ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ಉಕ್ರೇನ್‌ನಲ್ಲಿ ಯಶಸ್ವಿಯಾದರೆ, ತೈವಾನ್‌ ಮುಂದಿನ ಟಾರ್ಗೆಟ್‌: ಕ್ಯಾಸ್ಪರೋವ್

|
Google Oneindia Kannada News

ಮಾಸ್ಕೋ, ಫೆಬ್ರವರಿ 27: ಉಕ್ರೇನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯಶಸ್ವಿಯಾದರೆ, ತೈವಾನ್ ನಂತರದ ಟಾರ್ಗೆಟ್‌ ಆಗಿದೆ ಎಂದು ರಷ್ಯಾದ ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಖ್ಯಾತ ಚೆಸ್‌ ಆಟಗಾರ ಗ್ಯಾರಿ ಕ್ಯಾಸ್ಪರೋವ್ ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ಇತ್ತೀಚೆಗೆ ಖಂಡನೆ ಮಾಡಿದ್ದರು.

ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಚೆಸ್‌ ಆಟಗಾರ ಗ್ಯಾರಿ ಕ್ಯಾಸ್ಪರೋವ್, "2007 ರಲ್ಲಿ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಅವರು [ಪುಟಿನ್] ಪ್ರಭಾವದ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದರು. ಸಣ್ಣ ದೇಶಗಳು ದೊಡ್ಡ ದೇಶಗಳು ಹೇಳಿದಂತೆ ವರ್ತಿಸಬೇಕು, ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಬಯಸಿದ್ದಾರೆ," ಎಂದು ತಿಳಿಸಿದ್ದಾರೆ.

 ರಷ್ಯಾ ಅಧ್ಯಕ್ಷ ಪುಟಿನ್‌ ಸಂಪತ್ತು ಎಷ್ಟಿದೆ? ರಷ್ಯಾ ಅಧ್ಯಕ್ಷ ಪುಟಿನ್‌ ಸಂಪತ್ತು ಎಷ್ಟಿದೆ?

58 ವರ್ಷದ ಮಾಜಿ ವಿಶ್ವ ಚೆಸ್ ಚಾಂಪಿಯನ್, "ಯೋಜನೆಯಂತೆ ಎರಡು ಅಥವಾ ಮೂರು ದಿನಗಳಲ್ಲಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾ ವಿಫಲವಾಗಿದೆ. ಉಕ್ರೇನಿಯನ್ನರ ವೀರರ ಕಾರ್ಯವು ಅಜೇಯ ನಾಯಕನಾಗಿ ಪುಟಿನ್‌ಗೆ ಇಮೇಜ್‌ಗೆ ಹಾನಿ ಉಂಟು ಮಾಡಿದೆ," ಎಂದು ಹೇಳಿದರು.

Ukraine-Russia War: If Putin Succeeds in Ukraine, Taiwan Is Next Says Garry Kasparov

"ಇಂದಿನ ಯುರೋಪಿನ ಸಮಸ್ಯೆಯೆಂದರೆ ಜರ್ಮನಿ, ಯುಕೆ, ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿನ ಅನೇಕ ರಾಜಕಾರಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಪುಟಿನ್‌ ವ್ಯಾಪಾರ ಹಿತಾಸಕ್ತಿಗೆ ತಕ್ಕುದಾಗಿ ಇರುವುದು ಆಗಿದೆ. ಉಕ್ರೇನ್‌ಗಾಗಿ ಅವರ [ಪುಟಿನ್‌ರ] ಯೋಜನೆಗಳನ್ನು ಗುರುತಿಸದಿರುವುದು ಸಂಪೂರ್ಣವಾಗಿ ಮೂರ್ಖತನವಾಗಿದೆ. ಪುಟಿನ್‌ ಉಕ್ರೇನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಎಂದಿಗೂ ಗುರುತಿಸಲಿಲ್ಲ ಮತ್ತು ಹಲವು ವರ್ಷಗಳಿಂದ ರಷ್ಯಾವು ಉಕ್ರೇನ್ ಅಸ್ತಿತ್ವವನ್ನು ನಿರಾಕರಿಸುತ್ತಿದೆ," ಎಂದು ತಿಳಿಸಿದರು.

 ಆರ್ಥಿಕ ನಿರ್ಬಂಧದಿಂದ ಪಾರಾಗಲು ಕ್ರಿಪ್ಟೋ ಕಾನೂನುಬದ್ಧಗೊಳಿಸುತ್ತಾರಾ ಪುಟಿನ್‌? ಆರ್ಥಿಕ ನಿರ್ಬಂಧದಿಂದ ಪಾರಾಗಲು ಕ್ರಿಪ್ಟೋ ಕಾನೂನುಬದ್ಧಗೊಳಿಸುತ್ತಾರಾ ಪುಟಿನ್‌?

ಸುಳ್ಳು ಹೇಳುವ ದಾಖಲೆ ಹೊಂದಿರುವ ಪುಟಿನ್‌!

