ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಗಡಿ ಬಿಕ್ಕಟ್ಟು: ಭಾರತದ ಬೆಂಬಲ ಯಾರಿಗೆ?

|
Google Oneindia Kannada News

ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹೋದಂತೆ ಹದಗೆಡುತ್ತಿದೆ.

ಉಕ್ರೇನ್ ಮತ್ತು ರಷ್ಯಾ ನೂರಾರು ವರ್ಷಗಳಿಂದ ಸಾಂಸ್ಕೃತಿಕ, ಭಾಷಾ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಂಡು ಬಂದಿವೆ. ರಷ್ಯಾದ ಬಳಿಕ, ಉಕ್ರೇನ್ ಎರಡನೇ ಅತ್ಯಂತ ಶಕ್ತಿಶಾಲಿ ಸೋವಿಯತ್ ಗಣರಾಜ್ಯವಾಗಿತ್ತು. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟಾಗಿನಿಂದ ಉಕ್ರೇನ್​ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ರಷ್ಯಾ ಪ್ರಯತ್ನಿಸುತ್ತಲೇ ಬಂದಿದೆ.

ಉಕ್ರೇನ್ ಗಡಿ ವಿವಾದ: ರಷ್ಯಾದ ಬೇಡಿಕೆಯೇನು? ಯುದ್ಧ ಭೀತಿ ಏಕೆ?ಉಕ್ರೇನ್ ಗಡಿ ವಿವಾದ: ರಷ್ಯಾದ ಬೇಡಿಕೆಯೇನು? ಯುದ್ಧ ಭೀತಿ ಏಕೆ?

ಅಮೆರಿಕದ ಜೊತೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಮುಂದಾಗಿದ್ದ ಉಕ್ರೇನ್ ರಷ್ಯಾದ ಮಾತನ್ನು ಕೇಳಿರಲಿಲ್ಲ. ಇದರ ಜೊತೆಗೆ ಯುರೋಪ್‌ನ ಕೆಲವು ರಾಷ್ಟ್ರಗಳಿಂದ ಪರೋಕ್ಷವಾಗಿ ರಷ್ಯಾಗೆ ಧಮ್ಕಿ ಹಾಕಿಸಲು ಯತ್ನಿಸಿತ್ತು ಎಂಬ ಆರೋಪವಿದೆ. ಇದೆಲ್ಲಾ ರಷ್ಯಾದ ನಾಯಕರನ್ನ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಕೆಣಕಿದೆ.

Ukraine Crisis: India Unlikely To Stain Its Relations With Russia

ಹಲವು ಒತ್ತಡಕ್ಕೆ ಮಣಿದು ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿತ್ತು. ರಷ್ಯಾ ಕಪ್ಪು ಸಮುದ್ರದ ಮೇಲೆ ನಿರ್ಬಂಧ ಹೇರಿ ಉಕ್ರೇನ್ ಬಂದರುಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು.

ಉಕ್ರೇನ್ ಬೆಂಬಲಕ್ಕೆ ನಿಂತಿದ್ದ ಬ್ರಿಟನ್, ಯುದ್ಧ ನೌಕೆಯನ್ನ ಕಪ್ಪು ಸಮುದ್ರಕ್ಕೆ ಕಳುಹಿಸಲು ಮುಂದಾಗಿತ್ತು.
ಈ ಹಿಂದಿನ ಸೋವಿಯೆಟ್ ರಿಪಬ್ಲಿಕ್ ಭೂ ಭಾಗವನ್ನು ಪರಿಗಣಿಸಿದರೆ, ಈಗ ಪರಿಸ್ಥಿತಿ ಹದಗೆಟ್ಟಿರುವುದು ಪೂರ್ವ ಭಾಗದಲ್ಲಿ ಎಂದು ಹೇಳಬಹುದು. ಸುಮಾರು 100,000 ಸೈನಿಕರ ತುಕಡಿಯನ್ನು ರಷ್ಯಾ ಈ ಗಡಿಯಲ್ಲಿ ನಿಯೋಜಿಸಿದೆ.

ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ನಡೆಸುವ ಬೆದರಿಕೆಯೊಡ್ಡಿದೆ. ಈ ಹಿನ್ನೆಲೆ ರಷ್ಯಾ ಮತ್ತು ಅಮೆರಿಕ ಎರಡೂ ರಾಷ್ಟ್ರಕ್ಕೂ ಬೆಂಬಲ ನೀಡದೇ ಭಾರತ (ತಟಸ್ಥ ನೀತಿ) ರಾಜತಾಂತ್ರಿಕ ನಿಲುವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದರಂತೆ 2014ರಲ್ಲಿ ಯುಕ್ರೇನ್‌ನಿಂದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತು. ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ದೇಶವೊಂದು ಮತ್ತೊಂದು ದೇಶದ ಪ್ರದೇಶ ಸ್ವಾಧೀನಪಡಿಸಿಕೊಂಡಿದ್ದು ಇದೇ ಮೊದಲಾಗಿತ್ತು.

ಉಕ್ರೇನ್ ಬೆಂಬಲಕ್ಕೆ ಅಮೆರಿಕ, ಜಪಾನ್, ಹಂಗೇರಿ, ಬಲ್ಗೇರಿಯಾ, ಫ್ರಾನ್ಸ್​ ಸೇರಿದಂತೆ ಅನೇಕ ರಾಷ್ಟ್ರಗಳು ನಿಂತಿವೆ. ಆದರೆ, ಭಾರತ ರಷ್ಯಾ ಮತ್ತು ಯುನೈಟೆಡ್ ಅಮೆರಿಕದೊಂದಿಗೆ ನವದೆಹಲಿಯ ಸಮೀಕರಣ ಒಪ್ಪಂದ ಮಾಡಿಕೊಂಡಿರುವುದರಿಂದ ತಟಸ್ಥವಾಗಿ ಉಳಿಯುವ ಸಾಧ್ಯತೆಯಿದೆ.

ಈ ಮೂಲಕ ರಷ್ಯಾವನ್ನು ಅಸಮಾಧಾನಗೊಳಿಸುವುದಿಲ್ಲ ಅಥವಾ ಅಮೆರಿಕವನ್ನು ನಿರಾಶೆಗೊಳಿಸುವುದಿಲ್ಲ. 2014 ರಲ್ಲಿ ರಷ್ಯಾ ಕ್ರಿಮಿಯಾವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಾಗ ನವದೆಹಲಿಯು ಈ ಕ್ರಮವನ್ನು ಟೀಕಿಸಲಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತ ಎಂದು ಜೆಎನ್‌ಯು ಸ್ಕೂಲ್ ಆಫ್ ರಷ್ಯನ್ ಮತ್ತು ಸೆಂಟ್ರಲ್ ಏಷ್ಯನ್ ಸ್ಟಡೀಸ್​ನ ಡಾ. ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತ ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಇದನ್ನು ವಿರೋಧಿಸಿರುವ ರಷ್ಯಾ ನ್ಯಾಟೋಗೆ ಉಕ್ರೇನ್​ ಸೇರಿಸಿಕೊಳ್ಳದಂತೆ ಭರವಸೆ ನೀಡುವಂತೆ ಅಮೆರಿಕ​ ಬಳಿ ಕೇಳಿದೆ. ಆದರೆ, ಈ ಮನವಿಯನ್ನು ಜೋ ಬೈಡನ್​​​ ತಿರಸ್ಕರಿಸಿದ್ದಾರೆ. ಹೀಗಾಗಿ ಉಕ್ರೇನ್​ ಮೇಲೆ ಯುದ್ಧ ಸಾರಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಸಿದ್ಧತೆ ನಡೆಸುತ್ತಿದೆ.

ಅಪಾರ ಪ್ರಮಾಣದ ಸೇನೆಯನ್ನ ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ.

Recommended Video

ಇದಪ್ಪ ಕನ್ನಡಿಗನ ಅದೃಷ್ಟ ಅಂದ್ರೆ !! | Oneindia Kannada

ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

English summary
Ukraine crisis not some distant trouble in faraway land; it will present India with toxic choices and deep-seated consequences.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X