• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್ಥಿಕ ನಿರ್ಬಂಧದಿಂದ ಪಾರಾಗಲು ಕ್ರಿಪ್ಟೋ ಕಾನೂನುಬದ್ಧಗೊಳಿಸುತ್ತಾರಾ ಪುಟಿನ್‌?

|
Google Oneindia Kannada News

ಮಾಸ್ಕೋ, ಫೆಬ್ರವರಿ 25: ರಷ್ಯಾವು ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದಂತೆ, ಮಾಸ್ಕೋದ ಮೇಲೆ ಹಲವಾರು ರಾಷ್ಟ್ರಗಳು ನಿರ್ಬಂಧವನ್ನು ಹೇರಲು ಮುಂದಾಗಿದೆ. ಈ ನಿರ್ಣಾಯಕ ಹಂತದಲ್ಲಿ, ಕ್ರಿಪ್ಟೋ ಕರೆನ್ಸಿಗಳು ಅಥವಾ ಡಿಜಿಟಲ್ ಕರೆನ್ಸಿಗಳು ನಿರ್ಬಂಧಗಳಿಂದ ದೂರವಿರಲು ಅಥವಾ ಆರ್ಥಿಕ ನಿರ್ಬಂಧಗಳಿಂದ ಪಾರಾಗಲು ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಧಾರ ಮಾಡಬಹುದು ಎಂದು ಸುದ್ದಿ ಆಗುತ್ತಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಪೂರ್ವ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಅಧಿಕೃತವಾಗಿ ಆರಂಭ ಮಾಡಿದ್ದಾರೆ. ಈ ಬೆನ್ನಲ್ಲೇ ಈ ವಾರದ ಆರಂಭದಲ್ಲಿ ವಿಧಿಸಲಾದ ಹಣಕಾಸಿನ ಕ್ರಮಗಳ ಜೊತೆಗೆ ಗುರುವಾರ ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಘೋಷಿಸಲಾಗುವುದು ಎಂದು ಹೇಳುವ ಮೂಲಕ ಯುಎಸ್ ಅಧ್ಯಕ್ಷ ಜೋ ಬೈಡೆನ್‌ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ನಮ್ಮ ಸೇನೆ ಸಂಘರ್ಷಕ್ಕೆ ಇಳಿಯಲ್ಲ: ಜೋ ಬೈಡೆನ್‌ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ನಮ್ಮ ಸೇನೆ ಸಂಘರ್ಷಕ್ಕೆ ಇಳಿಯಲ್ಲ: ಜೋ ಬೈಡೆನ್‌

ಇತರ ದೇಶಗಳ ಮೇಲೆ ಪ್ರಭಾವ ಬೀರಲು ನಿರ್ಬಂಧಗಳನ್ನು ಅತ್ಯಂತ ಪ್ರಬಲವಾದ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಈ ಯುದ್ಧವನ್ನು ಖಂಡನೆ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಷ್ಯಾ ವಿರುದ್ಧ ನಿರ್ಬಂಧ, ರಫ್ತು ನಿಯಂತ್ರಣ ಘೋಷಿಸಿದ್ದಾರೆ. ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಲಿದೆ ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಿಪ್ಟೋ ಕಾನೂನುಬದ್ಧಗೊಳಿಸುತ್ತಾರಾ ಎಂಬ ಅನುಮಾನಗಳು ಮೂಡುತ್ತಿದೆ.

