ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್‌ನಲ್ಲೇ 3ನೇ ಮಹಾಯುದ್ಧ? ರಷ್ಯಾ ವಿರುದ್ಧ ಜರ್ಮನಿ ಬಾಗಿಲು ಬಡಿದ ಉಕ್ರೇನ್!

|
Google Oneindia Kannada News

ಜಗತ್ತು ವಿನಾಶದ ಅಂಚಿಗೆ ತಲುಪಿದ್ರೂ ಮತ್ತೊಂದು ಮಹಾಯುದ್ಧದ ಮಾತು ಕೈಬಿಡಲು ಮನುಷ್ಯ ಸಿದ್ಧವಿಲ್ಲ. ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವುದು ಕೂಡ ಇದೇ. ಒಂದ್ಕಡೆ ಉಕ್ರೇನ್ ಗಡಿಯಲ್ಲಿ ರಷ್ಯಾ ಭಾರಿ ಪ್ರಮಾಣದ ಸೇನೆ ನಿಯೋಜಿಸುತ್ತಿದ್ದರೆ, ರಷ್ಯಾ ವಿರುದ್ಧ ಉಕ್ರೇನ್ ನ್ಯಾಟೋ ಪಡೆಗಳ ಬೆಂಬಲ ಬಯಸುತ್ತಿದೆ. ಹೀಗಾಗಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವಾಗ ಬೇಕಾದರೂ ರಷ್ಯಾ-ಉಕ್ರೇನ್ ಯುದ್ಧಕ್ಕಿಳಿಯುವ ಸಂಭವ ಹೆಚ್ಚಾಗಿದೆ.

ಇಂತಹ ಸ್ಥಿತಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್‌ಸ್ಕಿ ಜರ್ಮನಿ ಪ್ರವಾಸ ಕೈಗೊಂಡಿದ್ದು, ಜರ್ಮನ್ ನಾಯಕಿ ಏಂಜೆಲಾ ಮಾರ್ಕೆಲ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಹೀಗೆ ರಷ್ಯಾದಿಂದ ಉಕ್ರೇನ್‌ಗೆ ಅಪಾಯ ಎದುರಾಗಿದೆ ಎಂಬ ಸಂದೇಶ ಹೊತ್ತೊಯ್ದಿದ್ದಾರೆ ಝೆಲೆನ್‌ಸ್ಕಿ.

ಮುಟ್ಟಿದ್ರೆ ಸುಟ್ಟು ಹೋಗ್ತೀರ ಹುಷಾರ್..! ರಷ್ಯಾ ವಾರ್ನಿಂಗ್ ಹೆಂಗಿತ್ತು ಗೊತ್ತಾ..?ಮುಟ್ಟಿದ್ರೆ ಸುಟ್ಟು ಹೋಗ್ತೀರ ಹುಷಾರ್..! ರಷ್ಯಾ ವಾರ್ನಿಂಗ್ ಹೆಂಗಿತ್ತು ಗೊತ್ತಾ..?

ಈ ಭೇಟಿ ಉಕ್ರೇನ್ ಗಡಿಯಲ್ಲಿ ಮತ್ತಷ್ಟು ಶಾಂತಿ ಕದಡುವ ಮುನ್ಸೂಚನೆ ನೀಡಿದೆ. ಏಕೆಂದ್ರೆ ಈಗಾಗಲೇ ನ್ಯಾಟೋ ಪಡೆಗಳ ಬೆಂಬಲದೊಂದಿಗೆ ಕಪ್ಪು ಸಮುದ್ರದಲ್ಲಿ ಕೆಲ ದಿನಗಳಿಂದ ಉಕ್ರೇನ್ ಸೇನಾ ಕಸರತ್ತು ನಡೆಸುತ್ತಿದೆ. ಈ ವಿಚಾರಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ನೇರ ಎಚ್ಚರಿಕೆ ನೀಡಿದ್ದಾರೆ. ಇದು ಸಾಲದು ಎಂಬಂತೆ ಉಕ್ರೇನ್ ಅಧ್ಯಕ್ಷರ ಜರ್ಮನಿ ಭೇಟಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಉಪಗ್ರಹದಲ್ಲೂ ಕಂಡ ಸೈನಿಕರು..!

