ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ಗೆ 50 ಮಿಲಿಯನ್ ಡಾಲರ್‌ ಶಸ್ತ್ರಾಸ್ತ್ರ ರಫ್ತಿಗೆ ಮುಂದಾದ ಆಸ್ಟ್ರೇಲಿಯಾ

|
Google Oneindia Kannada News

ಸಿಡ್ನಿ, ಮಾರ್ಚ್ 01: ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಸಾಮಾನ್ಯವಾಗಿ ತಿಳಿದಂತೆ ರಷ್ಯಾದ ಶಸ್ತ್ರಾಸ್ತ್ರ ಬಲವು ಉಕ್ರೇನ್‌ಗಿಂತ ಪ್ರಬಲವಾಗಿದೆ. ಈ ನಡುವೆ ಹಲವಾರು ರಾಷ್ಟ್ರಗಳು ಉಕ್ರೇನ್‌ಗೆ ಸಹಾಯಹಸ್ತ ಚಾಚಿದೆ. ಮಾರಿಸನ್ ಸರ್ಕಾರವು ಉಕ್ರೇನ್‌ಗೆ ಕ್ಷಿಪಣಿಗಳು ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಇತರ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸುಮಾರು 50 ಮಿಲಿಯನ್ ಡಾಲರ್‌ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದೆ.

ಮಂಗಳವಾರ ನಡೆದ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯ ನಂತರ ಸ್ಕಾಟ್ ಮಾರಿಸನ್ ಪೂರ್ವ ಯುರೋಪಿಯನ್ ಸಂಘರ್ಷ ಮುಂದುವರಿದಂತೆ ಉಕ್ರೇನ್‌ ಸಹಾಯಕ್ಕೆ ನಿಲುವುದನ್ನು ದೃಢಪಡಿಸಿದ್ದಾರೆ. "ನಾವು ಕೆಲವು ಮಾರಣಾಂತಿಕ ಮತ್ತು ಮಾರಕವಲ್ಲದ ಮದ್ದುಗುಂಡುಗಳನ್ನು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ನೀಡಲಾಗುವುದು, " ಎಂದು ತಿಳಿಸಿದ್ದಾರೆ.

 ಉಕ್ರೇನ್‌ ಯುದ್ಧ: ರಷ್ಯಾದ 12 ಯುಎನ್‌ ರಾಜತಾಂತ್ರಿಕರು ಅಮೆರಿಕದಿಂದ ಹೊರಕ್ಕೆ ಉಕ್ರೇನ್‌ ಯುದ್ಧ: ರಷ್ಯಾದ 12 ಯುಎನ್‌ ರಾಜತಾಂತ್ರಿಕರು ಅಮೆರಿಕದಿಂದ ಹೊರಕ್ಕೆ

50 ಮಿಲಿಯನ್ ಡಾಲರ್‌ ಶಸ್ತ್ರಾಸ್ತ್ರ ರಫ್ತು ಮಾಡಲಾಗುವುದು. ಅದರ ಪೈಕಿ ಬಹುಪಾಲು ಮಾರಣಾಂತಿಕ ಮದ್ದುಗುಂಡುಗಳು ಆಗಿದೆ. ನಾವು ಈ ರಫ್ತನ್ನು ನ್ಯಾಟೋ ಸಹಭಾಗಿತ್ವದಲ್ಲಿ ಮಾಡುತ್ತೇವೆ. ನಾವು ರಷ್ಯಾ ಸರ್ಕಾರಕ್ಕೆ ಯಾವುದೇ ಶಸ್ತ್ರಾಸ್ತ್ರ ಸಹಾಯವನ್ನು ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸ್ಪಷ್ಟಪಡಿಸಿದ್ದಾರೆ.

Ukraine-Russia War: Australia to Send $50M of Weapons to Ukraine

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಕರೆಗೆ ಆಸ್ಟ್ರೇಲಿಯಾ ಪ್ರತಿಕ್ರಿಯೆ ನೀಡುತ್ತಿದೆ ಎಂದು ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಈಗ ಪಲಾಯನಕ್ಕಿಂತ ಮದ್ದುಗುಂಡುಗಳ ಅಗತ್ಯವಿದೆ ಎಂದು ಹೇಳುವ ಮೂಲಕ ಕೀವ್‌ನಿಂದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಸ್ಥಳಾಂತರ ಮಾಡಲು ಸಹಾಯ ಮಾಡಲಾಗುವುದು ಎಂದು ಹೇಳಿದ ಯುಎಸ್‌ಗೆ ಟಾಂಗ್‌ ನೀಡಿದ್ದಾರೆ.

