ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದ ಮಾಧ್ಯಮದ ಮೇಲೆ ಗೂಗಲ್, ಯೂಟ್ಯೂಬ್ ನಿರ್ಬಂಧ

|
Google Oneindia Kannada News

ಮಾಸ್ಕೋ, ಫೆಬ್ರವರಿ 27: ರಷ್ಯಾ-ಉಕ್ರೇನ್ ಸಂಘರ್ಷದ ಮಧ್ಯೆ, ಅಮೇರಿಕನ್ ಆನ್‌ಲೈನ್ ವೀಡಿಯೊ ಹಂಚಿಕೆ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್ ರಷ್ಯಾದ ಮಾಧ್ಯಮ ಆರ್‌ಟಿ ಮತ್ತು ಉಕ್ರೇನ್‌ನಲ್ಲಿರುವ ಇತರ ರಷ್ಯಾದ ಚಾನೆಲ್‌ಗಳನ್ನು ನಿರ್ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಗೂಗಲ್‌ ಕೂಡಾ ಇದುವೇ ಕ್ರಮವನ್ನು ಕೈಗೊಂಡಿದೆ ಎಂದು ವರದಿ ಉಲ್ಲೇಖ ಮಾಡಿದೆ.

ಶನಿವಾರ (ಫೆಬ್ರವರಿ 26) ಜಾಗತಿಕವಾಗಿ ಈ ಕಾರ್ಯವನ್ನು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ರಷ್ಯಾವು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ವಿಧಿಸಲಾದ ಇತ್ತೀಚಿನ ನಿರ್ಬಂಧಗಳ ವ್ಯಾಪ್ತಿಯಲ್ಲಿ ರಷ್ಯಾದ ಚಾನೆಲ್‌ಗಳ ಮೇಲಿನ ನಿರ್ಬಂಧವು ಕೂಡಾ ಸೇರ್ಪಡೆ ಆಗಿದೆ.

 ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ ರಷ್ಯಾದ ವಿರುದ್ಧ ಸೈಬರ್‌ ದಾಳಿ ಘೋಷಣೆ: ರಾಷ್ಟ್ರದ ಸುದ್ದಿ ವೆಬ್‌ಸೈಟ್‌ ನಿಷ್ಕ್ರಿಯ

ರಷ್ಯಾವು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭ ಮಾಡಿದ ಬಳಿಕ ವಿಧಿಸಲಾದ ಇತ್ತೀಚಿನ ನಿರ್ಬಂಧಗಳ ಹಿನ್ನೆಲೆ ಹಲವಾರು ರಷ್ಯಾದ ಚಾನೆಲ್‌ಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಯೂಟ್ಯೂಬ್ ವಕ್ತಾರ ಐವಿ ಚೋಯ್ಸಿಟಿಂಗ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಮಾಹಿತಿ ನೀಡಿದೆ.

Ukraine-Russia War: Google, YouTube impose restrictions on Russian media

"ನಾವು ಈ ಚಾನಲ್‌ಗಳಿಗೆ ಶಿಫಾರಸುಗಳನ್ನು ಗಮನಾರ್ಹವಾಗಿ ಮಿತಿಗೊಳಿಸುತ್ತೇವೆ. ನೀತಿಗಳನ್ನು ಉಲ್ಲಂಘಿಸುವ ಚಾನಲ್‌ಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಲಾಗಿದೆ," ಎಂದು ಯೂಟ್ಯೂಬ್ ಮಾಹಿತಿ ನೀಡಿದೆ. ಏತನ್ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತಿನಿಂದ ಹಣಗಳಿಸವ ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮವನ್ನು ಗೂಗಲ್‌ ನಿರ್ಬಂಧಿಸಿದೆ ಎಂದು ವರದಿ ಹೇಳಿದೆ.

ಮೆಟಾ (ಫೇಸ್‌ಬುಕ್‌) ನಿರ್ಬಂಧ

ಭಾನುವಾರ ರಾಯಿಟರ್ಸ್ ವರದಿ ಮಾಡಿದ ಪ್ರಕಾರ ಜಾಹೀರಾತುಗಳನ್ನು ನೀಡುವುದು ಮತ್ತು ಜಿಮೇಲ್‌ ಅನ್ನು ಬಳಸುವುದನ್ನು ಒಳಗೊಂಡಂತೆ ರಷ್ಯಾದ ಆರ್‌ಟಿ ಚಾನಲ್, ಹಾಗೆಯೇ ಇತರ ರಷ್ಯಾದ ರಾಷ್ಟ್ರೀಯ ಮಾಧ್ಯಮಗಳಿಗೂ ಗೂಗಲ್, ಯೂಟ್ಯೂಬ್ ಸೇವೆಗಳಲ್ಲಿ ಜಾಹೀರಾತು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಶುಕ್ರವಾರ, ಮೆಟಾ (ಹಿಂದೆ ಫೇಸ್‌ಬುಕ್ ಎಂದು ಕರೆಯಲಾಗುತ್ತಿತ್ತು) ಜಾಹೀರಾತುಗಳನ್ನು ಚಲಾಯಿಸುವ ಮತ್ತು ಮೆಟಾದ ಪ್ಲಾಟ್‌ಫಾರ್ಮ್‌ನಲ್ಲಿ ಹಣಗಳಿಸುವ ರಷ್ಯಾದ ರಾಷ್ಟ್ರೀಯ ಮಾಧ್ಯಮದ ಸಾಮರ್ಥ್ಯವನ್ನು ನಿರ್ಬಂಧಿಸುತ್ತಿದೆ ಎಂದು ಹೇಳಿದೆ.