ಆರ್ಥಿಕ ನಿರ್ಬಂಧದಿಂದ ಪಾರಾಗಲು ರಷ್ಯಾ ಕ್ರಿಪ್ಟೋಕರೆನ್ಸಿಯನ್ನು ಬಳಸುವ ಸಾಧ್ಯತೆ

ಆರ್ಥಿಕ ನಿರ್ಬಂಧದಿಂದ ಪಾರಾಗಲು ರಷ್ಯಾ ಕ್ರಿಪ್ಟೋಕರೆನ್ಸಿಯನ್ನು ಬಳಸುವ ಸಾಧ್ಯತೆ. ಇದು ಡಿಜಿಟಲ್ ಕರೆನ್ಸಿಗಳ ಮೂಲಕ ಜಾಗತಿಕವಾಗಿ ಕೆಲಸ ಮಾಡುವ ಯಾರೊಂದಿಗಾದರೂ ಒಪ್ಪಂದಗಳನ್ನು ಮಾಡಿಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ. ಕ್ರೇಮಿಯಾವನ್ನು ರಷ್ಯಾವು 2014ರಲ್ಲಿ ಆಕ್ರಮಣ ಮಾಡಿದ ಬಳಿಕ ರಷ್ಯಾದ ಬ್ಯಾಂಕುಗಳು, ತೈಲ ಮತ್ತು ಅನಿಲ ಮಧ್ಯಸ್ಥರೊಂದಿಗೆ ವ್ಯಾಪಾರ ಮಾಡಲು ಯುಎಸ್‌ ನಿರ್ಬಂಧವನ್ನು ವಿಧಿಸಿತ್ತು. ಆಗ, ರಷ್ಯಾದ ಆರ್ಥಿಕತೆಯು ನಿರ್ಬಂಧಗಳಿಂದ ಭಾರೀ ಪೆಟ್ಟು ತಿಂದಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಅನ್ನು ಉಲ್ಲೇಖಿಸಿ ಬಿಸಿನೆಸ್ ಟುಡೇ ವರದಿ ಮಾಡಿದೆ.

ಕ್ರಿಪ್ಟೋಕರೆನ್ಸಿಯನ್ನೇ ಯಾಕೆ ಬಳಸಲಾಗುತ್ತದೆ?

ಈ ಹಿಂದೆ 2014ರಲ್ಲಿ ರಷ್ಯಾವು ಕ್ರೇಮಿಯಾಕ್ಕೆ ಆಕ್ರಮಣ ಮಾಡಿದಾಗ ಯುಎಸ್‌ ಹೇರಿದ ನಿರ್ಬಂಧದಿಂದಾಗಿ ಉಂಟಾದ ಆರ್ಥಿಕ ಹೊಡೆತದಿಂದ ಹೊರಬರಲು ರಷ್ಯಾ ಸಾಕಷ್ಟು ಸಮಯವನ್ನು ತೆಗೆದುಕೊಂಡಿತ್ತು. ಆದ್ದರಿಂದಾಗಿ ಈ ಸಂದರ್ಭದಲ್ಲಿ ರಷ್ಯಾ ಮೊದಲೇ ಯೋಜನೆ ರೂಪಿಸಿರಬೇಕು ಎಂದು ಮಾಜಿ ಫೆಡರಲ್ ಪ್ರಾಸಿಕ್ಯೂಟರ್ ಮೈಕೆಲ್ ಪಾರ್ಕರ್ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದರು.

ಕೆವೈಸಿ ಮಾನದಂಡಗಳನ್ನು ಅನುಸರಿಸುವ ಮೂಲಕ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಗುರುತನ್ನು ಪರಿಶೀಲಿಸುತ್ತವೆ. ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ತಮ್ಮ ಗ್ರಾಹಕರನ್ನು ಟ್ರ್ಯಾಕ್ ಮಾಡಲು ಅದೇ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುವುದಿಲ್ಲ. ತಜ್ಞರ ಪ್ರಕಾರ, ರಷ್ಯಾ ತನ್ನ ವಿಲೇವಾರಿಯಲ್ಲಿ ಅನೇಕ ಕ್ರಿಪ್ಟೋಕರೆನ್ಸಿ ಸಂಬಂಧಿತ ಸಾಧನಗಳನ್ನು ಹೊಂದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ.

ರಷ್ಯಾದ ಸರ್ಕಾರವು ತನ್ನದೇ ಆದ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ರಚಿಸಲು ಪ್ರಾರಂಭಿಸಿದೆ. ಸೆಂಟ್ರಲ್ ಬ್ಯಾಂಕಿನ ಡಿಜಿಟಲ್ ಕರೆನ್ಸಿಯನ್ನು ಡಾಲರ್‌ಗಳಾಗಿ ಪರಿವರ್ತಿಸದೆ ಅದನ್ನು ಸ್ವೀಕರಿಸಲು ಸಿದ್ಧರಿರುವ ದೇಶಗಳೊಂದಿಗೆ ವ್ಯಾಪಾರ ಮಾಡಲು ಬಳಸಬಹುದು. ರಷ್ಯಾದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿರುವ ಚೀನಾ ಈಗಾಗಲೇ ತನ್ನದೇ ಆದ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ರಚಿಸಿದೆ.

