ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಧರಿಸಿದ ಉಣ್ಣೆಯ ಜಾಕೆಟ್ 1,11,000 ಡಾಲರ್‌ಗೆ ಮಾರಾಟ

|
Google Oneindia Kannada News

ಲಂಡನ್, ಮೇ 10: ರಷ್ಯಾ ನಡೆಸುತ್ತಿರುವ ಯುದ್ಧದಿಂದ ಹೈರಾಣಾಗಿರುವ ಉಕ್ರೇನ್‌ಗಾಗಿ ಲಂಡನ್‌ನಲ್ಲಿ ನಿಧಿ ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಈ ನಿಧಿ ಸಂಗ್ರಹಣ ಅಂಗವಾಗಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಣ್ಣೆಯ ಜಾಕೆಟ್ ಬರೋಬ್ಬರಿ 1,11,000 ಡಾಲರ್ ಮೊತ್ತಕ್ಕೆ ಮಾರಾಟವಾಗಿದೆ.

ರಷ್ಯಾ ಯುದ್ಧವನ್ನು ಆರಂಭಿಸಿದ ಸಂದರ್ಭದಲ್ಲಿ ಉಕ್ರೇನ್ ಮೂರೇ ದಿನಗಳಲ್ಲಿ ಸೋಲು ಒಪ್ಪಿಕೊಳ್ಳುತ್ತದೆ. ಉಕ್ರೇನ್ ಸರ್ಕಾರವು ಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಜಗತ್ತು ಅಂದುಕೊಂಡಿತ್ತು. ಆದರೆ ಅದು ಸುಳ್ಳಾಗಿದೆ ಎಂದು ಯುನೈಟೆಡ್ ಕಿಂಗ್‌ಡಮ್‌ನ ಉಕ್ರೇನಿಯನ್ ರಾಯಭಾರ ಕಚೇರಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದೆ.

ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳಿಗೆ ಪುಟಿನ್ ಜವಾಬ್ದಾರಿ ಎಂದ ಕೆನಡಾ ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳಿಗೆ ಪುಟಿನ್ ಜವಾಬ್ದಾರಿ ಎಂದ ಕೆನಡಾ

ಇಂದು, ಇಡೀ ಜಗತ್ತು ಸಾಮಾನ್ಯವಾದ ಉಣ್ಣೆಯ ಜಾಕೆಟ್ ಅನ್ನು ಧರಿಸಿರುವ ಮನುಷ್ಯನನ್ನು ನೋಡುತ್ತಿದೆ. ಈಗ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರು ವೈಯಕ್ತಿಕವಾಗಿ ಸಹಿ ಮಾಡಿದ ಐಕಾನಿಕ್ ಐಟಂ ಇಲ್ಲಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಲಂಡನ್ ನೆಲದಲ್ಲಿ ಬ್ರೇವ್ ಉಕ್ರೇನ್ ಅಭಿಯಾನ

ಲಂಡನ್ ನೆಲದಲ್ಲಿ ಬ್ರೇವ್ ಉಕ್ರೇನ್ ಅಭಿಯಾನ

ರಾಯಭಾರ ಕಚೇರಿಯ ಪ್ರಕಾರ, "ಬ್ರೇವ್ ಉಕ್ರೇನ್" ಎಂಬ ಹೆಸರಿನಲ್ಲಿ ನಿಧಿ ಸಂಗ್ರಹಣೆ ಅಭಿಯಾನವನ್ನು ನಡೆಸಲಾಗುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಸಂದರ್ಭದಲ್ಲಿ ಯಾವ ರೀತಿ ತಾಳ್ಮೆ ಮತ್ತು ಜಾಣತನವನ್ನು ಪ್ರದರ್ಶಿಸಲಾಯಿತು ಎಂಬ ಕಥೆಯನ್ನು ಹೇಳಲಾಗುತ್ತದೆ. ಇದರ ಜೊತೆಗೆ ಉಕ್ರೇನ್ ಜಾಣತನವನ್ನು ಬೆಂಬಲಿಸುವುದಕ್ಕಾಗಿ ಆರ್ಥಿಕ ನೆರವು ನೀಡಿ ಎಂದು ನಿಧಿ ಸಂಗ್ರಹಿಸಲಾಗುತ್ತಿದೆ.

ಉಕ್ರೇನ್ ಅಭಿಯಾನದಲ್ಲಿ ಸಂಗ್ರಹಣೆಯಾದ ನಿಧಿಯ ಮೊತ್ತವೆಷ್ಟು?

