ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಪುತ್ರಿಯರ ಮೇಲೆ ಇಯು, ಯುಎಸ್‌ ಹೊಸ ನಿರ್ಬಂಧ ಯಾಕಾಗಿ?

|
Google Oneindia Kannada News

ಮಾಸ್ಕೋ, ಏಪ್ರಿಲ್ 07: ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಅಪರಾಧಗಳ ಜಾಗತಿಕ ಆರೋಪಗಳ ಮಧ್ಯೆ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಇಬ್ಬರು ಪುತ್ರಿಯರಾದ ಮರಿಯಾ ಪುಟಿನ್ (ವೊರೊಂಟ್ಸೊವಾ) ಮತ್ತು ಕಟೆರಿನಾ ಟಿಖೋನೊವಾ ಅವರನ್ನು ಗುರಿಯಾಗಿಟ್ಟುಕೊಂಡು ಯುನೈಟೆಡ್ ಸ್ಟೇಟ್ಸ್ ಬುಧವಾರ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಇಯು ಕೂಡಾ ಇಬ್ಬರನ್ನು ಗುರಿಯಾಗಿಸಿಕೊಂಡು ನಿರ್ಬಂಧ ಹೇರಿದೆ.

ರಷ್ಯಾದ ಬ್ಯಾಂಕುಗಳ ವಿರುದ್ಧ ದಂಡವನ್ನು ಕಠಿಣಗೊಳಿಸುತ್ತಿದೆ ಎಂದು ಯುಎಸ್‌ ಹೇಳಿದೆ. ಯುನೈಟೆಡ್ ಕಿಂಗ್‌ಡಮ್ ಎರಡು ಪ್ರಮುಖ ಬ್ಯಾಂಕುಗಳ ವಿರುದ್ಧ ನಿರ್ಬಂಧವನ್ನು ಹೇರಿದೆ. ರಷ್ಯಾದಲ್ಲಿ ಬ್ರಿಟಿಷ್ ಹೂಡಿಕೆಯ ಮೇಲಿನ ನಿಷೇಧವನ್ನು ಕೂಡಾ ಹೇರಿದೆ. ವರ್ಷಾಂತ್ಯದ ವೇಳೆಗೆ ರಷ್ಯಾದ ಕಲ್ಲಿದ್ದಲು ಮತ್ತು ತೈಲದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಪ್ರತಿಜ್ಞೆಯನ್ನು ಕೂಡಾ ಯುಎಸ್‌ ಮಾಡಿದೆ.

ಉಕ್ರೇನ್ ನಾಗರಿಕರ ಹತ್ಯೆ ಕಳವಳಕಾರಿ, ಸ್ವತಂತ್ರ ತನಿಖೆ ಅಗತ್ಯ: ಯುಎನ್‌ನಲ್ಲಿ ಭಾರತಉಕ್ರೇನ್ ನಾಗರಿಕರ ಹತ್ಯೆ ಕಳವಳಕಾರಿ, ಸ್ವತಂತ್ರ ತನಿಖೆ ಅಗತ್ಯ: ಯುಎನ್‌ನಲ್ಲಿ ಭಾರತ

ಬುಚಾ ಪಟ್ಟಣದಿಂದ ರಷ್ಯಾದ ಪಡೆಗಳ ದೌರ್ಜನ್ಯದ ಬಳಿಕ ಹಲವಾರು ರಾಷ್ಟ್ರಗಳು ರಷ್ಯಾದ ವಿರುದ್ಧ ನಿರ್ಬಂಧಗಳ ಹೆಚ್ಚಳದ ಕ್ರಮಕ್ಕೆ ಮುಂದಾಗಿದೆ. ಯುರೋಪಿಯನ್ ಒಕ್ಕೂಟವು ಶೀಘ್ರದಲ್ಲೇ ರಷ್ಯಾದಲ್ಲಿ ಹೊಸ ಹೂಡಿಕೆಯ ಮೇಲಿನ ನಿಷೇಧ ಮತ್ತು ಕಲ್ಲಿದ್ದಲಿನ ಮೇಲಿನ ನಿರ್ಬಂಧ ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

Ukraine-Russia War: Why US, EU targeted Putins daughters in new sanctions?

ಪೆನಾಲ್ಟಿಗಳು ಯುಎಸ್ ಹಣಕಾಸು ವ್ಯವಸ್ಥೆಯಿಂದ ಪುಟಿನ್ ಅವರ ಎಲ್ಲಾ ನಿಕಟ ಕುಟುಂಬ ಸದಸ್ಯರನ್ನು ದೂರ ಮಾಡಲಾಗಿದೆ. ಪುಟಿನ್ ಹಾಗೂ ಪುಟಿನ್ ಅವರ ಎಲ್ಲಾ ನಿಕಟ ಕುಟುಂಬ ಸದಸ್ಯರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಾವುದೇ ಆಸ್ತಿಯನ್ನು ಹೊಂದಿದ್ದರೆ ಅದನ್ನು ಯುಎಸ್ ತಡೆಹಿಡಿಯುತ್ತಿದೆ.

