• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆ

|

ಒಟ್ಟಾವ, ಜನವರಿ 9: ಇರಾನ್ ಮತ್ತು ಅಮೆರಿಕ ಸಂಘರ್ಷ ತಣ್ಣಗಾಗುವ ಸೂಚನೆ ಕಾಣಿಸುತ್ತಿಲ್ಲ. ಬುಧವಾರ ಇರಾನ್‌ನಿಂದ ಹೊರಟಿದ್ದ ಉಕ್ರೇನ್‌ನ ಪ್ರಯಾಣಿಕ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲ 176 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆ, ಈ ಸಂಘರ್ಷಕ್ಕೆ ಮತ್ತೊಂದು ಆಯಾಮ ನೀಡುವ ಸಾಧ್ಯತೆ ಇದೆ.

   ರಾಕೆಟ್ ದಾಳಿಯನ್ನುಖಚಿತಪಡಿಸಿದ ಇರಾಕ್ ಸೇನೆ | US VS IRAQ | DONALDTRUMP | IRAQ

   ವಿಮಾನ ಅಪಘಾತ ತಾಂತ್ರಿಕ ದೋಷದಿಂದ ಉಂಟಾಗಿರಬಹುದು ಅಥವಾ ಬೇರೆ ಯಾವುದೇ ಕಾರಣದಿಂದ ಸಂಭವಿಸಿರಬಹುದು. ಮುಖ್ಯವಾಗಿ ಇರಾನ್-ಅಮೆರಿಕ ಸಂಘರ್ಷವೇ ಈ ಅಪಘಾತಕ್ಕೆ ಕಾರಣವಾಗಿರಲೂಬಹುದು ಎಂದು ಶಂಕಿಸಲಾಗಿದೆ.

   ತನ್ನ ಸೇನಾಧಿಕಾರಿಯ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಪಡೆಗಳು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದವು. ಅದಾಗಿ ಕೆಲವೇ ಗಂಟೆಗಳಲ್ಲಿ ಇರಾನ್‌ನಲ್ಲಿ ಉಕ್ರೇನ್ ವಿಮಾನ ಪತನಗೊಂಡಿದೆ. ಹೀಗಾಗಿ ಈ ಘಟನೆ ಉದ್ದೇಶಪೂರ್ವಕ ಕೃತ್ಯವೂ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

   ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್ಅಮೆರಿಕವನ್ನು ಇಲ್ಲಿಂದ ಒದ್ದೋಡಿಸುವುದೇ ಅಂತಿಮ ಗುರಿ: ಇರಾನ್

   ಇರಾನ್ ದಾಳಿಗೆ ಪ್ರತಿಯಾಗಿ ಅಮೆರಿಕದ ಪಡೆಗಳೇ ಕ್ಷಿಪಣಿ ದಾಳಿ ನಡೆಸಿ ವಿಮಾನವನ್ನು ಉರುಳಿಸಿರಬಹುದು ಎಂದು ಅನೇಕರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. 1988ರಲ್ಲಿ ಅಮೆರಿಕದ ನೌಕಾಪಡೆ ನಡೆಸಿದ ದಾಳಿಯಲ್ಲಿ ಸುಮಾರು 290 ಪ್ರಯಾಣಿಕರಿದ್ದ ವಿಮಾನ ನೆಲಕ್ಕೆ ಅಪ್ಪಳಿಸಿತ್ತು. ಅದೇ ಮಾದರಿಯಲ್ಲಿ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ವತಃ ಇರಾನ್ ಕಣ್ತಪ್ಪಿನಿಂದ ವಿಮಾನವನ್ನು ಹೊಡೆದುರುಳಿಸುವ ಸಾಧ್ಯತೆಯೂ ಇದೆ ಎಂದು ಸಹ ಹೇಳಲಾಗಿದೆ.

   ಪೈಲಟ್ ನಿಯಂತ್ರಣ ತಪ್ಪುವುದಿಲ್ಲ

   ಪೈಲಟ್ ನಿಯಂತ್ರಣ ತಪ್ಪುವುದಿಲ್ಲ

   ವಿಮಾನವನ್ನು ಹೊಡೆದುರುಳಿಸುವ ಸಾಧ್ಯತೆ ಇದೆ ಎಂದು ವಿಮಾನಯಾನ ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಕ್ತ ಪುರಾವೆ ಸಿಗುವವರೆಗೂ ಇದನ್ನು ತೀರ್ಮಾನಿಸಲಾಗದು. ಆದರೆ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷವೇ ಕಾರಣ ಎಂದೂ ಹೇಳುವಂತಿಲ್ಲ. ಎಂಜಿನ್ ವೈಫಲ್ಯದಿಂದ ಬೆಂಕಿ ಹತ್ತಿಕೊಂಡು ಅಪಘಾತ ಸಂಭವಿಸಿರಬಹುದು. ಆದರೆ ಎಂಜಿನ್ ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಂಡರೂ ಅದರ ರೆಕ್ಕೆಗಳನ್ನು ಪೈಲಟ್ ನಿಯಂತ್ರಿಸಿ ತುರ್ತು ಭೂಸ್ಪರ್ಶ ಮಾಡಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

