• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇತಾಜಿ ಸಾವಿನ ಬಗ್ಗೆ ಬ್ರಿಟಿಷ್ ವೆಬ್ ಸೈಟ್ ಹೊರಹಾಕಿದ ಸತ್ಯವೇನು?

By Mahesh
|

ಲಂಡನ್, ಜ. 10: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ಎಲ್ಲ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಕಾರಣ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲೇ ನೇತಾಜಿ ಸುಭಾಷ್ ಚಂದ್ರಬೋಸ್ ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ವೆಬ್ ಸೈಟ್ ಮಹತ್ವ ವಿಷಯಗಳನ್ನು ಬಹಿರಂಗಪಡಿಸಿದೆ.

ತೈವಾನ್​ನಲ್ಲಿ ಸಂಭವಿಸಿದ ವಿಮಾನ ದುರಂತ (ಆಗಸ್ಟ್ 18, 1945)ದ ಬಳಿಕವೂ ಕೆಲ ದಿನ ನೇತಾಜಿ ಬದುಕಿದ್ದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಬ್ರಿಟನ್ ವೆಬ್​ಸೈಟ್ ಪ್ರಕಟಣೆ ಹೊರಡಿಸಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ವಿಮಾನ ದುರಂತದ ಬಳಿಕ ನೇತಾಜಿ ಬದುಕಿದ್ದರಾದರೂ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.[ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು]

ಹೀಗಾಗಿ ಅವರು ಆಸ್ಪತ್ರೆಯಲ್ಲೇ ಅಸುನೀಗಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವೆಬ್​ಸೈಟ್​ನಲ್ಲಿ ದಾಖಲಾಗಿದೆ. ಆದರೆ, ನೇತಾಜಿ ಅವರ ಅಂತ್ಯಕ್ರಿಯೆ ವಿವರಗಳನ್ನು ಹೊರ ಹಾಕಿಲ್ಲ. ವಿಮಾನ ದುರಂತ ನಡೆದ ಸ್ಥಳಕ್ಕೆ ಬ್ರಿಟಿಷ್ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಲೆ ಹಾಕಿದ ಮಾಹಿತಿ ಆಧಾರದ ಮೇಲೆ ಈ ವರದಿ ಪ್ರಕಟಿಸಲಾಗಿದೆ.[ಬೋಸ್ ‍ಸಂಬಂಧಿಸಿದ 64 ರಹಸ್ಯ ಫೈಲ್ಸ್ ಬಹಿರಂಗ]

‘ಭಾರತಕ್ಕೆ ವಾಪಸ್ ಹೋದ ಬಳಿಕ ನನ್ನ ಕೊನೆಯುಸಿರಿರುವ ತನಕ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇನೆ, ಹಿಂದುಸ್ತಾನ ಖಂಡಿತ ಸ್ವತಂತ್ರವಾಗಲಿದೆ' ಎಂಬುದು ಬಹುಶಃ ನೇತಾಜಿ ಅವರ ಕೊನೆ ವಾಕ್ಯ ಎಂದು ಬೋಸ್ ಫೈಲ್ಸ್. ಇನ್ಫೋ ವೆಬ್ ಸೈಟ್ ಹೇಳಿದೆ. ಇನ್ನಷ್ಟು ವಿವರ ಮುಂದೆ ಓದಿ...

ಜತೆಗಾರ ಹಬೀಬ್ ಉರ್ ರೆಹಮಾನ್​ಗೆ ಹೇಳಿದ ಮಾತು

ಜತೆಗಾರ ಹಬೀಬ್ ಉರ್ ರೆಹಮಾನ್​ಗೆ ಹೇಳಿದ ಮಾತು

"Jab Apney Mulk Wapis Jayen To Mulki Bhaiyon Ko Batana Ki Mein Akhri Dam Tak Mulk Ki Azadi Ke Liyay Larta Raha Hoon; Woh Jangi Azadi Ko Jari Rakhen. Hindustan Zaroor Azad Hoga, Oos Ko Koi Gulam Nahin Rakh Sakta] ಎಂದು ನೇತಾಜಿ ತನ್ನ ಜತೆಗಾರ ಹಬೀಬ್ ಉರ್ ರೆಹಮಾನ್​ಗೆ ಕೊನೆ ಬಾರಿ ಹೇಳಿದ್ದರು

ಘಟನೆ ದಿನ ನಡೆದಿದ್ದೇನು? ನೇತಾಜಿ ಉಳಿದಿದ್ದು ಹೇಗೆ?

ಘಟನೆ ದಿನ ನಡೆದಿದ್ದೇನು? ನೇತಾಜಿ ಉಳಿದಿದ್ದು ಹೇಗೆ?

