ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ

|
Google Oneindia Kannada News

ಮಾಸ್ಕೋ, ಫೆಬ್ರವರಿ 25: ರಷ್ಯಾ ದೇಶವು ಉಕ್ರೇನ್‌ ಮೇಲೆ ಸಮರ ಸಾರಿ, ಉಕ್ರೇನ್‌ ಮೇಲೆ ದಾಳಿ ನಡೆಸುತ್ತಲಿದೆ. ಈ ನಡುವೆ ಅನಾಮಧೇಯ ಹ್ಯಾಕರ್‌ಗಳು ರಷ್ಯಾದ ಮೇಲೆ ಸೈಬರ್‌ ದಾಳಿ ಘೋಷಣೆ ಮಾಡಿದೆ. ರಾಜ್ಯ-ನಿಯಂತ್ರಿತ ರಷ್ಯಾ ಟುಡೆ ಸುದ್ದಿ ಸೇವೆ ಸೇರಿದಂತೆ ಹಲವಾರು ರಷ್ಯಾದ ಸರ್ಕಾರಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಿದೆ.

ಅನಾಮಧೇಯ ಹ್ಯಾಕರ್‌ಗಳು( Anonymous (@YourAnonOne) ) ಸೈಬರ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದು, ಬಳಿಕ RT.co, ಜೊತೆಗೆ ಕ್ರೆಮ್ಲಿನ್, ರಷ್ಯಾದ ಸರ್ಕಾರ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ. RT.com ಮೇಲೆ ಸೈಬರ್‌ ದಾಳಿ ನಡೆದಿದೆ ಎಂದು ದೃಢಪಡಿಸಿದೆ.

ಉಕ್ರೇನ್ ಮೇಲೆ ರಷ್ಯಾ ಸೈಬರ್ ದಾಳಿ, ಇಂಟರ್ನೆಟ್ ಸಂಪರ್ಕ ಕಡಿತಉಕ್ರೇನ್ ಮೇಲೆ ರಷ್ಯಾ ಸೈಬರ್ ದಾಳಿ, ಇಂಟರ್ನೆಟ್ ಸಂಪರ್ಕ ಕಡಿತ

RT.com ಮೇಲೆ ಸೈಬರ್‌ ದಾಳಿ ನಡೆದ ಹಿನ್ನೆಲೆ ವೆಬ್‌ಸೈಟ್‌ಗಳನ್ನು ನಿಧಾನವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಕೆಲವು ಸೈಟ್‌ಗಳು ಹಲವು ಸಮಯಗಳ ಕಾಲ ಆಫ್‌ಲೈನ್‌ ಆಗಿದೆ ಎಂದು ಹೇಳಿದೆ.

ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ RT.com ಸುದ್ದಿ ಪ್ರಕಟ ಮಾಡುತ್ತಿತ್ತು. ಈ ವೆಬ್‌ಸೈಟ್‌ ರಷ್ಯಾದ ಪರ ದೃಷ್ಟಿಕೋನದಿಂದ ಸುದ್ದಿಯನ್ನು ಪ್ರಕಟ ಮಾಡುತ್ತಿದ್ದವು ಎಂದು ವರದಿಗಳು ಹೇಳಿದೆ. ಇನ್ನು ರಷ್ಯಾ ಆಕ್ರಮಿತ ಪ್ರದೇಶದಲ್ಲಿ ಜನರು ಸಂತಸದಿಂದ ಪಟಾಕಿ ಸಿಡಿಸಿದ್ದಾರೆ ಹಾಗೂ ಹರ್ಷದಿಂದ ಆಚರಣೆ ಮಾಡಿದ್ದಾರೆ ಎಂದು ಈ ವೆಬ್‌ಸೈಟ್‌ ಸುದ್ದಿ ಪ್ರಕಟ ಮಾಡಲಾಗಿತ್ತು.

Ukraine War: Anonymous Declares Cyber War Against Russia, Disables State News Website

ಯುಕೆಯಲ್ಲಿ, ಸಂಸದರು ಟಿವಿ ಚಾನೆಲ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ "ವೈಯಕ್ತಿಕ ಪ್ರಚಾರ ಸಾಧನ" ಮತ್ತು ಅದನ್ನು ನಿಷೇಧಿಸಬೇಕು ಎಂದು ಹೇಳಿದರು.

ಡಿಡಿಒಎಸ್ ದಾಳಿ: ಏನಿದು?