   ತಾಂತ್ರಿಕ ದೋಷದ ಸಾಧ್ಯತೆ ಕಡಿಮೆ

   ತಾಂತ್ರಿಕ ದೋಷದ ಸಾಧ್ಯತೆ ಕಡಿಮೆ

   ಮೇಲಕ್ಕೆ ಏರಿದ್ದ ವಿಮಾನ ಇದ್ದಕ್ಕಿದ್ದಂತೆ ಸಂಪರ್ಕ ಕಡಿದುಕೊಂಡು ಡೇಟಾ ಕಳೆದುಕೊಳ್ಳಲು ಡೇಟಾ ರವಾನಿಸುವ ಎಲೆಕ್ಟ್ರಾನಿಕ್ ಸಾಧನ ಹಾಳಾಗಿದ್ದರಿಂದ ಅಥವಾ ಹಠಾತ್ತಾಗಿ ನಾಶ ಹೊಂದುವುದರಿಂದ ಮಾತ್ರ ಸಾಧ್ಯ. ಈ ವಿಮಾನವು ಇತ್ತೀಚೆಗೆ ಕಾರ್ಯಾರಂಭಮಾಡಿತ್ತು. ಪೈಲಟ್‌ಗಳು ಕೂಟ ಅನುಭವಿಗಳಾಗಿದ್ದರು. ಹಾರಾಟ ಆರಂಭಿಸುವ ಮುನ್ನ ವಿಮಾನ ಸುಸ್ಥಿತಿಯಲ್ಲಿತ್ತು. ಹೀಗಾಗಿ ಅದು ತಾಂತ್ರಿಕ ದೋಷದಿಂದ ಅಪಘಾತಕ್ಕೆ ಈಡಾಗುವ ಅವಕಾಶಗಳು ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

   ಯುರೋಪ್‌ಗೆ ತೆರಳುವ ಮಾರ್ಗ ಬದಲಿಸಿದ ಏರ್ ಇಂಡಿಯಾಯುರೋಪ್‌ಗೆ ತೆರಳುವ ಮಾರ್ಗ ಬದಲಿಸಿದ ಏರ್ ಇಂಡಿಯಾ

   ದಾಳಿಯ ಸೇಡಿಗಾಗಿ ದಾಳಿ?

   ದಾಳಿಯ ಸೇಡಿಗಾಗಿ ದಾಳಿ?

   ಖಾಸಿಂ ಸೋಲೆಮನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಇರಾನ್‌, ತನ್ನ ತಂಟೆಗೆ ಬಂದರೆ ಸೇನೆಯಿಂದ ತೀವ್ರ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. ಇರಾನ್ ರಾಜಧಾನಿ ಟೆಹರಾನ್, ಅಮೆರಿಕದ ಟಾರ್ಗೆಟ್ ಆಗಿದ್ದರಲ್ಲಿ ಅನುಮಾನವಿಲ್ಲ. ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಮೂರು ಗಂಟೆಗಳ ಬಳಿಕ ವಿಮಾನ ಅಪಘಾತಕ್ಕೆ ಒಳಗಾಗಿದೆ. ಈ ವೇಳೆ ವಿಮಾನ ಸುಮಾರು 8000 ಅಡಿ ಎತ್ತರದಲ್ಲಿತ್ತು. ಗಂಟೆಗೆ 318 ಮೈಲು ವೇಗದಲ್ಲಿ ಸ್ಥಿರವಾಗಿ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಅಪಘಾತ ಸಂಭವಿಸಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗಿ ಅಮೆರಿಕದ ಮೇಲೆ ಅನುಮಾನ ಮೂಡುವುದು ಸಹಜ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