ವೆಬ್ ಸೈಟ್ ಕಡತಗಳ ಪ್ರಕಾರ ಸುಭಾಷ್​ಚಂದ್ರ ಬೋಸ್ ಜತೆ ಅವರ ಬೆಂಬಲಿಗರು ಮತ್ತು ವಿಮಾನ ಸಿಬ್ಬಂದಿ ಸೇರಿ 12ರಿಂದ 13 ಜನರಿದ್ದರು. 18 ಆಗಸ್ಟ್ 1945ರಲ್ಲಿ ಜಪಾನ್ ಸೇನಾ ಮುಖ್ಯಸ್ಥ ಲೆ.ಜ. ಸುನಮಸಾ ಶಿಡೈ ಕೂಡ ವಿಮಾನದಲ್ಲಿದ್ದರು. ಹಿಟೊ-ತೈಪೆ-ಡೇರನ್ ಮಾರ್ಗದ ಮೂಲಕ ಜಪಾನ್ ರಾಜಧಾನಿ ಟೊಕಿಯೊ ತಲುಪುವ ಕಾರ್ಯಕ್ರಮ ನಿಗದಿಯಾಗಿತ್ತು.

ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು

ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು

ವಿಮಾನ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ದೊಡ್ಡ ಸ್ಫೋಟದೊಂದಿಗೆ ವಿಮಾನದ ಪ್ರೊಪೆಲರ್ ಕಳಚಿತು. ರನ್ ವೇ ನಿಂದ 100 ಮೀಟರ್ ದೂರದಲ್ಲಿ ವಿಮಾನ ಬೆಂಕಿಗೆ ಆಹುತಿಯಾಯಿತು. ವಿಮಾನದ ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು. ಆದರೆ, ಬೆಂಕಿಗೆ ಅವರ ದೇಹದ್ ಭಾಗ ಸುಟ್ಟು ಹೋಗಿತ್ತು ಎಂದು ಬೋಸ್ ಜತೆ ಪ್ರಯಾಣಿಸುತ್ತಿದ್ದ ಕರ್ನಲ್ ಹಬೀಬ್ ಉರ್ ರೆಹಮಾನ್ ಹೇಳಿದ್ದಾರೆ.

ನೇತಾಜಿ ಸಾವಿನ ನಿಗೂಢತೆ- ಭಾರತಕ್ಕೆ ಸ್ವಾತಂತ್ರ್ಯ

ನೇತಾಜಿ ಸಾವಿನ ನಿಗೂಢತೆ- ಭಾರತಕ್ಕೆ ಸ್ವಾತಂತ್ರ್ಯ

ಘಟನೆಯಾದ 5 ತಿಂಗಳ ನಂತರ 1946ರ ಜನವರಿಯಲ್ಲಿ ಮಹಾತ್ಮಾ ಗಾಂಧೀಜಿ ಅವರು 'ನೇತಾಜಿ ಬದುಕಿದ್ದಾರೆ. ಸೂಕ್ತ ಸಮುಯದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ' ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಬಗ್ಗೆ ನೇತಾಜಿ ಹೇಳಿದ ಮಾತುಗಳು ಅಲ್ಲಲ್ಲಿ ಉಲ್ಲೇಖವಾಗುತ್ತದೆ. ಭಾರತ ಕೂಡಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿರುತ್ತದೆ. ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಿದ್ದು ಹೇಗೆ ಇನ್ನೂ ತಿಳಿದಿಲ್ಲ.

ಗೊಂದಲ ಸೃಷ್ಟಿಸಿದ್ದು ಮಹಾತ್ಮಾ ಗಾಂಧೀಜಿಯೇ?

ಗೊಂದಲ ಸೃಷ್ಟಿಸಿದ್ದು ಮಹಾತ್ಮಾ ಗಾಂಧೀಜಿಯೇ?

1946ರ ಮಾರ್ಚ್‌ನಲ್ಲಿ ಗಾಂಧೀಜಿ 'ಹರಿಜನ್' ಪತ್ರಿಕೆಯಲ್ಲಿ ' ನೇತಾಜಿ ಬದುಕಿರಬಹುದು ಅಂತಾ ತಮಗೆ ಭಾವನೆ ಬರುವುದು ಸಹಜ. ಅದರೆ, ನೇತಾಜಿ ಬದುಕಿರಬಹುದು ಎಂದಿದ್ದ ತಮ್ಮ ಮಾತನ್ನು ಮರೆತುಬಿಡಿ. ನೇತಾಜಿ ಬದುಕುಳಿದಿಲ್ಲ. ತಮ್ಮನ್ನೆಲ್ಲಾ ಅಗಲಿದ್ದಾರೆ.. ಎಂದು ದೇಶದ ಜನತೆಗೆ ಮನವಿ ಮಾಡುತ್ತಾರೆ. ಹೀಗಾಗಿ ನೇತಾಜಿ ಸಾವಿನ ನಿಗೂಢತೆ ಮುಂದುವರೆಯುತ್ತದೆ.

English summary
A British website, set up to catalogue the last days of Netaji Subhas Chandra Bose, has released what it claims are eyewitness accounts of the day he was reportedly killed in a plane crash in Taiwan on August 18, 1945.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more