ಇಂಟರ್ನೆಟ್ ಭದ್ರತಾ ತಜ್ಞ ರಾಬರ್ಟ್ ಪಾಟರ್ ಪ್ರಕಾರ Denial-of-service attack ನಡೆದಿದೆ. ಈ ದಾಳಿಯಿಂದಾಗಿ ವೈಬ್‌ಸೈಟ್‌ನಲ್ಲಿ ಉದ್ದೇಶಿತ ವೆಬ್‌ಸೈಟ್‌ನಲ್ಲಿ ಟ್ರಾಫಿಕ್‌ ಉಂಟು ಮಾಡುವುದಾಗಿದೆ. ಈ ಮೂಲಕ ಯಾವುದೇ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಾಗದಂತೆ ಮಾಡುವುದಾಗಿದೆ. ವೆಬ್‌ಸೈಟ್‌ಗೆ ವಿದೇಶಿ ಟ್ರಾಫಿಕ್ ಅನ್ನು ಹೆಚ್ಚಿಸುವುದು ಒಂದು ಸರಳವಾದ ಕ್ರಮವಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ಇನ್ನು ಉಕ್ರೇನ್ ಮೇಲೆ ರಷ್ಯಾವು ಸೈಬರ್ ದಾಳಿ ನಡೆಸಿದ್ದು, ಪರಿಣಾಮ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ. ರಷ್ಯಾದ ಸೈಬರ್ ಆಕ್ರಮಣವು ಈಗಾಗಲೇ ದೇಶದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ವರದಿ ಹೇಳಿದೆ. ಉಕ್ರೇನ್ ನಿಯಂತ್ರಿತ ನಗರವಾದ ಖಾರ್ಕಿವ್‌ನಲ್ಲಿ ಭಾರಿ ಸ್ಫೋಟಗಳು ಕೇಳಿಬಂದ ಸ್ವಲ್ಪ ಸಮಯದ ಬಳಿಕ ಇಂಟರ್ನೆಟ್ ಅಡಚಣೆ ಉಂಟಾಗಿದೆ.

"ಪುಟಿನ್.... ನಾವು ಉಕ್ರೇನ್‌ನ ಜನರನ್ನು ಬೆಂಬಲಿಸುತ್ತೇವೆ. ನಾವು ಸೈನ್ಯದಳವಾಗಿದ್ದೇವೆ. ಪುಟಿನ್ ಆಳ್ವಿಕೆಯಲ್ಲಿ ಕಳೆದುಹೋದ ಜೀವಗಳನ್ನು ನಾವು ಮರೆಯುವುದಿಲ್ಲ," ಎಂದು ಈ ಅನಾಮಧೇಯ ಹ್ಯಾಕರ್‌ಗಳು ಟ್ವೀಟ್‌ ಮೂಲಕ ತಿಳಿಸಿದ್ದಾರೆ. "ಪುಟಿನ್ ಕ್ರಿಮಿನಲ್ ಆಡಳಿತವು ನಮ್ಮ ದಾಳಿಯಿಂದ ಚೇತರಿಸಿಕೊಳ್ಳಲು ಬಹಳ ಕಷ್ಟ ಪಡಲಿದೆ," ಎಂದು ಕೂಡಾ ಹೇಳಿದೆ.

ಉಕ್ರೇನ್‌ ಮೇಲೆ ಸೈಬರ್‌ ದಾಳಿ ನಡೆಸಿದ್ದ ರಷ್ಯಾ

Recommended Video

ಉಕ್ರೇನ್ ಗೆ ಸಹಾಯ ಮಾಡ್ತೀವಿ ಎಂದಿದ್ಧ ನ್ಯಾಟೋ, ರಷ್ಯಾ ಸೇನಾಬಲ ಕಂಡು ಭಯ ಪಡ್ತಾ? | Oneindia Kannada

ಜನವರಿಯಲ್ಲಿ, ಯುಎಸ್ ಸರ್ಕಾರದ ಗುಪ್ತಚರವು, ಉಕ್ರೇನ್ ಅನ್ನು ರಕ್ಷಿಸಲು ನ್ಯಾಟೋ ಮಧ್ಯಪ್ರವೇಶಿಸಿದರೆ ಯುಎಸ್ ವಿರುದ್ಧ ಸಂಭಾವ್ಯ ವಿನಾಶಕಾರಿ ಸೈಬರ್ ದಾಳಿಯನ್ನು ರಷ್ಯಾ ನಡೆಸಬಹುದು ಎಂದು ಎಚ್ಚರಿಕೆ ನೀಡಿದ್ದವು ಎಂಬುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಸೈಬರ್ ದಾಳಿಯೊಂದಿಗೆ ಆಸ್ಟ್ರೇಲಿಯಾವನ್ನು ಗುರಿಯಾಗಿಸಲು ರಷ್ಯಾ-ಸಂಬಂಧಿತ ಕ್ರಿಮಿನಲ್ ಗ್ಯಾಂಗ್‌ಗಳನ್ನು ರಷ್ಯಾವು ಪ್ರೋತ್ಸಾಹಿಸಬಹುದು ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದರು. ಈ ವಾರದ ಆರಂಭದಲ್ಲಿ, ರಷ್ಯಾದ ಸೈಬರ್ ಪಡೆಗಳು ಹಲವಾರು ಉಕ್ರೇನಿಯನ್ ಬ್ಯಾಂಕ್‌ಗಳು ಮತ್ತು ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್‌ ದಾಳಿಯನ್ನು ನಡೆಸಿದ್ದವು.

English summary
Ukraine-Russia War: Anonymous Declares Cyber War Against Russia, Disables State News Website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X