ನಿಂತಿಲ್ಲ ಮತ್ತು ಕಳೆದ ಕೆಲವು ದಿನಗಳಲ್ಲಿ ದೇಶದಿಂದ ಹಲವಾರು ನಾಗರಿಕರ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‌ ಹೇಳಿಕೊಂಡಿದೆ.

ಉಕ್ರೇನ್‌ಗೆ ಅಮೆರಿಕದಿಂದ 200 ಮಿಲಿಯನ್ ಡಾಲರ್ ಆರ್ಥಿಕ ನೆರವು

ಉಕ್ರೇನ್‌ ಮೇಲೆ ಕಳೆದ 18 ದಿನಗಳಿಂದ ರಷ್ಯಾ ಯುದ್ಧ ಮಾಡುತ್ತಿದ್ದು, ಈ ನಡುವೆ ಉಕ್ರೇನ್‌ಗೆ ಅಮೆರಿಕ 200 ಮಿಲಿಯನ್ ಡಾಲರ್ (1,496 ಕೋಟಿ ರೂ.) ಆರ್ಥಿಕ ನೆರವನ್ನು ನೀಡಿದೆ. ಇನ್ನು ರಷ್ಯಾದ ಪಡೆಗಳು ಅಂತಾರಾಷ್ಟ್ರೀಯ ಶಾಂತಿಪಾಲನಾ ಮತ್ತು ಭದ್ರತಾ ಕೇಂದ್ರದ ಮೇಲೆ ಎಂಟು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಎಲ್ವಿವ್ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರವು ಯವೊರಿವ್ ಜಿಲ್ಲೆಯಲ್ಲಿದೆ. ಈ ನಡುವೆ ಉಕ್ರೇನ್ ಮಿಲಿಟರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಬೇಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ. ಯುದ್ಧದಲ್ಲಿ ತೀವ್ರ ಮಟ್ಟಕ್ಕೆ ತಲುಪಿರುವ ರಷ್ಯಾ ರಷ್ಯಾ, ಉಕ್ರೇನ್‌ನ ಪ್ರಾರ್ಥನಾ ಮಂದಿರಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine war: Zelenskyy offers to meet Putin in Jerusalem, Israeli PM to act as mediator.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X