ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ದಾಳಿ: ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಕರ್ಫ್ಯೂ ಘೋಷಣೆ

|
Google Oneindia Kannada News

ಕೀವ್‌, ಫೆಬ್ರವರಿ 24: ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದು ನಿರೀಕ್ಷೆಯಂತೆಯೇ ಉಭಯ ದೇಶಗಳ ಮಧ್ಯೆ ಯುದ್ಧ ಆರಂಭವಾಗಿದೆ. ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ದೇಶವು ಹೋರಾಡುತ್ತಿರುವಾಗ ಕೀವ್‌ನಲ್ಲಿ ಕರ್ಫ್ಯೂ ಘೋಷಣೆ ಮಾಡಲಾಗಿದೆ.

ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ದೇಶವು ಹೋರಾಡುತ್ತಿರುವಾಗ ಕೀವ್‌ ಮೇಯರ್‌ ವಿಟಾಲಿ ಕ್ಲಿಟ್ಸ್ಕೊ ಗುರುವಾರ ಉಕ್ರೇನ್‌ನ ರಾಜಧಾನಿಯಲ್ಲಿ ರಾತ್ರಿಯ ಕರ್ಫ್ಯೂ ಘೋಷಿಸಿದ್ದಾರೆ. ಮೆಟ್ರೋ ನಿಲ್ದಾಣಗಳು ಬಾಂಬ್ ಶೆಲ್ಟರ್‌ಗಳಾಗಿ ಕಾರ್ಯನಿರ್ವಹಿಸಲು ತೆರೆದಿರುತ್ತವೆ ಎಂದು ಕೂಡಾ ಹೇಳಿದ್ದಾರೆ. ಮಾಜಿ ವಿಶ್ವ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಕರ್ಫ್ಯೂ ಸ್ಥಳೀಯ ಸಮಯ ರಾತ್ರಿ 10:00 ರಿಂದ ಬೆಳಿಗ್ಗೆ 7:00 ರವರೆಗೆ ಇರುತ್ತದೆ (2000-0500 GMT) ಮತ್ತು ಆ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಕೀವ್‌ ಮೇಯರ್‌ ವಿಟಾಲಿ ಕ್ಲಿಟ್ಸ್ಕೊ ತಿಳಿಸಿದ್ದಾರೆ.

 ಉಕ್ರೇನ್‌ನ 11 ವಾಯುನೆಲೆ ಸೇರಿ 70ಕ್ಕೂ ಅಧಿಕ ಮಿಲಿಟರಿ ನೆಲೆ ನಾಶ: ರಷ್ಯಾ ಉಕ್ರೇನ್‌ನ 11 ವಾಯುನೆಲೆ ಸೇರಿ 70ಕ್ಕೂ ಅಧಿಕ ಮಿಲಿಟರಿ ನೆಲೆ ನಾಶ: ರಷ್ಯಾ

ರಷ್ಯಾದ ಪಡೆಗಳ ನಿರಂತರ ದಾಳಿಯ ನಡುವೆ ಉಕ್ರೇನ್ ಮಿಲಿಟರಿ ವಿಮಾನವೊಂದು ರಾಜಧಾನಿ ಕೀವ್ ಬಳಿ ಪತನಗೊಂಡಿದೆ. ವಿಮಾನದಲ್ಲಿ 14 ಪ್ರಯಾಣಿಕರಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಉಕ್ರೇನ್‌ನಲ್ಲಿನ 11 ವಾಯುನೆಲೆಗಳು ಸೇರಿದಂತೆ 70 ಕ್ಕೂ ಹೆಚ್ಚು ಮಿಲಿಟರಿನೆಲೆಗಳನ್ನು ತನ್ನ ಮಿಲಿಟರಿ ನಾಶಪಡಿಸಿದೆ.

Ukraine-Russia War: Ukraine Capital Kyiv Declares Curfew

ವಿವಿಧ ಉಕ್ರೇನಿಯನ್ ಅಧಿಕೃತ ಮೂಲಗಳಿಂದ ಎಎಫ್‌ಪಿ ಲೆಕ್ಕಾಚಾರದ ಪ್ರಕಾರ, ಸೈನಿಕರು ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ. ಉಕ್ರೇನ್‌ನ ಕಪ್ಪು ಸಮುದ್ರದ ಬಂದರು ನಗರವಾದ ಒಡೆಸ್ಸಾ ಬಳಿಯ ಸೇನಾ ನೆಲೆಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ರಷ್ಯಾದ ಪಡೆಗಳು ರಾಜಧಾನಿ ಕೀವ್‌ ಸುತ್ತಲಿನ ಪ್ರದೇಶವನ್ನು ತಲುಪಿವೆ ಎಂದು ಉಕ್ರೇನ್ ಗಡಿ ಸಿಬ್ಬಂದಿ ಹೇಳಿದ್ದಾರೆ.