 ಉಕ್ರೇನ್‌ ವಿಚಾರದಲ್ಲಿ ಭಾರತವೇಕೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ?, ಇಲ್ಲಿದೆ ಕಾರಣ ಉಕ್ರೇನ್‌ ವಿಚಾರದಲ್ಲಿ ಭಾರತವೇಕೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ?, ಇಲ್ಲಿದೆ ಕಾರಣ

ರಷ್ಯಾದ ಮೇಲೆ ಆಸ್ಟ್ರೇಲಿಯಾದ ಹೊಸ ನಿರ್ಬಂಧ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಳೆದ ವಾರದ ಕೊನೆಯಲ್ಲಿ ಸಣ್ಣ ರಾಷ್ಟ್ರ ಉಕ್ರೇನ್‌ ಮೇಲೆ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದಾಗಿನಿಂದ 100 ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ಈ ನಡುವೆ ಆಸ್ಟ್ರೇಲಿಯಾ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮೇಲೆ ಪ್ರಯಾಣ ನಿಷೇಧವನ್ನು ಕೂಡಾ ವಿಧಿಸಿದೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾದ ಭದ್ರತಾ ಮಂಡಳಿಯ ಸದಸ್ಯರ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ.

ಏನಿದು SWIFT? ನಿರ್ಬಂಧದಿಂದ ರಷ್ಯಾಕ್ಕೆ ಆಗುವ ನಷ್ಟ ಎಷ್ಟು? ಏನಿದು SWIFT? ನಿರ್ಬಂಧದಿಂದ ರಷ್ಯಾಕ್ಕೆ ಆಗುವ ನಷ್ಟ ಎಷ್ಟು?

"ನಾವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧದ ಹೇರುವ ನಿರ್ಬಂಧವು ಅವರ ಅಸಮರ್ಥನೀಯ ಯುದ್ಧದ ಕಾರಣದಿಂದ ಎಂದು ತಿಳಿಸುತ್ತೇವೆ. ಕಳೆದ ಮಧ್ಯರಾತ್ರಿಯಿಂದ, ಆಸ್ಟ್ರೇಲಿಯನ್ ಉದ್ದೇಶಿತ ಆರ್ಥಿಕ ನಿರ್ಬಂಧಗಳು ಮತ್ತು ಪ್ರಯಾಣ ನಿಷೇಧಗಳು ರಷ್ಯಾದ ಅಧ್ಯಕ್ಷ ಮತ್ತು ರಷ್ಯಾದ ಭದ್ರತಾ ಮಂಡಳಿಯ ಉಳಿದ ಖಾಯಂ ಸದಸ್ಯರ ಮೇಲೆ ಜಾರಿಗೆ ಬಂದಿದೆ," ಎಂದು ಮಾರಿಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ , ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು, ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಮತ್ತು ಆಂತರಿಕ ವ್ಯವಹಾರಗಳ ಸಚಿವ ವ್ಲಾಡಿಮಿರ್ ಕೊಲೊಕೊಲ್ಟ್ಸೆವ್ ಮೇಲೆ ನಿರ್ಬಂಧ ಇದೆ ಎಂದು ಕೂಡಾ ತಿಳಿಸಿದ್ದಾರೆ.

ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್ (SWIFT) ನಿಂದ ಕೆಲವು ರಷ್ಯಾದ ಬ್ಯಾಂಕ್‌ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ಕ್ರಮವನ್ನು ಹಾಗೂ ರಷ್ಯಾ ವಿರೋಧಿ ಕ್ರಮಗಳನ್ನು ಆಸ್ಟ್ರೇಲಿಯಾ ಬೆಂಬಲಿಸುತ್ತದೆ ಎಂದು ಸ್ಕಾಟ್ ಮಾರಿಸನ್ ಹೇಳಿದ್ದಾರೆ. "ರಷ್ಯಾದ ಅತ್ಯಂತ ಪ್ರಭಾವಶಾಲಿ ರಾಜಕೀಯ ಮತ್ತು ಮಿಲಿಟರಿ ವಿರುದ್ಧ ಇತ್ತೀಚಿನ ದಿನಗಳಲ್ಲಿ ಜಾರಿಗೆ ತಂದಿರುವ ಪ್ರಯಾಣ ನಿಷೇಧ ಮತ್ತು ಆಸ್ತಿ ಜಪ್ತಿ ಅನ್ನು ನಾವು ಸ್ವಾಗತಿಸುತ್ತೇವೆ. ರಷ್ಯಾದ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದನ್ನು ಮುಂದುವರಿಸಲಾಗುವುದು," ಎಂದರು. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: Australia commits $50m USD for ammunition to support Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X