ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಯುದ್ಧ: ಕಚ್ಚಾ ತೈಲ ದರ ಏರಿಕೆ ಹಿನ್ನೆಲೆ ಇಂಧನ ಬೆಲೆ ಏರಿಸಿದ ಸೌದಿ ಅರೇಬಿಯಾ

|
Google Oneindia Kannada News

ರಿಯಾದ್‌, ಮಾರ್ಚ್ 05: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಹಲವಾರು ವಲಯಗಳಿಗೆ ಪರಿಣಾಮವನ್ನು ಬೀರುತ್ತಿದೆ. ಮುಖ್ಯವಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಗಗನಕ್ಕೆ ಏರಿದೆ. ಈ ಹಿನ್ನೆಲೆಯಿಂದಾಗಿ ಸೌದಿ ಅರೇಬಿಯಾದಲ್ಲಿ ಇಂಧನ ಬೆಲೆಯನ್ನು ಏರಿಕೆ ಮಾಡಲಾಗಿದೆ.

ಉಕ್ರೇನ್‌ ಹಾಗೂ ರಷ್ಯಾ ಯುದ್ಧ ನಡುವೆ ಜಾಗತಿಕ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 115 ಡಾಲರ್‌ಗೂ ಅಧಿಕ ಮಟ್ಟಕ್ಕೆ ಏರಿಕೆ ಕಂಡಿದೆ. ರಾಷ್ಟ್ರ ನಿಯಂತ್ರಿತ ಸೌದಿ ಅರಾಮ್ಕೊ ತನ್ನ ಅರಬ್ ಲೈಟ್ ಕಚ್ಚಾ ತೈಲವನ್ನು ಏಷ್ಯಾಕ್ಕೆ ಮುಂದಿನ ತಿಂಗಳು ರಫ್ತು ಮಾಡುವ ಸಂದರ್ಭದಲ್ಲಿ ಪ್ರಸ್ತುತ ಬೆಲೆಗಿಂತ ಪ್ರತಿ ಬ್ಯಾರೆಲ್‌ಗೆ 4.95 ಡಾಲರ್‌ ಏರಿಸಿದೆ.

ದಶಕದಲ್ಲೇ ಕಾಣದಂಥ ದಾಖಲೆ ಮಟ್ಟಕ್ಕೇರಿದ ಕಚ್ಚಾತೈಲ ಬೆಲೆದಶಕದಲ್ಲೇ ಕಾಣದಂಥ ದಾಖಲೆ ಮಟ್ಟಕ್ಕೇರಿದ ಕಚ್ಚಾತೈಲ ಬೆಲೆ

ಕಳೆದ ಮಾರ್ಚ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 2.15 ಡಾಲರ್‍ ಏರಿಕೆ ಮಾಡಲಾಗಿತ್ತು. ಇನ್ನು 2000ರ ನಂತರ ಬ್ಲೂಮ್‌ಬರ್ಗ್‌ ಸಂಗ್ರಹ ಮಾಡಿದ ಡೇಟಾಗಳ ಪ್ರಕಾರ ಇದು ಭಾರೀ ಪ್ರಮಾಣದ ಏರಿಕೆ ಆಗಿದೆ. ವ್ಯಾಪಾರಿಗಳು ಮತ್ತು ರಿಫೈನರ್‌ಗಳ ಸಮೀಕ್ಷೆಯ ಪ್ರಕಾರ ಇಂಧನ ಕಂಪನಿಯು ಇಂಧನ ದರವನ್ನು 1.70 ಡಾಲರ್‌ ಏರಿಕೆ ಮಾಡಲು ನಿರೀಕ್ಷೆ ಇದೆ.

Ukraine-Russia War: Saudi Arabia Hikes Oil Prices as Crude Surges

ಇನ್ನು ಸೌದಿ ಅರಾಮ್ಕೊ ಕಂಪನಿಯು ಏಷ್ಯಾದಲ್ಲಿ ಇತರ ಶ್ರೇಣಿಗಳಿಗೆ ಬ್ಯಾರೆಲ್‌ಗೆ 2.70 ಡಾಲರ್‌ ಏರಿಕೆ ಮಾಡಿದೆ. ಯುಎಸ್‌ ಗ್ರಾಹಕರಿಗೆ ಎಲ್ಲಾ ಬೆಲೆಗಳನ್ನು ಒಂದು ಡಾಲರ್‌ ಹಾಗೂ ವಾಯುವ್ಯ ಯುರೋಪ್‌ಗೆ 1.20ರಿಂದ 2.10 ಡಾಲರ್‌ ನಡುವೆ ಹೆಚ್ಚಿಸಿದೆ. ಮೆಡಿಟರೇನಿಯನ್‌ಗೆ 2 ಯುಎಸ್‌ಡಿಯಷ್ಟು ಬೆಲೆ ಏರಿಕೆ ಮಾಡಿದೆ.