 50 ರಷ್ಯಾ ಸೈನಿಕರು, 6 ವಿಮಾನ ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್‌ 50 ರಷ್ಯಾ ಸೈನಿಕರು, 6 ವಿಮಾನ ಹೊಡೆದುರುಳಿಸಿದ್ದೇವೆ ಎಂದ ಉಕ್ರೇನ್‌

ಮೂರು ಕಡೆಗಳಿಂದ ದಾಳಿ ಮಾಡಿದ ರಷ್ಯಾ ಪಡೆ

ಉಕ್ರೇನ್ ಇತರ ದೇಶಗಳು ಮತ್ತು ಪ್ರಧಾನಿ ಮೋದಿಯವರಿಂದ ಸಹಾಯವನ್ನು ಕೋರಿದೆ. ಇದೇ ವೇಳೆ ಅಮೆರಿಕ ಕೂಡ ರಷ್ಯಾಕ್ಕೆ ಎಚ್ಚರಿಕೆ ನೀಡಿದೆ. ರಷ್ಯಾದ ಪಡೆಗಳು ಮೂರು ಕಡೆಯಿಂದ ದಾಳಿ ಮಾಡಿದೆ ಎಂದು ವರದಿಯು ಹೇಳಿದೆ. ರಷ್ಯಾದ ಪಡೆಗಳು ಉಕ್ರೇನ್ ಮೇಲೆ ದೊಡ್ಡ ದಾಳಿಯನ್ನು ಪ್ರಾರಂಭಿಸಿದೆ. ನಗರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತವೆ.

ಭೂಮಿ, ವಾಯು ಮತ್ತು ಸಮುದ್ರದ ಮೂಲಕ ಆಕ್ರಮಣ ನಡೆಸಲಾಗಿದೆ. "ರಷ್ಯಾ ದುಷ್ಟ ಮಾರ್ಗವನ್ನು ಪ್ರಾರಂಭಿಸಿದೆ, ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ," ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ. ಇನ್ನು ಪ್ರಧಾನಿ ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶ್ರಿಂಗ್ಲಾ ಹೇಳಿದ್ದಾರೆ. ಇನ್ನು ಹಲವಾರು ನೆರೆಯ ದೇಶಗಳಿಗೆ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ಬರಲು ಆರಂಭ ಮಾಡಿದ್ದಾರೆ. ಉಕ್ರೇನ್‌ನಿಂದ 4,000 ಕ್ಕೂ ಹೆಚ್ಚು ಜನರು ಗಡಿಯಿಂದ ಬಂದಿದ್ದಾರೆ ಎಂದು ಮೊಲ್ಡೊವಾ ಮಾತ್ರ ಹೇಳಿದೆ. ಇನ್ನು ಈಗಾಗಲೇ ಕೀವ್‌ನಿಂದ ಹಲವಾರು ಮಂದಿ ತೆರಳಿದ್ದಾರೆ.

ಇನ್ನು ಭಾರತವು ತನ್ನ ದೇಶಕ್ಕೆ ಭಾರತೀಯರನ್ನು ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ವಾಯು ಮಾರ್ಗವನ್ನು ಮುಚ್ಚಲಾಗಿರುವ ಕಾರಣದಿಂದಾಗಿ ಉಕ್ರೇನ್‌ನಲ್ಲಿ ಭಾರತೀಯರು ಬಾಕಿಯಾಗಿದ್ದಾರೆ. ಉಕ್ರೇನ್‌ನ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸುಮಾರು 18,000 ಭಾರತೀಯರನ್ನು ಮರಳಿ ಕರೆತರಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್‌ನಲ್ಲಿ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಎಲ್ಲಾ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ.

ನಾನು ಉಕ್ರೇನ್‌ನಲ್ಲಿರುವ ಮಲಯಾಳಿ ವಿದ್ಯಾರ್ಥಿಗಳೊಂದಿಗೆ ಫೋನ್‌ನಲ್ಲಿ ಮಾತನಾಡಿದೆ. ಉಕ್ರೇನ್‌ನ ದಕ್ಷಿಣ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳು ನಮಗೆ ಆಹಾರ, ನೀರು, ವಿದ್ಯುತ್‌ ಲಭ್ಯವಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿಯಾಗಬಾರದು. ಇರಾಕ್‌ನಂತಹ ಸ್ಥಳಗಳಿಂದಲೂ ನಮ್ಮ ಸರ್ಕಾರ ಭಾರತೀಯರನ್ನು ಮರಳಿ ಕರೆತಂದಿದೆ ಎಂದು ಕೂಡಾ ಕೇಂದ್ರ ಸಚಿವ ವಿ ಮುರಳೀಧರನ್ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

Russia ಹೇಳಿದ್ದು ಒಂದು ! ಮಾಡ್ತಿರೋದು ಇನ್ನೊಂದು ! | Oneindia Kannada

English summary
Ukraine-Russia War: Ukraine Capital Kyiv Declares Curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X