ಉಕ್ರೇನ್ ಅಭಿಯಾನದಲ್ಲಿ ಸಂಗ್ರಹಣೆಯಾದ ನಿಧಿಯ ಮೊತ್ತವೆಷ್ಟು?

ಈ ನಿಧಿಸಂಗ್ರಹದಲ್ಲಿ ಉಕ್ರೇನಿಯನ್ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ನೀಡಿದ ಆಟಿಕೆಗಳು ಮತ್ತು ಲಂಡನ್‌ನ ಟೇಟ್ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ದಿವಂಗತ ಛಾಯಾಗ್ರಾಹಕ ಮ್ಯಾಕ್ಸ್ ಲೆವಿನ್ ಅವರ ಛಾಯಾಚಿತ್ರಗಳನ್ನು ಒಳಗೊಂಡಿತ್ತು. ಉಕ್ರೇನ್‌ಗೆ ಮಾನವೀಯ ನೆರವನ್ನು ಬೆಂಬಲಿಸಲು ಈವೆಂಟ್‌ನಲ್ಲಿ $1 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಲಾಯಿತು. ಪಶ್ಚಿಮ ಉಕ್ರೇನಿಯನ್ ವಿಶೇಷ ಮಕ್ಕಳ ವೈದ್ಯಕೀಯ ಕೇಂದ್ರದ ಮರು-ಉಪಕರಣಗಳಿಗೆ ಹೆಚ್ಚಿನ ಹಣವನ್ನು ಬಳಸಲಾಗುವುದು ಎಂದು ರಾಯಭಾರ ಕಚೇರಿ ತಿಳಿಸಿದೆ.

ಉಕ್ರೇನ್ ನಿಧಿ ಸಂಗ್ರಹಣೆಯಲ್ಲಿ ಬ್ರಿಟಿಷ್ ಪ್ರಧಾನಿ

ಉಕ್ರೇನ್ ನಿಧಿ ಸಂಗ್ರಹಣೆಯಲ್ಲಿ ಬ್ರಿಟಿಷ್ ಪ್ರಧಾನಿ

ಉಕ್ರೇನಿಯನ್ ರಾಯಭಾರ ಕಚೇರಿ ಆಯೋಜಿಸಿದ್ದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಭಾಗವಹಿಸಿದ್ದರು. ಈ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು "ಆಧುನಿಕ ಕಾಲದ ಅಸಮಾನ್ಯ ನಾಯಕರಲ್ಲಿ ಒಬ್ಬರು" ಎಂದು ಹೊಗಳಿದರು. ಜಾನ್ಸನ್ ಉಕ್ರೇನ್‌ಗೆ ಯುಕೆ ಬೆಂಬಲವನ್ನು ಪುನರುಚ್ಚರಿಸಿದರು. "ಉಕ್ರೇನ್ ಬಯಸುತ್ತಿರುವವರೆಗೆ ಮತ್ತು ನಮ್ಮ ಸಹಾಯದ ಅಗತ್ಯವಿರುವವರೆಗೆ ನಾವು ಈ ಪ್ರಯತ್ನವನ್ನು ತೀವ್ರಗೊಳಿಸುತ್ತೇವೆ" ಎಂದು ಹೇಳಿದರು.

ಉಕ್ರೇನ್ ಜನರ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಹಾಯ

ಉಕ್ರೇನ್ ಜನರ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಹಾಯ

"ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಸುತ್ತಿರುವ ನಿರಂತರ ದಾಳಿಯಿಂದ ಉಕ್ರೇನ್ ಅನ್ನು ರಕ್ಷಿಸಬೇಕಿದೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಅಗತ್ಯವಾದ ಸಹಾಯವನ್ನು ಮಾಡುವುದಕ್ಕೆ ಯುನೈಟೆಡ್ ಕಿಂಗ್ ಡಮ್ ಸದಾ ಸಿದ್ಧವಾಗಿರುತ್ತದೆ. ಉಕ್ರೇನ್ ರಕ್ಷಣೆಯ ಜೊತೆಗೆ ಆ ದೇಶದ ಮುಗ್ಧ ಜನರ ಮೇಲಿನ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಾವು ಸಹಾಯ ಮಾಡಬೇಕಿದೆ" ಎಂದು ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಹೇಳಿದರು.

English summary
Ukraine President Volodymyr Zelenskyy fleece jacket sold for more than 1,00,000 dollar at fundraiser in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X