ಉಪಗ್ರಹದಲ್ಲೂ ಕಂಡ ಸೈನಿಕರು..!

ರಷ್ಯಾ-ಉಕ್ರೇನ್ ಬಾರ್ಡರ್ ಸದ್ಯ ಹೇಗಿದೆ ಎಂದರೆ ಬಾಹ್ಯಾಕಾಶದಿಂದ, ಉಪಗ್ರಹಗಳ ಕಣ್ಣಲ್ಲಿ ಝೂಮ್ ಹಾಕಿದ್ರೂ ಬರೀ ಸೈನಿಕರೇ ಕಾಣುತ್ತಿದ್ದಾರೆ. ಇದು ಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

ಮಾರ್ಕೆಲ್ ಎಂಬ ಉಕ್ಕಿನ ಮಹಿಳೆ

ಮಾರ್ಕೆಲ್ ಎಂಬ ಉಕ್ಕಿನ ಮಹಿಳೆ

ಭಾರತಕ್ಕೆ ಇಂದಿರಾ ಗಾಂಧಿ ಹೇಗೆ ಉಕ್ಕಿನ ಮಹಿಳೆ ಆಗಿದ್ದರೋ, ಅದೇ ರೀತಿ ಜರ್ಮನಿಗೆ ಏಂಜೆಲಾ ಇದ್ದಾರೆ. ಏಂಜೆಲಾ ಮಾರ್ಕೆಲ್ ದುಡಿದಿದ್ದು ಕೇವಲ ಜರ್ಮನಿ ಅಭಿವೃದ್ಧಿಗೋಸ್ಕರ ಮಾತ್ರವಲ್ಲ ಯುರೋಪ್ ಒಗ್ಗಟ್ಟಿಗೆ ಹಾಕಿಕೊಟ್ಟ ಅಡಿಪಾಯ ದೊಡ್ಡದಿದೆ. ಆಧುನಿಕ ಜಗತ್ತಿನಲ್ಲಿ ಯುರೋಪ್ ಹೇಗೆ ಜಾಗತಿಕವಾಗಿ ಬೆಳೆಯಬೇಕು ಎಂಬುದನ್ನ ಮುಂದೆ ನಿಂತು ತೋರಿಸಿಕೊಟ್ಟವರು ಮಾರ್ಕೆಲ್. ಅಲ್ಲದೆ ಕೊರೊನಾ ಕೈಮೀರಿದಾಗ ಜರ್ಮನಿ ಯುರೋಪ್‌ನ ಇತರ ರಾಷ್ಟ್ರಗಳಿಗೂ ಮಾದರಿ ಆಗಿತ್ತು. ಅದಕ್ಕೆಲ್ಲಾ ಕಾರಣ ಇದೇ ಮಾರ್ಕೆಲ್ ನಾಯಕತ್ವ. ಇದೇ ಕಾರಣಕ್ಕೆ ಉಕ್ರೇನ್ ಇದೀಗ ರಷ್ಯಾ ವಿರುದ್ಧ ಜರ್ಮನಿ ಸಹಾಯ ಬಯಸಿದೆ.

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ಅಮೆರಿಕದ ಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ. ಈ ನಡುವೆ ಕಪ್ಪು ಸಮುದ್ರಕ್ಕೆ ನ್ಯಾಟೋ ಮತ್ತು ಉಕ್ರೇನ್ ಪಡೆಗಳು ಲಗ್ಗೆ ಇಟ್ಟಿದ್ದು ಯುದ್ಧದ ಬೆಂಕಿ ಹೊತ್ತಿಸಿದೆ.

English summary
Ukraine president Volodymyr Zelensky visited Germany after tensions raise in border with Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X