   ತನಿಖೆಗೆ ಉಕ್ರೇನ್ ಒತ್ತಾಯ

   ತನಿಖೆಗೆ ಉಕ್ರೇನ್ ಒತ್ತಾಯ

   ಘಟನೆ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಉಕ್ರೇನ್ ಹಾಗೂ ಕೆನಡಾ ಆಗ್ರಹಿಸಿವೆ. ಅಪಘಾತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳ ಕುರಿತೂ ತನಿಖೆ ನಡೆಸಬೇಕಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆಂಸ್ಕಿ ಹೇಳಿದ್ದಾರೆ. ಅಪಘಾತದ ಕುರಿತು ತನಿಖೆಗೆ ಅವರು ಉಕ್ರೇನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೇ, ದಾಳಿಯ ಕಾರಣದಿಂದ ವಿಮಾನ ಅಪಘಾತ ಸಂಭವಿಸಲು ಸಾಧ್ಯವಿಲ್ಲ ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಬರಹವನ್ನು ಇರಾನ್ ತೆಗೆದುಹಾಕಿದೆ.

   ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್

   ಇರಾನ್ ಮೇಲೆಯೂ ಇದೆ ಅನುಮಾನ

   ಇರಾನ್ ಮೇಲೆಯೂ ಇದೆ ಅನುಮಾನ

   ವಿಮಾನವನ್ನು ಇರಾನಿನ ವಾಯುಪಡೆಯೇ ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಉಕ್ರೇನ್‌ನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ಕಾರಣದಿಂದಲೇ ಇರಾನ್ ವಿಮಾನದ ಕಪ್ಪುಪೆಟ್ಟಿಗೆ ನೀಡಲು ನಿರಾಕರಿಸಿದೆ ಎಂದೂ ಆರೋಪಿಸಲಾಗಿದೆ. ಅಧಿಕೃತ ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ದೇಶ ಅಥವಾ ಕಾರಣಗಳನ್ನು ಆರೋಪಿಸುವುದು ಸರಿಯಲ್ಲ ಎಂದು ಉಕ್ರೇನ್ ಪ್ರಧಾನಿ ಒಲೆಸ್ಕಿ ಹೊಂಚರುಕ್ ಹೇಳಿದ್ದಾರೆ.

   ತನಿಖೆಗೆ ಮುಂದಾದ ಕೆನಡಾ

   ತನಿಖೆಗೆ ಮುಂದಾದ ಕೆನಡಾ

   ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಕೆನಡಾದ 63 ನಾಗರಿಕರೂ ಸೇರಿದ್ದಾರೆ. ಕೆನಡಾದ ಪರಿಣತರ ತಂಡವು ಮೃತರ ದೇಹಗಳನ್ನು ಸಂಗ್ರಹಿಸಲು ಮತ್ತು ಅಪಘಾತ ಘಟನೆಯ ತನಿಖೆ ನಡೆಸಲು ಇರಾನ್‌ಗೆ ಹೊರಟಿದೆ. ಇರಾನ್ ಮತ್ತು ಕೆನಡಾ ರಾಜತಾಂತ್ರಿಕ ಸಂಬಂಧವು 2012ರಲ್ಲಿಯೇ ಮುರಿದುಬಿದ್ದಿದೆ. ಈ ರೀತಿಯ ಅಪಘಾತಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸುವ ಸಾಮರ್ಥ್ಯವುಳ್ಳ ತಜ್ಞರನ್ನು ಕೆನಡಾ ಹೊಂದಿದೆ. ಹೀಗಾಗಿ ಉಕ್ರೇನ್ ಪರಿಣತರ ತಂಡ ನಮ್ಮನ್ನು ಸೇರಿಕೊಳ್ಳಬಹುದು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೆಯು ಹೇಳಿದ್ದಾರೆ.

   ಮೃತರಲ್ಲಿ 82 ಇರಾನಿಯನ್ನರು, 63 ಕೆನಡಿಯನ್ನರು, 10 ಸ್ವೀಡನ್, 4 ಅಫ್ಘಾನಿಸ್ತಾನ ಹಾಗೂ ತಲಾ ಮೂರು ಮಂದಿ ಜರ್ಮನಿ ಹಾಗೂ ಬ್ರಿಟನ್ ಪ್ರಜೆಗಳಿದ್ದಾರೆ. ಆದರೆ ಇರಾನ್ ತನ್ನ 147 ಪ್ರಜೆಗಳು ಸತ್ತಿದ್ದಾರೆ ಎಂದು ಹೇಳಿಕೊಂಡಿದೆ. ಇವರಲ್ಲಿ ಅನೇಕರು ಎರಡು ದೇಶಗಳ ಪೌರತ್ವ ಹೊಂದಿದ್ದಾರೆ ಎನ್ನಲಾಗಿದೆ.

   English summary
   Many aviation experts said they cannot turndown the possibility of missile attack on Ukraine plane crash which killed 176 people on Wednesday in Iran.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X