ರಷ್ಯಾದ ಅನೇಕ ಯುದ್ಧ ಅಪರಾಧದಲ್ಲಿ ಬುಚಾ ಹತ್ಯೆ ಬರೀ ಒಂದು ಉದಾಹರಣೆ: ಝೆಲೆನ್ಸ್ಕಿರಷ್ಯಾದ ಅನೇಕ ಯುದ್ಧ ಅಪರಾಧದಲ್ಲಿ ಬುಚಾ ಹತ್ಯೆ ಬರೀ ಒಂದು ಉದಾಹರಣೆ: ಝೆಲೆನ್ಸ್ಕಿ

ಮರಿಯಾ-ಟೆರಿನಾ ಯಾರು, ಏತಕ್ಕಾಗಿ ಈ ನಿರ್ಬಂಧ?

ಮರಿಯಾ ವೊರೊಂಟ್ಸೊವಾ ಮತ್ತು ಕಟೆರಿನಾ (ಅಥವಾ ಎಕಟೆರಿನಾ) ಟಿಖೋನೊವಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿಯರು. ಯುರೋಪಿಯನ್ ಕಮಿಷನ್ ಹೊಸ ನಿರ್ಬಂಧದಲ್ಲಿ ಪ್ರಸ್ತಾವಿತ ವ್ಯಕ್ತಿಗಳು ಮತ್ತು ಘಟಕಗಳ ಪಟ್ಟಿಯಲ್ಲಿ ಪುಟಿನ್ ಅವರ ಹಿರಿಯ ಮಗಳು ವೊರೊಂಟ್ಸೊವಾ ಅವರನ್ನು ಸೇರಿಸಲಾಗಿದೆ. ಪುಟಿನ್ ಪುತ್ರಿ "ಆರೋಗ್ಯ ರಕ್ಷಣೆಯಲ್ಲಿ ರಷ್ಯಾದ ಅತಿದೊಡ್ಡ ಖಾಸಗಿ ಹೂಡಿಕೆ ಯೋಜನೆಯಲ್ಲಿ ತೊಡಗಿಸಿಕೊಂಡಿರುವ" ಕಂಪನಿಯಾದ ನೊಮೆಂಕೊದ ಸಹ-ಮಾಲೀಕರಾಗಿದ್ದು ಈ ಕಾರಣದಿಂದಾಗಿ ನಿರ್ಬಂಧವನ್ನು ಹೇರಲಾಗಿದೆ.

Ukraine-Russia War: Why US, EU targeted Putins daughters in new sanctions?

ಆಯೋಗದ ಪಟ್ಟಿಯಲ್ಲಿ ಮರಿಯಾ ವೊರೊಂಟ್ಸೊವಾ ಸಹೋದರಿ ಕಟೆರಿನಾ ಟಿಖೋನೊವಾ ಹೆಸರು ಕೂಡಾ ಸೇರ್ಪಡೆ ಮಾಡಲಾಗಿದೆ. ಕಟೆರಿನಾ ಟಿಖೋನೊವಾ ಪ್ರಸ್ತುತ ಇನ್ನೋಪ್ರಾಕ್ಟಿಕಾದ ಮುಖ್ಯಸ್ಥರಾಗಿದ್ದಾರೆ, ರಷ್ಯಾದ ಪ್ರಮುಖ ಕಂಪನಿಗಳಿಂದ ಧನಸಹಾಯವನ್ನು ಹೊಂದಿದ್ದಾರೆ. ಹಾಗೆಯೇ ಕಟೆರಿನಾರ ನಿರ್ದೇಶಕರು ಅಧ್ಯಕ್ಷ ಪುಟಿನ್ ಅವರ ನಿಕಟವರ್ತಿಗಳ ಆಂತರಿಕ ವಲಯದ ಸದಸ್ಯರಾಗಿದ್ದಾರೆ. ಆದ್ದರಿಂದಾಗಿ ಕಟೆರಿನಾ ಟಿಖೋನೊವಾ ಮೇಲೆಯೂ ಯುಎಸ್ ನಿರ್ಬಂಧವನ್ನು ಹೇರಿದೆ.

Recommended Video

ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ನಾಶ ಮಾಡಿದ ಹಿಂದೂ ಯುವಕರ ಮೇಲೆ HDK ಕೆಂಡಾಮಂಡಲ | Oneindia Kannada

English summary
Ukraine-Russia War: Why US, EU targeted Putin's daughters Mariya, Katerina in new sanctions?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X