ಒಂದು ದಶಕದ ಬಳಿಕ ಗಗನಕ್ಕೆ ಏರಿದ ಕಚ್ಚಾ ತೈಲ ದರ

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ ಒಂದು ದಶಕದ ಬಳಿಕ ಜಾಗತಿಕ ಕಚ್ಚಾ ತೈಲ ದರವು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರ ಪರಿಣಾಮ ಹಲವಾರು ರಾಷ್ಟ್ರಗಳ ಮೇಲೆ ಬೀರುತ್ತಿದೆ. ಯುಎಸ್ ಮತ್ತು ಯುರೋಪ್ ರಾಷ್ಟ್ರಗಳು ಮಾಸ್ಕೋದಿಂದ ಇಂಧನ ರಫ್ತು ಮಾಡಿಕೊಂಡರೆ ನೇರವಾಗಿ ದಂಡ ಇಲ್ಲವಾದರೂ ಹಲವಾರು ರಾಷ್ಟ್ರಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಿದರೆ ದಂಡ ಬೀಳಬಹುದು ಎಂಬ ಆತಂಕದಿಂದಾಗಿ ರಷ್ಯಾದ ವಹಿವಾಟನ್ನೇ ನಿಲ್ಲಿಸಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತೀವ್ರ ಬದಲಾವಣೆಗಳು ಕಂಡು ಬಂದಿದೆ. ಕಚ್ಚಾ ತೈಲ ಖರೀದಿದಾರರು ಬೇರೆ ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದಾರೆ.

ರಷ್ಯಾದೊಂದಿಗೆ ಬಿರುಕು ಉಂಟಾಗುವ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು

ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ಒಪೆಕ್ + ಬುಧವಾರದಂದು ಉತ್ಪಾದನೆಯನ್ನು ಕ್ರಮೇಣವಾಗಿ ಹೆಚ್ಚಿಸುವುದನ್ನು ಮುಂದುವರಿಸಲು ನಿರ್ಧರಿಸಿದ ನಂತರ ಅರಾಮ್ಕೊ ಈ ನಿರ್ಧಾರವನ್ನು ಕೈಗೊಂಡಿದೆ. ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಅದರ ಪಾಲುದಾರರು ನಿಗದಿಪಡಿಸಿದ ಕೋಟಾಗಳನ್ನು ಮೀರಿ ಉತ್ಪಾದನೆಯನ್ನು ಹೆಚ್ಚಿಸುವ ಕರೆಗಳನ್ನು ಇಲ್ಲಿಯವರೆಗೆ ವಿರೋಧಿಸಿವೆ. ಅದರಿಂದಾಗಿ ರಷ್ಯಾದೊಂದಿಗೆ ಬಿರುಕು ಉಂಟುಮಾಡಬಹುದು ಮತ್ತು ಒಪೆಕ್ + ಮೈತ್ರಿಗೆ ತೊಡಕು ಉಂಟು ಮಾಡಬಹುದು ಎಂದು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಭಿಪ್ರಾಯಪಟ್ಟಿದೆ.

Recommended Video

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ,ಮ್ಯಾಜಿಕ್‌ ಸ್ಪಿನ್ನರ್ ಶೇನ್ ವಾರ್ನ್ ನಿಧನ | Oneindia Kannada

ಸೌದಿ ಅರೇಬಿಯಾದ 60% ಕ್ಕಿಂತ ಹೆಚ್ಚು ತೈಲ ಸಾಗಣೆಯನ್ನು ಏಷ್ಯಾಕ್ಕೆ ಮಾಡುತ್ತದೆ. ಪ್ರಮುಖವಾಗಿ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಭಾರತವು ಸೌದಿ ಅರೇಬಿಯಾದಿಂದ ಅತೀ ಹೆಚ್ಚು ಕಚ್ಚಾ ತೈಲವನ್ನು ಖರೀದಿ ಮಾಡುವ ರಾಷ್ಟ್ರಗಳು ಆಗಿದೆ. ಅರಾಮ್ಕೊದ ಬೆಲೆಯ ಕ್ರಮಗಳು ಸಾಮಾನ್ಯವಾಗಿ ಈ ದೇಶಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Saudi Arabia Hikes Oil Prices as Crude Surges on Ukraine War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X