ಉಕ್ರೇನ್ ಮೇಲೆ ರಷ್ಯಾ ಸೈಬರ್ ದಾಳಿ, ಇಂಟರ್ನೆಟ್ ಸಂಪರ್ಕ ಕಡಿತಉಕ್ರೇನ್ ಮೇಲೆ ರಷ್ಯಾ ಸೈಬರ್ ದಾಳಿ, ಇಂಟರ್ನೆಟ್ ಸಂಪರ್ಕ ಕಡಿತ

ಉಕ್ರೇನ್‌ನಲ್ಲಿನ ಅಸಾಧಾರಣ ಸನ್ನಿವೇಶಗಳ ಹಿನ್ನೆಲೆ ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಗೂಗಲ್ ಅಂಗಸಂಸ್ಥೆಯ ವಕ್ತಾರರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಮ್ಮ ತಂಡಗಳು ಜಾಗತಿಕವಾಗಿ ಆರ್‌ಟಿಯ ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಯೂಟ್ಯೂಬ್‌ ನಲ್ಲಿ ಹಣಗಳಿಸುವ ಕೆಲವು ಚಾನಲ್‌ಗಳ ಸಾಮರ್ಥ್ಯವನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದಾರೆ," ಎಂದು ರಷ್ಯಾದ ಮಾಧ್ಯಮಗಳನ್ನು ಉಲ್ಲೇಖ ಮಾಡಿ ಹೇಳಿದ್ದಾರೆ.

ಅನಾಮಧೇಯರಿಂದ ಸೈಬರ್‌ ದಾಳಿ ಘೋಷಣೆ

ರಷ್ಯಾ ದೇಶವು ಉಕ್ರೇನ್‌ ಮೇಲೆ ಸಮರ ಸಾರಿ, ಉಕ್ರೇನ್‌ ಮೇಲೆ ದಾಳಿ ನಡೆಸುತ್ತಲಿದೆ. ಈ ನಡುವೆ ಅನಾಮಧೇಯ ಹ್ಯಾಕರ್‌ಗಳು ರಷ್ಯಾದ ಮೇಲೆ ಸೈಬರ್‌ ದಾಳಿ ಘೋಷಣೆ ಮಾಡಿದೆ. ರಾಷ್ಟ್ರ-ನಿಯಂತ್ರಿತ ರಷ್ಯಾ ಟುಡೆ ಸುದ್ದಿ ಸೇವೆ ಸೇರಿದಂತೆ ಹಲವಾರು ರಷ್ಯಾದ ಸರ್ಕಾರಿ ವೆಬ್‌ಸೈಟ್‌ಗಳನ್ನು ನಿಷ್ಕ್ರಿಯಗೊಳಿಸಿದೆ.

Recommended Video

ಸ್ವಾತಂತ್ರ್ಯ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಮಾಡಲು ರೆಡಿಯಾದ ಉಕ್ರೇನ್ ಅಧ್ಯಕ್ಷ | Oneindia Kannada

ಅನಾಮಧೇಯ ಹ್ಯಾಕರ್‌ಗಳು( Anonymous (@YourAnonOne) ) ಸೈಬರ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ್ದು, ಬಳಿಕ RT.co, ಜೊತೆಗೆ ಕ್ರೆಮ್ಲಿನ್, ರಷ್ಯಾದ ಸರ್ಕಾರ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ. RT.com ಮೇಲೆ ಸೈಬರ್‌ ದಾಳಿ ನಡೆದಿದೆ ಎಂದು ದೃಢಪಡಿಸಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ RT.com ಸುದ್ದಿ ಪ್ರಕಟ ಮಾಡುತ್ತಿತ್ತು. ಈ ವೆಬ್‌ಸೈಟ್‌ ರಷ್ಯಾದ ಪರ ದೃಷ್ಟಿಕೋನದಿಂದ ಸುದ್ದಿಯನ್ನು ಪ್ರಕಟ ಮಾಡುತ್ತಿದ್ದವು ಎಂದು ವರದಿಗಳು ಹೇಳಿದೆ. ಇನ್ನು ರಷ್ಯಾ ಆಕ್ರಮಿತ ಪ್ರದೇಶದಲ್ಲಿ ಜನರು ಸಂತಸದಿಂದ ಪಟಾಕಿ ಸಿಡಿಸಿದ್ದಾರೆ ಹಾಗೂ ಹರ್ಷದಿಂದ ಆಚರಣೆ ಮಾಡಿದ್ದಾರೆ ಎಂದು ಈ ವೆಬ್‌ಸೈಟ್‌ ಸುದ್ದಿ ಪ್ರಕಟ ಮಾಡಲಾಗಿತ್ತು. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Google, YouTube impose restrictions on Russian media amid Ukraine crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X