ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ ಗಡಿ ಸಮೀಪದ ರಷ್ಯಾದ ನಗರದಲ್ಲಿ ಸ್ಪೋಟ

|
Google Oneindia Kannada News

ಮಾಸ್ಕೋ, ಏಪ್ರಿಲ್‌ 03: ರಷ್ಯಾವು ಉಕ್ರೇನ್‌ ಮೇಲೆ ದಾಳಿ ಮಾಡಿ ಹಲವಾರು ಪ್ರದೇಶಗಳಲ್ಲಿ ಭಾರೀ ಹಾನಿಯನ್ನು ಉಂಟು ಮಾಡಿದೆ. ಈ ನಡುವೆ ಉಕ್ರೇನ್‌ನ ಗಡಿ ಭಾಗದಲ್ಲಿರುವ ರಷ್ಯಾದ ನಗರಗಳಲ್ಲಿ ಉಕ್ರೇನ್‌ ದಾಳಿಯ ಆರೋಪಗಳು ಕೇಳಿ ಬಂದಿದೆ. ಉಕ್ರೇನ್ ಗಡಿಯ ಸಮೀಪದಲ್ಲಿರುವ ರಷ್ಯಾದ ಬೆಲ್ಗೊರೊಡ್ ನಗರದಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ವರದಿ ಹೇಳಿದೆ.

ಶುಕ್ರವಾರ ಮುಂಜಾನೆ ಅತ್ಯಂತ ಕಡಿಮೆ ಎತ್ತರದಲ್ಲಿ ರಷ್ಯಾವನ್ನು ಪ್ರವೇಶಿಸಿದ ಎರಡು ಉಕ್ರೇನಿಯನ್ ಹೆಲಿಕಾಪ್ಟರ್‌ಗಳು ಉಕ್ರೇನ್ ಗಡಿಯಿಂದ ಸುಮಾರು 35 ಕಿಮೀ (22 ಮೈಲುಗಳು) ನಗರದ ಇಂಧನ ಡಿಪೋವನ್ನು ನಾಶ ಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಆರೋಪ ಮಾಡಿದೆ. ಇದಾದ ಎರಡು ದಿನದಲ್ಲೇ ರಷ್ಯಾದ ನಗರದಲ್ಲಿ ಸ್ಫೋಟದ ಸದ್ದುಗಳು ಕೇಳಿಬಂದಿದೆ.

ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ

ಉಕ್ರೇನ್‌ ಕೂಡಾ ರಷ್ಯಾದಲ್ಲಿ ದಾಳಿ ಮಾಡುತ್ತಿದೆ. ಇದರಿಂದಾಗಿ ಉಕ್ರೇನ್‌ ಹಾಗೂ ರಷ್ಯಾದ ನಡುವಿನ ಶಾಂತಿ ಪ್ರಯತ್ನಗಳನ್ನು ಹಾಳಾಗಬಹುದು ಎಂದು ಕ್ರೆಮ್ಲಿನ್‌ ಹೇಳಿದೆ. ಆದರೆ ಉಕ್ರೇನ್‌ ಅಧಿಕಾರಿಗಳು ಮಾತ್ರ ದಾಳಿಯು ಉಕ್ರೇನ್‌ ಮಾಡಿದೆ ಎಂಬುವುದನ್ನು ನಿರಾಕರಿಸಿದ್ದಾರೆ.

Ukraine-Russia War: Blasts Heard in Russian City of Belgorod Near Border With Ukraine

