ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ದಿನದಲ್ಲಿ ಹತ್ತು ಲಕ್ಷ ಉಕ್ರೇನಿಯನ್ನರು ಪಲಾಯನ: ಯುಎನ್

|
Google Oneindia Kannada News

ಕೀವ್‌, ಮಾರ್ಚ್ 03: ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ಧ ಆರಂಭವಾಗಿ ಒಂದು ವಾರವಾಗಿದೆ. ಯುದ್ಧ ಆರಂಭವಾಗುತ್ತಿದ್ದಂತೆ ಉಕ್ರೇನ್‌ ಜನರು ದೇಶವನ್ನು ಬಿಟ್ಟು ಪಲಾಯನ ಮಾಡಲು ಆರಂಭ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಗಡಿ ರಾಷ್ಟ್ರಗಳು ತಯಾರಿಯನ್ನು ಮಾಡಿಕೊಂಡಿದೆ. ಈ ನಡುವೆ ಕಳೆದ ಒಂದು ವಾರದಲ್ಲಿ ಹತ್ತು ಲಕ್ಷ (ಒಂದು ಮಿಲಿಯನ್‌) ಉಕ್ರೇನಿಯನ್ನರು ಪಲಾಯನ ಮಾಡಿದ್ದಾರೆ ಎಂದು ಯುಎನ್‌ ಹೇಳಿದೆ.

ಉಕ್ರೇನ್‌ ಒಟ್ಟು ಜನಸಂಖ್ಯೆ ಶೇಕಡ ಎರಡಕ್ಕಿಂತ ಅಧಿಕ ಮಂದಿ ದೇಶದಿಂದ ಪಲಾಯನವಾಗಿದ್ದಾರೆ ಎಂದು ಯುಎನ್‌ಎಚ್‌ಸಿಆರ್‌ ಉಲ್ಲೇಖ ಮಾಡಿದೆ. ವಿಶ್ವ ಬ್ಯಾಂಕ್ 2020 ರ ಕೊನೆಯಲ್ಲಿ ಉಕ್ರೇನ್‌ ಜನಸಂಖ್ಯೆಯನ್ನು 44 ಮಿಲಿಯನ್ ಎಂದು ಹೇಳಿತ್ತು. ಅದರ ಪ್ರಕಾರವಾಗಿ ಈಗ ಶೇಕಡ ಎರಡಕ್ಕಿಂತ ಅಧಿಕ ಮಂದಿ ಉಕ್ರೇನ್‌ನಿಂದ ಪಲಾಯನವಾಗಿದ್ದಾರೆ.

 ರಷ್ಯಾ-ಉಕ್ರೇನ್‌ ಯುದ್ಧ: 2 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ರಷ್ಯಾ-ಉಕ್ರೇನ್‌ ಯುದ್ಧ: 2 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ

ಯುಎನ್ ಏಜೆನ್ಸಿಯು 4 ಮಿಲಿಯನ್ ಜನರು ಅಂತಿಮವಾಗಿ ಉಕ್ರೇನ್ ಅನ್ನು ತೊರೆಯಬಹುದು ಎಂದು ಅಂದಾಜು ಮಾಡಿದೆ. ಆದರೆ ಅದಕ್ಕೂ ಅಧಿಕವಾಗುವ ಸಾಧ್ಯತೆಗಳು ಕೂಡಾ ಇದೆ ಎಂದು ತಿಳಿಸಿದೆ. ಈ ಬಗ್ಗೆ ಯುಎನ್‌ಎಚ್‌ಸಿಆರ್‌ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಮಾಹಿತಿ ನೀಡಿದ್ದಾರೆ.

Ukraine-Russia War: 1 Million Ukrainians Have Fled Country in 7 Days Says UN

ಯುಎನ್‌ಎಚ್‌ಸಿಆರ್‌ ವಕ್ತಾರ ಜೌಂಗ್-ಆಹ್ ಘೆಡಿನಿ-ವಿಲಿಯಮ್ಸ್ ಇಮೇಲ್‌ನಲ್ಲಿ, "ರಾಷ್ಟ್ರೀಯ ಅಧಿಕಾರಿಗಳು ಸಂಗ್ರಹಿಸಿದ ಎಣಿಕೆಗಳ ಆಧಾರದ ಮೇಲೆ ಮಧ್ಯ ಯೂರೋಪ್‌ನಲ್ಲಿ ಮಧ್ಯರಾತ್ರಿಯವರೆಗೆ ಸುಮಾರು ಒಂದು ಮಿಲಿಯನ್‌ ಉಕ್ರೇನಿಯನ್ನರು ದೇಶದಿಂದ ಗಡಿ ದಾಟಿದ್ದಾರೆ ಎಂದು ತಿಳಿದುಬಂದಿದೆ," ಎಂದು ಉಲ್ಲೇಖ ಮಾಡಿದ್ದಾರೆ. ಯುಎನ್ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಟ್ವಿಟ್ಟರ್‌ನಲ್ಲಿ, "ಕೇವಲ ಏಳು ದಿನಗಳಲ್ಲಿ ನಾವು ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ವಲಸೆ ಹೋಗುವುದನ್ನು ನೋಡಿದ್ದೇವೆ," ಎಂದು ಬರೆದುಕೊಂಡಿದ್ದಾರೆ.

