ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಅಧ್ಯಕ್ಷ ಸ್ಥಾನಕ್ಕೇರಿದ 'ಕಾಮಿಡಿಯನ್' ವೊಲೊದಿಮರ್

|
Google Oneindia Kannada News

ಕೀವ್, ಏಪ್ರಿಲ್ 22: ಉಕ್ರೇನಿನ ಜನಪ್ರಿಯ ಹಾಸ್ಯನಟ ವೊಲೊದಿಮರ್ ಝೆಲೆಸ್ಕಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿ, ಇತಿಹಾಸ ನಿರ್ಮಿಸಿದ್ದಾರೆ. ಯಾವ ರಾಜಕೀಯ ಅನುಭವಿಲ್ಲದೆ, ಜನ ಬೆಂಬಲದಿಂದ ಉನ್ನತ ಹುದ್ದೆಗೇರಿ, ಸಂಚಲನ ಮೂಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವೊಲೊದಿಮರ್ ಅವರು ಶೇ 73 ಮತಗಳನ್ನು ಪಡೆದರೆ, ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆನ್ಕೊ ಅವರು ಕೇವಲ 24% ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಚಲಾಯಿತ ಮತಗಳ ಪೈಕಿ ಶೇಕಡ 42ರಷ್ಟು ಮತಗಳ ಎಣಿಕೆ ಸಂದರ್ಭದಲ್ಲೇ ಈ ರೀತಿ ಮುನ್ನಡೆ ಗಳಿಸಿ ಜಯ ದಾಖಲಿಸಿದ್ದಾರೆ.

ಯುರೋಪಿಯನ್ ಕೌನ್ಸಿಲ್ ಮುಖ್ಯಸ್ಥರ ಟ್ವೀಟ್ ಪ್ರತಿಕ್ರಿಯೆ:

ಅಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಹಾಗೂ ಪೂರ್ವ ಉಕ್ರೇನ್‌ನಲ್ಲಿ 13 ಸಾವಿರ ಜೀವಗಳನ್ನು ಬಲಿಪಡೆದ ರಶ್ಯ ಬೆಂಬಲಿತ ಪ್ರತ್ಯೇಕತಾವಾದಿಗಳ ಯುದ್ಧದಿಂದ ಹತಾಶರಾಗಿ ಜನತೆಗೆ ಹಾಸ್ಯನಟ ವೊಲೊದಿಮಿರ್ ಮೇಲೆ ಭರವಸೆ ಮಾಡಿದೆ.

Ukraine election: Comedian Zelensky wins presidency by landslide

"ಸರ್ವೆಂಟ್ ಆಫ್ ದ ಪೀಪಲ್" ಧಾರಾವಾಹಿಯಲ್ಲಿ ನಟಿಸಿದ್ದ ವೊಲೊದಿಮಿರ್ ಅವರು, ಆ ಟಿವಿ ಸರಣಿಯಲ್ಲಿ ಆಕಸ್ಮಿಕವಾಗಿ ಉಕ್ರೇನಿನ ಅಧ್ಯಕ್ಷರಾಗುತ್ತಾರೆ. ಈಗ ಆ ಪ್ರಹಸನವೇ ನಿಜವಾಗಿದೆ. 45 ದಶಲಕ್ಷ ಜನಸಂಖ್ಯೆಯನ್ನು ಉದ್ದೇಶಿಸಿ 'ನಿಮ್ಮನ್ನು ಎಂದೂ ಕಡೆಗಣಿಸುವುದಿಲ್ಲ" ಎಂದು ಸಂಭ್ರಮಾಚರಣೆ ವೇಳೆ ಹೇಳಿದ್ದಾರೆ.

ಕಾಮಿಡಿಯನ್ ಆದರೂ ವಕೀಲ ವೃತ್ತಿಯಲ್ಲಿ ತರಬೇತಿ ಪಡೆದಿದ್ದಾರೆ. ಪ್ರತ್ಯೇಕತಾವಾದಿಗಳ ಜತೆ ಶಾಂತಿ ಮಾತುಕತೆ ನಡೆಸುವುದಾಗಿ ಘೋಷಿಸಿದ್ದಾರೆ.

English summary
Ukrainian comedian Volodymyr Zelensky has scored a landslide victory in the country's presidential election. With nearly all ballots counted in the run-off vote, Mr Zelensky had taken more than 73% with incumbent Petro Poroshenko trailing far behind on 24%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X