ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್-ರಷ್ಯಾ ಸಂಧಾನ: ಯುರೋಪಿಯನ್ ನಾಯಕರೊಂದಿಗೆ ಬೈಡನ್ ಚರ್ಚೆ

|
Google Oneindia Kannada News

ಕೀವ್, ಮಾರ್ಚ್ 29: ನ್ಯಾಟೋ ಸದಸ್ಯತ್ವವನ್ನು ಪಡೆದುಕೊಳ್ಳುವುದರ ಬದಲಿಗೆ ತಟಸ್ಥ ನಿಲುವು ಹೊಂದುವ ಬಗ್ಗೆ ಉಕ್ರೇನ್ ನಿಯೋಗ ಒಪ್ಪಿಕೊಂಡಿದೆ. ಇದರಿಂದಾಗಿ ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಯನ್ನು ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಈ ಸಂಧಾನ ಮಾತುಕತೆಯ ಬೆಳವಣಿಗೆ ಮಧ್ಯೆಯೇ ಯುಎಸ್ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುನೈಟೆಡ್ ಕಿಂಗ್‌ಡಮ್ ನಾಯಕರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Breaking: ಉಕ್ರೇನ್-ರಷ್ಯಾ ನಡುವಿನ ಸಂಧಾನ ಯಶಸ್ವಿBreaking: ಉಕ್ರೇನ್-ರಷ್ಯಾ ನಡುವಿನ ಸಂಧಾನ ಯಶಸ್ವಿ

ಬೈಡೆನ್ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಓಲಾಫ್, ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆೆಗೆ ಸಭೆ ಕರೆಯಲಾಗಿದೆ ಎಂದು ಶ್ವೇತಭವನ ಹೇಳಿದೆ.

Ukraine agree to neutral status; US President Joe Biden discuss with European leaders

ತಟಸ್ಥ ನಿಲುವು ಹೊಂದಲು ಒಪ್ಪಿದ ಉಕ್ರೇನ್:

ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗಳ ಮಧ್ಯೆ ಈ ನ್ಯಾಟೋ ರಾಷ್ಟ್ರಗಳು ಮಂಗಳವಾರದಂದು ಸಭೆ ನಡೆಸಿದವು. ಉಕ್ರೇನಿಯನ್ ನಗರಗಳಾದ ಕೀವ್ ಮತ್ತು ಚೆರ್ನಿಹಿವ್ ಬಳಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿತಗೊಳಿಸುವುದಾಗಿ ಮಾಸ್ಕೋ ಭರವಸೆ ನೀಡಿತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ತನ್ನ ಪ್ರದೇಶವನ್ನು ಉಳಿಸಿಕೊಂಡು ಅಂತಾರಾಷ್ಟ್ರೀಯ ಭದ್ರತಾ ಖಾತರಿಗಳೊಂದಿಗೆ ತಟಸ್ಥ ನಿಲುವು ಹೊಂದುವ ಬಗ್ಗೆ ಪ್ರಸ್ತಾಪಿಸಿತು.

ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಸುತ್ತಮುತ್ತಲಿನ ಮಿಲಿಟರಿ ಚಟುವಟಿಕೆಯನ್ನು ತೀವ್ರವಾಗಿ ಕಡಿತಗೊಳಿಸಲು ರಷ್ಯಾ ನಿರ್ಧರಿಸಿದೆ ಎಂದು ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮಾತುಕತೆಯ ನಂತರ ರಕ್ಷಣಾ ಸಚಿವರೊಬ್ಬರು ಹೇಳಿದ್ದಾರೆ.

ಉಕ್ರೇನ್ ಪರವಾಗಿ ರೋಮನ್ ಅಬ್ರಮೊವಿಚ್ ಸಂಧಾನ:

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿಗೆ ಸ್ಪಂದಿಸಿದ ರೋಮನ್ ಅಬ್ರಮೊವಿಚ್ ಸಂಧಾನ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಕಳೆದ ಫೆಬ್ರವರಿ 24ರಂದು ರಷ್ಯಾ ಘೋಷಿಸಿದ ಯುದ್ಧಕ್ಕೆ ಅಂತ್ಯ ಹಾಡುವಂತೆ ಸಂಧಾನಕ್ಕೆ ಮುಂದಾದರು. ಟರ್ಕಿಯ ಇಸ್ತಾಂಬುಲ್, ರಷ್ಯಾ ರಾಜಧಾನಿ ಮಾಸ್ಕೋ ಹಾಗೂ ಉಕ್ರೇನ್ ರಾಜಧಾನಿ ಕೀವ್ ನಡುವಿನ ಸಂಧಾನದ ಸಂದೇಶಗಳನ್ನು ಪರಸ್ಪರ ಆಯಾ ರಾಷ್ಟ್ರದ ಅಧ್ಯಕ್ಷರಿಗೆ ತಲುಪಿಸುವ ಕಾರ್ಯವನ್ನು ಮಾಡಿದರು.

ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬರೆದಿರುವ ಶಾಂತಿ-ಸಂಧಾನದ ಪತ್ರವನ್ನು ಸಂಧಾನಕಾರ ರೋಮನ್ ಅಬ್ರಮೊವಿಚ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೀಡಿದರು. ಉಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವಂತೆ ಸಂಧಾನ ಮಾತುಕತೆಗೆ ಮುಂದಾದರು. ಆದರೆ, ಈ ವೇಳೆ ಕೆರಳಿದ ಪುಟಿನ್, ಆ ಉಕ್ರೇನ್ ಅಧ್ಯಕ್ಷರನ್ನು ನಾನು ಸೋಲಿಸಿಯೇ ತೀರುತ್ತೇನೆ ಎಂದು ಗುಡುಗಿದ್ದಾರೆ ಎಂಬುದಾಗಿ ವರದಿಯಾಗಿತ್ತು.

ಪುಟಿನ್ ಮತ್ತು ಝೆಲೆನ್ಸ್ಕಿ ಸಂಧಾನ ಸಭೆ:

ಇಸ್ತಾನ್‌ಬುಲ್‌ನಲ್ಲಿ ಹಲವು ಗಂಟೆಗಳ ಕಾಲ ನಡೆದ ಸಭೆಯ ನಂತರ ರಷ್ಯಾದ ಮುಖ್ಯ ಸಮಾಲೋಚಕ ವ್ಲಾಡಿಮಿರ್ ಮೆಡಿಸ್ಕಿ ಇದೊಂದು "ರಚನಾತ್ಮಕ" ಮಾತುಕತೆ ಎಂದು ಹೇಳಿದರು. "ಈ ಸಭೆಯಲ್ಲಿ ಉಕ್ರೇನಿಯನ್ ಸಮಾಲೋಚಕರು ಮಂಡಿಸಿರುವ ಎಲ್ಲ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎದುರಿಗೆ ಇಡಲಾಗುತ್ತದೆ. ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನಿಯನ್ ವಿದೇಶಾಂಗ ಸಚಿವಾಲಯಗಳು ಒಪ್ಪಂದಕ್ಕೆ ಸಮ್ಮತಿಸಿದರೆ, ನಂತರದ ಸಂದರ್ಭದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಮತ್ತೊಂದು ಸುತ್ತಿನ ಸಂಧಾನ ಮಾತುಕತೆ ನಡೆಸುವ ಸಾಧ್ಯತೆಯಿದೆ," ಎಂದು ಮೆಡಿಸ್ಕಿ ಹೇಳಿದರು.

English summary
Ukraine agree to neutral status against Russia; US President Joe Biden discuss with European leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X