ಟೊಮರೊವ್ಕಾ ಗ್ರಾಮದಲ್ಲಿ ಭಾನುವಾರ ಸ್ಫೋಟ

ಟೊಮರೊವ್ಕಾ ಗ್ರಾಮದಲ್ಲಿ ಭಾನುವಾರ ಸ್ಫೋಟ ಸಂಭವಿಸಿದೆ. ಆದರೆ ಯಾರಿಗೂ ಗಾಯವಾಗಿಲ್ಲ ಮತ್ತು ಯಾವುದೇ ಆಸ್ತಿ ಹಾನಿಯಾಗಿಲ್ಲ ಎಂದು ಬೆಲ್ಗೊರೊಡ್ ಸುತ್ತಮುತ್ತಲಿನ ಪ್ರದೇಶದ ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಒಂದು ಬ್ಯಾಂಗ್ ಇತ್ತು, ಬಳಿಕ ಸ್ಪೋಟಿಸಿತು," ಎಂದು ಬೆಲ್ಗೊರೊಡ್‌ನ ಹೊರಗಿನ ಯಾಕೋವ್ಲೆವ್ಸ್ಕಿ ನಗರ ಜಿಲ್ಲೆಯ ಮುಖ್ಯಸ್ಥ ಒಲೆಗ್ ಮೆಡ್ವೆಡೆವ್ ಟೆಲಿಗ್ರಾಮ್ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ಬರೆದಿದ್ದಾರೆ. ಸ್ಪೋಟದ ಪರಿಣಾಮ ಅಥವಾ ಸ್ಫೋಟದ ಕಾರಣವನ್ನು ಅವರು ವಿವರಿಸಲಿಲ್ಲ. ಮೆಡ್ವೆಡೆವ್ ವಿವರಿಸಿದ ಸ್ಫೋಟವು ಹಾಗೂ ಕೆಲವು ಸಾಕ್ಷಿಗಳು ಕೇಳಿದ ಸ್ಫೋಟಗಳ ಸದ್ದು ಒಂದೆಯೇ ಎಂಬುವುದು ಕೂಡಾ ಸ್ಪಷ್ಟವಾಗಿಲ್ಲ.

ಉಕ್ರೇನ್ನಿಯರು ಅನುಭವ ಇಲ್ಲದವರಲ್ಲ: ರಷ್ಯಾಕ್ಕೆ ಝೆಲೆನ್ಸ್ಕಿ ತಿರುಗೇಟುಉಕ್ರೇನ್ನಿಯರು ಅನುಭವ ಇಲ್ಲದವರಲ್ಲ: ರಷ್ಯಾಕ್ಕೆ ಝೆಲೆನ್ಸ್ಕಿ ತಿರುಗೇಟು

ರಷ್ಯಾದ ಇಂಧನ ಡಿಪೋದಲ್ಲಿ ಸ್ಫೋಟ: ಉಕ್ರೇನ್ ಹೇಳುವುದು ಏನು?

ರಷ್ಯಾದ ಭೂಪ್ರದೇಶದಲ್ಲಿರುವ ನಾಗರಿಕ ತೈಲ ಸಂಗ್ರಹಣಾ ಕೇಂದ್ರದಲ್ಲಿ ಆಗಿರುವ ಸ್ಪೋಟದ ಹೊಣೆಯನ್ನು ಉಕ್ರೇನ್‌ ಹೊತ್ತುಕೊಳ್ಳಲು ನಿರಾಕರಿಸಿದೆ. ಉಕ್ರೇನ್‌ನೊಂದಿಗಿನ ರಷ್ಯಾದ ಗಡಿಯಿಂದ ದೂರದಲ್ಲಿರುವ ಬೆಲ್ಗೊರೊಡ್ ಬಳಿ ಇರುವ ಇಂಧನ ಡಿಪೋ ಮೇಲೆ ಏಪ್ರಿಲ್ 1 ರ ಆರಂಭದಲ್ಲಿ ಉಕ್ರೇನ್ ಹೆಲಿಕಾಪ್ಟರ್ ದಾಳಿಯನ್ನು ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್‌ ಅಧಿಕಾರಿಗಳು, "ಕೆಲವು ಕಾರಣಕ್ಕಾಗಿ ನಾವು ದಾಳಿಯನ್ನು ಮಾಡಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ. ಇದು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ. ನಾವು ಆ ರೀತಿಯಾಗಿ ದಾಳಿಯನ್ನು ಮಾಡಿಲ್ಲ," ಎಂದು ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಏಪ್ರಿಲ್ 1 ರಂದು ಉಕ್ರೇನಿಯನ್ ದೂರದರ್ಶನದಲ್ಲಿ ಹೇಳಿದರು.

English summary
Ukraine-Russia War: Blasts Heard in Russian City of Belgorod Near Border With Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X