ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ದೇಶದ ಸೈನಿಕರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್

|
Google Oneindia Kannada News

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಾಯಗೊಂಡ ರಷ್ಯಾದ ಸೈನಿಕರನ್ನು ಭೇಟಿ ಮಾಡಿದ್ದು ಅದರ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಪುಟಿನ್ ತಮ್ಮ ಸೈನಿಕರ ಕೈ ಕುಲುಕುತ್ತಿರುವುದನ್ನು ಕಾಣಬಹುದು. ಉಕ್ರೇನ್‌ನಲ್ಲಿ ಹೋರಾಡುತ್ತಿರುವ ಸೈನಿಕರನ್ನು ಪುಟಿನ್ ಅವರು ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. ಈ ಸೈನಿಕರನ್ನು ಭೇಟಿಯಾದಾಗ ರಷ್ಯಾದ ಅಧ್ಯಕ್ಷರು ಬಿಳಿ ಲ್ಯಾಬ್ ಕೋಟ್ ಧರಿಸಿರುವುದನ್ನು ಕಾಣಬಹುದು.

ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ಎರಡೂ ಕಡೆಯಿಂದ ಸಾಕಷ್ಟು ಸಾವುನೋವುಗಳನ್ನು ಕಂಡಿದೆ ಮತ್ತು ಅನೇಕ ಸೈನಿಕರನ್ನು ಯುದ್ಧ ಕೈದಿಗಳಾಗಿ ತೆಗೆದುಕೊಳ್ಳಲಾಗಿದೆ.

ಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿಟೈಮ್ ಪ್ರಭಾವಿ ಜನರ ಪಟ್ಟಿಯಲ್ಲಿ ಜೊತೆಯಾದ ಪುಟಿನ್, ಝೆಲೆನ್ಸ್ಕಿ

ಗುರುವಾರ ಮಾರ್ಚ್ 24ಕ್ಕೆ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ಅವರು, ರಷ್ಯಾ ಸೇನೆಯ ಯುದ್ಧ ಉಕ್ರೇನ್ ಮೇಲೆ ಮಾತ್ರವಲ್ಲ, ಸ್ವಾತಂತ್ರ್ಯದ ವಿರುದ್ಧ ಯುದ್ಧವಾಗಿದೆ. ಆದ್ಧರಿಂದ ಈ ಯುದ್ಧದ ವಿರುದ್ಧ ಎಲ್ಲರೂ ಒಟ್ಟಾಗಿ ನಿಲ್ಲಲೇಬೇಕು ಎಂದು ಮನವಿ ಮಾಡಿದ್ದಾರೆ.

Ukraine-Russia War: Putin meets Russian soldiers

ರಷ್ಯಾದ ಉಕ್ರೇನ್ ಆಕ್ರಮಣದ ಒಂದು ತಿಂಗಳ ನಂತರ ಗುರುವಾರದಿಂದ ಪ್ರಾರಂಭವಾಗುವ ಜಾಗತಿಕ ಪ್ರತಿಭಟನೆಗಳಿಗೆ ಕರೆ ನೀಡಿದ ಝೆಲೆನ್ಸ್ಕಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾ, "ಇಂದಿನಿಂದ ಇನ್ನು ಮುಂದೆ ನಿಮ್ಮ ನಿಲುವನ್ನು ತೋರಿಸಿ. ನಿಮ್ಮ ಕಚೇರಿಗಳು, ನಿಮ್ಮ ಮನೆಗಳು, ನಿಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ಬನ್ನಿ. ಶಾಂತಿಯಿಂದ ಉಕ್ರೇನ್‌ಗೆ ಬೆಂಬಲ ನೀಡಿ, ಸ್ವಾತಂತ್ರ್ಯವನ್ನು ಬೆಂಬಲಿಸಲು, ಜೀವನವನ್ನು ಬೆಂಬಲಿಸಲು ಉಕ್ರೇನ್ ಜೊತೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ''.

'ವ್ಲಾದಿಮಿರ್ ಪುಟಿನ್‌ಗೆ ಬ್ಲಡ್ ಕ್ಯಾನ್ಸರ್' : ರಷ್ಯನ್ ಉದ್ಯಮಿ'ವ್ಲಾದಿಮಿರ್ ಪುಟಿನ್‌ಗೆ ಬ್ಲಡ್ ಕ್ಯಾನ್ಸರ್' : ರಷ್ಯನ್ ಉದ್ಯಮಿ

ಕಳೆದ ತಿಂಗಳು ಫೆಬ್ರವರಿ 24 ರ ಮುಂಜಾನೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಗಳು (ಡಿಪಿಆರ್ ಮತ್ತು ಎಲ್ಪಿಆರ್) ಕೈವ್ ಪಡೆಗಳ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕ್ಕಾಗಿ ಮನವಿ ಮಾಡಿದ ನಂತರ ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ದಾಳಿಯನ್ನು ಆರಂಭಿಸಿತು.

ತನ್ನ ವಿಶೇಷ ಕಾರ್ಯಾಚರಣೆಯ ಗುರಿಯು ಉಕ್ರೇನ್ ಅನ್ನು ನಿಶಸ್ತ್ರೀಕರಣಗೊಳಿಸುವುದಾಗಿದೆ. ಅಲ್ಲಿನ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗುತ್ತದೆ. ಅಲ್ಲಿನ ನಾಗರಿಕರ ಮೇಲೆ ದಾಳಿ ಮಾಡುವುದಿಲ್ಲ ಎಂದು ರಷ್ಯಾ ಹೇಳಿತ್ತು. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಮಾಸ್ಕೋ ಪದೇ ಪದೇ ಒತ್ತಿಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಾರ, ಕಳೆದ ಎಂಟು ವರ್ಷಗಳ ಕೀವ್ ಆಡಳಿತದಿಂದ ನಿಂದನೆ, ನರಮೇಧಕ್ಕೆ ಒಳಗಾದ ಡಾನ್ಬಾಸ್ ಜನರನ್ನು ರಕ್ಷಿಸುವುದು ಗುರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ತೀವ್ರವಾಗಿ ಖಂಡಿಸಿವೆ. ರಷ್ಯಾ ಮೇಲೆ ಭಾರೀ ನಿರ್ಬಂಧಗಳನ್ನು ವಿಧಿಸಿವೆ.

(ಒನ್ಇಂಡಿಯಾ ಸುದ್ದಿ)

English summary
President Vladimir Putin visited injured Russian soldiers and a video of it was posted on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X