 48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ: ಮಕ್ಕಳು, ಮಹಿಳೆಯರೇ ಅಧಿಕ 48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ: ಮಕ್ಕಳು, ಮಹಿಳೆಯರೇ ಅಧಿಕ

ಯಾವ ದೇಶದಲ್ಲಿ ಅಧಿಕ ಮಂದಿ ಪಲಾಯನವಾಗಿದ್ದಾರೆ?

ಯುಎನ್‌ಎಚ್‌ಸಿಆರ್‌ ಅಂಕಿಅಂಶಗಳ ಪ್ರಕಾರ, 2011 ರಲ್ಲಿ ಅಂತರ್ಯುದ್ಧ ಸ್ಫೋಟಗೊಂಡ ಸಿರಿಯಾವು ಪ್ರಸ್ತುತ ಅತೀ ಹೆಚ್ಚು ಜನರು ಪಲಾಯನ ಹೊಂದಿದ ದೇಶವಾಗಿದೆ. 2011 ರಲ್ಲಿ ಅಂತರ್ಯುದ್ಧ ಸ್ಫೋಟಗೊಂಡ ಸಂದರ್ಭದಲ್ಲಿ ಸಿರಿಯಾದಿಂದ ಅತೀ ಅಧಿಕ ಜನರು ಪಲಾಯನವಾಗಿದ್ದರು. 5.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಂದರೆ ಐವತ್ತು ಲಕ್ಷಕ್ಕಿಂತಲೂ ಅಧಿಕ ಮಂದಿ ಸಿರಿಯಾದಿಂದ ಪಲಾಯನವಾಗಿದ್ದರು. ಆದರೆ 2013 ರ ಆರಂಭದಲ್ಲಿ ಸಿರಿಯಾದಿಂದ 1 ಮಿಲಿಯನ್ ನಿರಾಶ್ರಿತರು ಆ ದೇಶವನ್ನು ತೊರೆಯಲು ಕನಿಷ್ಠ ಮೂರು ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ.

48 ಗಂಟೆಯಲ್ಲಿ 50,000ಕ್ಕೂ ಅಧಿಕ ಉಕ್ರೇನಿಯನ್ನರು ಪಲಾಯನ

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಉಕ್ರೇನ್ನಿಯನ್ನರು ಪಲಾಯನ ಮಾಡಲು ಆರಂಭ ಮಾಡಿದ್ದಾರೆ. ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾದ 48 ಗಂಟೆಗಳಲ್ಲಿ 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್‌ ಈ ಹಿಂದೆ ಮಾಹಿತಿ ನೀಡಿದೆ. ಪೋಲೆಂಡ್, ಸ್ಲೋವಾಕಿಯಾ, ಹಂಗೇರಿ, ರೊಮೇನಿಯಾ ಮತ್ತು ಮೊಲ್ಡೊವಾ ಅಧಿಕಾರಿಗಳು ಈಗಾಗಲೇ ಉಕ್ರೇನಿಯನ್ನರು ಪಲಾಯನ ಮಾಡುವ ಸಾಧ್ಯತೆ ಹಿನ್ನೆಲೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಕಿಲೋಮೀಟರ್‌ಗಳವರೆಗೆ ಆಶ್ರಯ, ಆಹಾರ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕಾನೂನು ಸಹಾಯವನ್ನು ಕೂಡಾ ಮಾಡಿದೆ.

ಇನ್ನು ಹಲವಾರು ಉಕ್ರೇನ್‌ ಪ್ರಜೆಗಳು ದೇಶದಿಂದ ಪಲಾಯನ ಮಾಡುತ್ತಿರುವ ನಡುವೆ ಉಕ್ರೇನ್ ನಾಗರಿಕರಿಗೆ ವೀಸಾ ಮನ್ನಾವನ್ನು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈ ಬಗ್ಗೆ ಗಲ್ಫ್ ಅರಬ್‌ ರಾಷ್ಟ್ರದಲ್ಲಿರುವ ಕೀವ್‌ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಉಕ್ರೇನ್ ನಾಗರಿಕರಿಗೆ ವೀಸಾ ಮನ್ನಾವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು ಹೇಳಿದೆ. (ಒನ್‌ಇಂಡಿಯಾ ಸುದ್ದಿ)

English summary
Ukraine-Russia War: 1 million Ukrainians have fled country in 7 days since Russian invasion, says UN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X