ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ಗೆ 1 ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಸಹಾಯ ಘೋಷಿಸಿದ ಯುಎಸ್‌

|
Google Oneindia Kannada News

ವಾಷಿಂಗ್ಟನ್‌, ಮಾರ್ಚ್ 17: ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಬುಧವಾರ ಉಕ್ರೇನ್‌ಗೆ ಹೊಸ ಭದ್ರತಾ ಸಹಾಯವನ್ನು ಘೋಷಣೆ ಮಾಡಿದ್ದಾರೆ. ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳ ನಿಯೋಜನೆಗಾಗಿ ಉಕ್ರೇನ್‌ಗೆ ಸುಮಾರು 1 ಬಿಲಿಯನ್ ಘೋಷಣೆ ಮಾಡಿದ್ದಾರೆ.

ರಷ್ಯಾದೊಂದಿಗಿನ ಯುದ್ಧದಲ್ಲಿ ಉಕ್ರೇನ್‌ಗೆ "ಅಭೂತಪೂರ್ವ" ಬೆಂಬಲದ ಭರವಸೆಯನ್ನು ನೀಡಿದ ಯುಎಸ್‌ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್‌ನಲ್ಲಿ ದಾಳಿಗೆ ಒಳಗಾದ ರಾಷ್ಟ್ರ ರಾಜಧಾನಿ ಕೀವ್‌ನಲ್ಲಿ ರಷ್ಯಾದ ಪಡೆಗಳ ವಿರುದ್ಧದ ಹೋರಾಟದಕ್ಕಾಗಿ ಅನುಮೋದನೆ ಮಾಡಲಾದ ನಗದು ವಾರಾಂತ್ಯದಲ್ಲಿ ನಿಗದಿಪಡಿಸಿದ ಇನ್ನೂರು ಮಿಲಿಯನ್‌ ಡಾಲರ್‌ ಹಾಗೂ ಕಳೆದ ವಾರ ಅಮೆರಿಕ ಕಾಂಗ್ರೆಸ್ ಅನುಮೋದಿಸಿದ ಸಹಾಯ ಪ್ಯಾಕೇಜ್‌ನಿಂದ 800 ಮಿಲಿಯನ್ ಡಾಲರ್‌ ಹಣವನ್ನು ಒಳಗೊಂಡಿದೆ.

ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್! ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ ಜೋ ಬೈಡನ್!

"ಈ ಆಕ್ರಮಣದ ವಿರುದ್ಧ ಹೋರಾಡಲು ಸಹಾಯ ಮಾಡಲು ನಮ್ಮ ರಕ್ಷಣಾ ಇಲಾಖೆಯಿಂದ ಉಕ್ರೇನ್‌ ಮಿಲಿಟರಿಗೆ ಉಪಕರಣಗಳ ನೇರ ವರ್ಗಾವಣೆಯಾಗಿದೆ," ಎಂದು ಕೂಡಾ ಈ ಸಂದರ್ಭದಲ್ಲೇ ಜೋ ಬೈಡೆನ್‌ ಮಾಹಿತಿ ನೀಡಿದ್ದಾರೆ. "ಹೆಚ್ಚುವರಿ ದೀರ್ಘ-ಶ್ರೇಣಿಯ ಆಂಟಿ ಏರ್‌ಕ್ರಾಫ್ಟ್‌ ವ್ಯವಸ್ಥೆಯ ಸಹಾಯ ಕೂಡಾ ಉಕ್ರೇನ್‌ಗೆ ಯುಎಸ್‌ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ.

Ukraine-Russia War: US To Send Long-Range Anti-Aircraft Systems To Ukraine

ರಷ್ಯಾಗೆ 3ನೇ ಮಹಾಯುದ್ಧದ ಎಚ್ಚರಿಕೆ ನೀಡಿದ್ದ ಜೋ ಬೈಡನ್!

ಉಕ್ರೇನ್‌ನಲ್ಲಿ ಮಾಸ್ಕೋ ವಿರುದ್ಧ ಅಮೆರಕ ಹೋರಾಟದ ಕಣಕ್ಕೆ ಇಳಿಯುವುದಿಲ್ಲ ಎಂದು ಆರಂಭದಲ್ಲೇ ಸ್ಪಷ್ಟವಾಗಿ ಒತ್ತಿ ಹೇಳಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನ್ಯಾಟೋ ಮತ್ತು ಕ್ರೆಮ್ಲಿನ್ ನಡುವಿನ ನೇರ ಘರ್ಷಣೆಯು ಮೂರನೇ ಮಹಾಯುದ್ಧವನ್ನು ಪ್ರಚೋದಿಸುತ್ತದೆ ಎಂದಿದ್ದಾರೆ.