"ಪುಟಿನ್ ಅವರ ಪಾತ್ರದ ವಿಶಿಷ್ಟ ಲಕ್ಷಣವೆಂದರೆ ಸುಳ್ಳು. ಅವರು ಸುಳ್ಳು ಹೇಳುವ ಸುದೀರ್ಘ ದಾಖಲೆಯನ್ನು ಹೊಂದಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಹಿಂದಕ್ಕೆ ಮತ್ತು ಮುಂದಕ್ಕೆ ತಮ್ಮ ಅನುಕೂಲಕ್ಕೆ ತಿರುಗಿಸುತ್ತಾರೆ. ಇದು ಯುರೋಪಿನ ಸ್ವಂತ ಯುದ್ಧವಾಗಿದೆ. ಯುರೋಪ್‌ ಪುಟಿನ್ ಅವರು ಅಜೇಯ ಎಂದು ನಂಬುವ ಮಟ್ಟಕ್ಕೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಮತ್ತು ಉಕ್ರೇನ್ ಮೇಲೆ ದಾಳಿ ಮಾಡಲು ಧೈರ್ಯ ತುಂಬಿದ್ದಾರೆ," ಎಂದು ಟೀಕೆ ಮಾಡಿದ್ದಾರೆ. . "ಇದು ಜಾಗತಿಕ ಭದ್ರತಾ ಮೂಲಸೌಕರ್ಯಕ್ಕೆ ಸಂಬಂಧಿಸಿದೆ. ಪುಟಿನ್ ಯಶಸ್ವಿಯಾದರೆ, ಮುಂದಿನ ಗುರಿ ಚೀನಾ-ತೈವಾನ್ ಆಗಲಿದೆ," ಎಂದಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೆಸ್‌ ಆಟಗಾರ ಗ್ಯಾರಿ ಕ್ಯಾಸ್ಪರೋವ್, "ನಾನು ಈ ಯುದ್ಧವನ್ನು ರಷ್ಯಾ ಮತ್ತು ಎಲ್ಲಾ ರಷ್ಯನ್ನರಿಗೆ ಅವಮಾನವೆಂದು ಪರಿಗಣಿಸುತ್ತೇನೆ. ಅಡಾಲ್ಫ್ ಹಿಟ್ಲರ್ ಅಥವಾ ಮುಸೊಲಿನಿ ಅಥವಾ ಸ್ಟಾಲಿನ್ ಆಯಾ ಹಿತಾಸಕ್ತಿಯಿಂದ ವರ್ತಿಸಿದರು. ಇದೂ ಕೂಡಾ ಅದೇ ರೀತಿಯಾಗಿದೆ," ಎಂದು ತಿಳಿಸಿದರು.

ರಷ್ಯಾದಲ್ಲಿ ಯುದ್ಧ ವಿರೋಧಿ ಕೂಗು

ಉಕ್ರೇನ್‌ ಮೇಲೆ ಮಾಡಿದ ಆಕ್ರಮಣಕ್ಕೆ ರಷ್ಯಾದ ಜನರ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೆಸ್‌ ಆಟಗಾರ ಗ್ಯಾರಿ ಕ್ಯಾಸ್ಪರೊವ್, "ಕಳೆದ 72 ಗಂಟೆಗಳಲ್ಲಿ ರಷ್ಯಾದಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನೆ ಮಾಡಿದ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪುಟಿನ್ ಆಳ್ವಿಕೆಯಲ್ಲಿ ರಷ್ಯಾದ ಬೀದಿಗಳಲ್ಲಿ ಪ್ರತಿಭಟನೆ ಮಾಡುವುದು ಹೆಚ್ಚಾಗಿದೆ. ಬಂಧಿಸಲ್ಪಟ್ಟವರಲ್ಲಿ ಅನೇಕರು ವರ್ಷಾನುಗಟ್ಟಲೆ ಜೈಲಿನಲ್ಲಿರಬಹುದು. ಆದರೆ ನೀವು ರಷ್ಯಾದಲ್ಲಿ ಯುದ್ಧ ವಿರೋಧ ಕೂಗು ಕಾಣಬಹುದು," ಎಂದಿದ್ದಾರೆ. ಈ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬೆಂಬಲಿಸಿದವರು ಸಹ ಈಗ ಅವರ ಕ್ರಮಗಳನ್ನು ವಿರೋಧಿಸಿ ಅರ್ಜಿಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಮಾಜಿ ವಿಶ್ವ ಚೆಸ್ ಚಾಂಪಿಯನ್ ಹೇಳಿದರು. (ಒನ್‌ಇಂಡಿಯಾ ಸುದ್ದಿ)

Recommended Video

ಏನಿದು!!ಟ್ರೋಫಿಯನ್ನು ಟೀಂಗೆ ಕೊಡದೆ ರೋಹಿತ್ ಹಿಂಗ್ಯಾಕ್ ಮಾಡಿದ್ರು | Oneindia Kannada

English summary
Ukraine-Russia War: If Putin succeeds in Ukraine, Taiwan is next Says Russian Chess grandmaster Garry Kasparov.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X