ಎಲ್ಲಾ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಬ್ಲಾಕ್‌ಚೈನ್‌ನಲ್ಲಿ ದಾಖಲಿಸಲಾಗಿದ್ದರೂ, ಅಂತಹ ವಹಿವಾಟುಗಳ ಮೂಲವನ್ನು ಮರೆಮಾಚುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಸಾಧನಗಳನ್ನು ರಷ್ಯಾ ಅಭಿವೃದ್ಧಿಪಡಿಸಿದೆ ಎಂದು ವರದಿ ಹೇಳುತ್ತದೆ. ಹೈಡ್ರಾ ಎಂಬ ಡಾರ್ಕ್ ವೆಬ್ ಮಾರುಕಟ್ಟೆಯ ಮೂಲಕ ಅಕ್ರಮ ನಿಧಿಗಳು ಈಗಾಗಲೇ ರಷ್ಯಾಕ್ಕೆ ಹರಿದುಬಂದಿವೆ. ವಹಿವಾಟಿನ ಮೂಲವನ್ನು ಮರೆಮಾಚಲು ಹೈಡ್ರಾ ಮತ್ತು ಇತರ ಮನಿ ಲಾಂಡರಿಂಗ್ ತಂತ್ರಜ್ಞಾನವನ್ನು ರಷ್ಯಾ ಹೊಂದಿದೆ ಎಂದು ವರದಿ ಹೇಳಿದೆ.

ಇತ್ತೀಚಿನ ಸರ್ಕಾರಿ ಪತ್ರಿಕೆಯ ಪ್ರಕಾರ, ಲಕ್ಷಾಂತರ ರಷ್ಯನ್ನರು 2 ಟ್ರಿಲಿಯನ್ ರೂಬಲ್ಸ್ ($22.9 ಶತಕೋಟಿ) ಮೌಲ್ಯದ ಕ್ರಿಪ್ಟೋಕರೆನ್ಸಿಗಳನ್ನು ಹೊಂದಿದ್ದಾರೆ. ಮತ್ತೊಂದು ಮಾಧ್ಯಮ ವರದಿಯು 17 ಮಿಲಿಯನ್ ರಷ್ಯನ್ನರು, ಒಟ್ಟು ಜನಸಂಖ್ಯೆಯ 12 ಪ್ರತಿಶತದಷ್ಟು ಜನರು ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ ಎಂದು ಹೇಳಿದೆ.

ಯುದ್ಧದ ಬಳಿಕ ಬಿಟ್‌ಕಾಯಿನ್ ಶೇಕಡಾ 7.9 ರಷ್ಟು ಕುಸಿದು 34,324 ಡಾಲರ್‌ಗೆ ಇಳಿದಿದೆ. ಇದು ಜನವರಿ 24ಕ್ಕಿಂತ ಕಡಿಮೆಯಾಗಿದೆ. ಕೊನೆಯ ವಹಿವಾಟು ಶೇಕಡಾ 4.5 ರಷ್ಟು ಕಡಿಮೆಯಾಗಿದೆ. ಬಿಟ್‌ಕಾಯಿನ್‌ ಜೊತೆ ಸಾಮಾನ್ಯವಾಗಿ ವಹಿವಾಟು ನಡೆಸುವ ಕೆಲವು ನಾಣ್ಯಗಳು ಕೂಡಾ ಕುಸಿತ ಕಂಡಿದೆ. ಎಥೇರಿಯಮ್‌ ಶೇಕಡ ಶೇಕಡಾ 10.8 ರಷ್ಟು ಪಾತಾಳಕ್ಕೆ ಇಳಿದಿದೆ. ರಷ್ಯಾದ ಆಕ್ರಮಣದ ಒಂದು ದಿನದ ನಂತರ, CoinMarketCap ಪ್ರಕಾರ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ (ಕ್ಯಾಪಿಟಲ್‌ ಮೌಲ್ಯ) 1.71 ಟ್ರಿಲಿಯನ್ ಡಾಲರ್‌ ಆಗಿದೆ. ಇದು ನಿನ್ನೆಗಿಂತ 7.67 ಶೇಕಡಾ ಹೆಚ್ಚಳವಾಗಿದೆ.

   ಸ್ವಾತಂತ್ರ್ಯ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಮಾಡಲು ರೆಡಿಯಾದ ಉಕ್ರೇನ್ ಅಧ್ಯಕ್ಷ | Oneindia Kannada
   English summary
   Ukraine-Russia War: Bitcoin aiding Russia escape financial sanctions, Putin considering to legalise cryptocurrency.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X