Breaking: ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಕೋರ್ಟ್ ಆದೇಶ Breaking: ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ರಷ್ಯಾಗೆ ವಿಶ್ವಸಂಸ್ಥೆ ಕೋರ್ಟ್ ಆದೇಶ

ಯುರೋಪ್ ನೆಲದಲ್ಲಿರುವ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಾವು ಸದಾ ನಿಲ್ಲುವುದನ್ನು ಮುಂದುವರಿಸುತ್ತೇವೆ. ಇದರಲ್ಲಿ ಯಾವುದೇ ರಾಜಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲು ಬಯಸುತ್ತೇವೆ. ನಾವು ಯುನೈಟೆಡ್ ಸ್ಟೇಟ್ಸ್‌ನ ಸಂಪೂರ್ಣ ಶಕ್ತಿಯೊಂದಿಗೆ NATO ಪ್ರದೇಶದ ಪ್ರತಿಯೊಂದು ಇಂಚನ್ನೂ ರಕ್ಷಿಸುತ್ತೇವೆ ಹಾಗೂ NATO ಅನ್ನು ಉತ್ತೇಜಿಸುತ್ತೇವೆ. ನಾವು ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಯುದ್ಧ ಮಾಡುವುದಿಲ್ಲ. NATO ಮತ್ತು ರಷ್ಯಾ ನಡುವಿನ ನೇರ ಮುಖಾಮುಖಿ ವಿಶ್ವ ಸಮರ III ಆಗಲಿದ್ದು, ಅದನ್ನು ತಡೆಯಲು ನಾವು ಶ್ರಮಿಸಬೇಕಿದೆ ಎಂದು ಈ ಹಿಂದೆ ಜೋ ಬೈಡೆನ್‌ ಹೇಳಿದ್ದರು.

"ಪುಟಿನ್ ಇದೇ ರೀತಿ ದಯೆಯಿಲ್ಲದಂತೆ ಆಕ್ರಮಣವನ್ನು ಮುಂದುವರಿಸುತ್ತಿದ್ದಂತೆ, ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ಪುಟಿನ್ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತವೆ. ಜಾಗತಿಕ ವೇದಿಕೆಯಲ್ಲಿ ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು," ಎಂದು ಬೈಡನ್ ಹೇಳಿದರು.

ಉಕ್ರೇನ್‌ನಲ್ಲಿ ಯುದ್ಧ ನಿಲ್ಲಿಸಲು ಆದೇಶ

ಇನ್ನು ಉಕ್ರೇನ್ ಮೇಲಿನ ಹಗೆತನವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಕೋರ್ಟ್ ರಷ್ಯಾಗೆ ಆದೇಶಿಸಿದೆ. ಕಳೆದ ಎರಡು ವಾರಗಳ ಹಿಂದೆ ವಿಶ್ವ ನ್ಯಾಯಾಲಯ ಎಂದೂ ಕರೆಯಲ್ಪಡುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಅನ್ನು ಮಧ್ಯಪ್ರವೇಶಿಸುವಂತೆ ಉಕ್ರೇನ್ ಮನವಿ ಮಾಡಿಕೊಂಡಿತ್ತು. ರಷ್ಯಾ 1948ರ ನರಮೇಧದ ನಿಯಮವನ್ನು ಉಲ್ಲಂಘಿಸಿದೆ ಎಂದು ಉಕ್ರೇನ್ ಆರೋಪಿಸಿತು.

"ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ತನ್ನ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಗೆಲುವು ಸಾಧಿಸಿದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ತನ್ನ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಈ ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿರುತ್ತದೆ. ರಷ್ಯಾ ತಕ್ಷಣ ಅದನ್ನು ಅನುಸರಿಸಬೇಕು. ಈ ಆದೇಶವನ್ನು ನಿರ್ಲಕ್ಷಿಸುವುದು ರಷ್ಯಾವನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಕ್ರಿಕೆಟ್ ಕೆರಿಯರ್ ನಲ್ಲಿ ಇದುವರೆಗೂ ಒಂದೇ ಒಂದು ನೋಬಾಲ್ ಹಾಕದ 5 ಬೌಲರ್ಸ್ | Oneindia Kannada

English summary
Ukraine-Russia War: US To Send Long-Range Anti-Aircraft Systems To Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X